ಬಿಸಿ ಬಿಸಿ ಸುದ್ದಿ

ಭಾರತದಲ್ಲಿ ವೃದ್ಧಾಶ್ರಮ ಬೆಳವಣಿಗೆ ವಿಷಾಧ

ಕಲಬುರಗಿ: ತಂದೆ ತಾಯಿಯರನ್ನು ದೇವತೆ ಸ್ಥಾನದಲ್ಲಿ ಪೂಜಿಸುವ ಭಾರತದಲ್ಲಿ ವೃದ್ಧಾಶ್ರಮ ತಲೆ ಎತ್ತುತ್ತಿರುವುದ ವಿಷಾದ ಸಂಗತಿ ಎಂದು ವಿಕಾಸ ಅಕಾಡೆಮಿಯ ಮಾರ್ಥಂಡ ಶಾಸ್ತ್ರಿ ಹೇಳಿದರು.

ನಗರದ ಜೇವರ್ಗಿ ಕಾಲೋನಿ ರಾಯರ ಮಠದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಹಿರಿಯ ವಿಪ್ರ ದಂಪತಿಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತಣಾಡಿದ ಅವರು, ಹಿರಿಯರನ್ನು ಗೌರವಿಸುವ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ಯುವ ಪೀಳಿಗೆ ಹಿರಿಯರನ್ನು ಗೌರವಿಸುತ್ತಿಲ್ಲ ಇದಕ್ಕೆ ಯುವಕರಲ್ಲಿ ಸಂಸ್ಕಾರದ ಕೊರತೆಯೇ ಕಾರಣವಾಗಿದೆ. ಪರೀಕ್ಷೆಯಲ್ಲಿ ಶೇ.೯೮ ರಷ್ಟು ಅಂಕ ಪಡೆದು ಉತ್ತೀರ್ಣರಾಗುತ್ತಿರುವ ವಿದ್ಯಾರ್ಥಿಗಳು ಜೀವನ ವೆಂಬ ಪರೀಕ್ಷೆಯಲ್ಲಿ ಫೇಲಾಗುತ್ತಿದ್ದಾರೆ. ಜೀವನ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾದರೆ ನಮ್ಮ ಮಕ್ಕಳಿಗೆ ಸಂಸ್ಕಾರ, ಮಾನವೀಯ ಮೌಲ್ಯ, ವ್ಯಕ್ತಿತ್ವ ವಿಕಾಸನದಂಥ ಶಿಕ್ಷಣ ನೀಡಬೇಕು ಎಂದು ಪಾಲಕರಿಗೆ ಸಲಹೆ ನೀಡಿದರು.

ಗುರು ಹಿರಿಯರನ್ನು ಗೌರವಿಸುವುದು ಸನಾತನ ಧರ್ಮದ ಆಧ್ಯ ಕರ್ತವ್ಯವಾಗಿದೆ. ಪಾಶ್ಚಿಮಾತ್ಯರಿಗೆ ಸಂಸ್ಕಾರ ಕಲಿಸಿದ್ದೇ ನಾವು. ಜಗತ್ತು ಇನ್ನೂ ಕಣ್ಣು ತೆರದಿರಲಿಲ್ಲ ಆಗ ಭಾರತೀಯರು ಶ್ರೇಷ್ಠತೆಯಿಂದ ಮೆರೆಯುತ್ತಿದ್ದರು. ವಿಶ್ವಕ್ಕೆ ಗುರುವಾದ ಭಾರತದಲ್ಲಿ ಹಿರಿಯರನ್ನು ಮನೆಯಿಂದ ಹೊರಹಾಕುವದು ಸರಿಯಲ್ಲ ಎಂದರು. ಹಿರಿಯರಿಲ್ಲದ ಮನೆ ದೇವರಿಲ್ಲದ ಗುಡಿಯಂತೆ ಎಂಬ ಮಾತು ನಮ್ಮ ಪೂರ್ವಜರು ಹೇಳಿದ್ದಾರೆ. ಅದು ಸತ್ಯವೂ ಆಗಿದೆ. ಮನೆಯಲ್ಲಿ ಹಿರಿಯ ಜೀವಿಗಳಿದ್ದರೆ ಮೊಮ್ಮಕ್ಕಳಿಗೆ ಶ್ಲೋಕ, ನೀತಿ ಪಾಠ ಹೇಳುವ ಮೂಲಕ ಸಂಸ್ಕಾರದ ಬೀಜ ಬಿತ್ತುತ್ತಾರೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಜೇವರ್ಗಿ ಕಾಲೋನಿಯ ರಾಯರ ಮಠದ ಪ್ರಧಾನ ಅರ್ಚಕ ಪಂ. ಗಿರೀಶಾಚಾರ್ಯ ಅವಧಾನಿ, ಅಖಿಲಭಾರತೀಯ ಬ್ರಾಹ್ಮಣ ಮಹಾ ಸಂಘದ ಜಿಲ್ಲಾಧ್ಯಕ್ಷ ರವಿ ಲಾತೂರಕರ್, ಪ್ರಶಾಂತ ಕೊರಳ್ಳಿ, ಖ್ಯಾತ ವೈದ್ಯ ಡಾ. ಎಸ್.ಎಸ್. ಸಿದ್ದಾಪುರಕರ್, ಡಾ. ಪ್ರಹ್ಲಾದ ಬುರ್ಲಿ,ಮುರಲಿಧರ ಕರಲಗಿಕರ,ಲಕ್ಷ್ಮಣ ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ರಘುನಂದನ ದೋತಿಹಾಳ ,ಆನಂದ್ ಕುಲಕರ್ಣಿ, ಇತರರಿದ್ದರು.

ಸಂಘದ ದಕ್ಷಿಣ ವಲಯದ ಅಧ್ಯಕ್ಷ ವಿನಾಯಕ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ವಿನುತ್ ಜೋಶಿ ಸ್ವಾಗತಿಸಿದರು. ಖಜಾಂಚಿ ಅನುಪ ಆಳಂದಕರ ವಂದಿಸಿದರು. ಶ್ವೇತಾ ಸರಾಫ ಹಾಗೂ ಭಾರ್ಗವಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.

ಇಂದು ಹಿರಿಯ ಜೀವಿಗಳನ್ನು ನೋಡಬೇಕಾದರೆ ವೃದ್ಧಾಶ್ರಕ್ಕೆ ಹೋಗುವ ಪರಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿ ಮೊಮ್ಮಕ್ಕಳ ಜತೆಯಲ್ಲಿ ನೆಮ್ಮದಿಯಾಗಿ ಇರಬೇದ ತಂದೆ ತಾಯಿಯಂದಿರು ವೃದ್ಧಾಶ್ರಮದಲ್ಲಿ ಜೀವನ ಸಾಗಿಸುತ್ತಿದ್ದಾರೆ. ವೃದಾಶ್ರಮ ಸಂಸ್ಕೃತಿಗೆ ತೀಲಾಂಜಲಿ ಹಾಕಬೇಕು,ಎಲ್ಲಾ ಹಿರಿಯ ದಂಪತಿಗಳ ತಂದೆ ತಾಯಿಯರಲ್ಲಿ ದೇವರನ್ನು ಕಾಣುವ ಉದ್ದೇಶದಿಂದ ಹಿರಿಯ ದಂಪತಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. – ರವಿ ಲಾತೂರಕರ್, ಅಧ್ಯಕ್ಷರು, ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

22 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago