ಬಿಸಿ ಬಿಸಿ ಸುದ್ದಿ

ಕೊರತೆಗಳಿದ್ದರೂ, ರಾಜ್ಯ ಬಜೆಟ್ ಸ್ವಾಗತಾರ್ಹವಾಗಿದೆ: ಸಿಪಿಐಎಂ ಕೆ ನೀಲಾ ಪ್ರತಿಕ್ರಿಯೆ

ಕಲಬುರಗಿ: 2023-24 ರ ಸಾಲಿನ ರಾಜ್ಯ ಬಜೆಟ್ ನ್ನು ಮುಖ್ಯಮಂತ್ರಿ ಸಿದ್ದ್ರಾಮಯ್ಯನವರು ಇಂಸು ವಿಧಾನ ಸಭೆಯಲ್ಲಿ ಮಂಡಿಸಿದ 3.27. ಲಕ್ಷ ಕೋಟಿ ರೂಗಳ ಬಜೆಟ್ ಕೆಲವು ಕೊರತೆಗಳನ್ನು ಹೊಂದಿದ್ದರೂ ಒಟ್ಟಾರೆ ಸ್ವಾಗತಾರ್ಹವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಕಾರ್ಯದರ್ಶಿ ಕೆ ನೀಲಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳು ಐದು ಗ್ಯಾರಂಟಿಗಳನ್ನು ಈಡೇರಿಸುವುದಕ್ಕೆ ಒತ್ತುಕೊಟ್ಟಿದ್ದಾರೆ. ಅದೇ ರೀತಿ, ಹಿಂದಿನ‌ ಬಿಜೆಪಿ ನೇತೃತ್ವದ ಜನಾದೇಶವಿಲ್ಲದ ಸರಕಾರ ರಾಜ್ಯದ ಎಲ್ಲ ಬಡವರಿಗೆ ಹಾಗೂ ಮಹಿಳೆಯರಿಗೆ ಶಿಕ್ಷಣವನ್ನು ನಿರಾಕರಿಸುವ ದುರುದ್ದೇಶದಿಂದ ಜಾರಿಗೊಳಿಸಿದ್ದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯನ್ನು ಮತ್ತು ರೈತ ವಿರೋದಿ ಏಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ವಾಪಾಸು ಪಡೆದಿರುವುದು ಎಲ್ಲವೂ ಸ್ವಾಗತಾರ್ಹವಾದವುಗಳಾಗಿವೆಯೆಂದು ಪಕ್ಷ ಪರವಾಗಿ ಸ್ವಾಗತಿಸಿದ್ದಾರೆ.

ಗ್ಯಾರಂಟಿಗಳಲ್ಲಿ ಮುಖ್ಯವಾಗಿ ಗೃಹ ಜ್ಯೋತಿ ಯೋಜನೆಯು ಮುಖ್ಯವಾಗಿ ಭಾಗ್ಯಜ್ಯೋತಿ, ಕುಠೀರ ಜ್ಯೋತಿ ಮುಂತಾದ ಜ್ಯೋತಿಗಳ ಫಲಾನುಭವಿಗಳಿಗೆ  ಪ್ರಯೋಜನಕಾರಿಯಾಗಿಲ್ಲವೆಂದು ಈಗಾಗಲೇ ಸಿಪಿಐಎಂ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತಿಳಿಸಿದೆ. ಮುಖ್ಯವಾಗಿ ಹಳೆಯ ಬಾಕಿ ಮನ್ನಾ ಮಾಡದೇ ಮತ್ತು ಅವರ ಯುನಿಟ್ ಬಳಕೆಯ ಮಿತಿಯನ್ನು ರದ್ದು ಮಾಡದೇ ಹೆಚ್ಚಿನ ಪ್ರಯೋಜನವಿಲ್ಲವಾಗಿದೆ ಎಂದು ಸ್ಪಷ್ಠಪಡಿಸಿದೆ. ರಾಜ್ಯದ ಅಭಿವೃದ್ಧಿಗೆ ಮಾರಕವಾದ ವಿದ್ಯುತ್ ಬೆಲೆ ನಿಯಂತ್ರಣದ ಕುರಿತು ಬಜೆಟ್ ಮೌನ ವಹಿಸಿದ್ದು ಬೇಸರ ತಂದಿದೆ ಎಂದು ತಿಳಿಸಿದ್ದಾರೆ.

ಕೃಷಿ ಹಾಗೂ ರಾಜ್ಯದ ಸಭಿವೃದ್ಧಿ ವಿರೋದಿಯಾದ ಮತ್ತು ಕಾರ್ಪೋರೇಟ್ ಲೂಟಿಗೆ ಪೂರಕವಾಗಿದ್ದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ – 2020 ಹಾಗೂ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ – 2020 ಮತ್ತು  ರಾಜ್ಯದ ಕಾರ್ಮಿಕ ವಿರೋಧಿ ಕಾರ್ಖಾನೆಗಳ ತಿದ್ದುಪಡಿ ಕಾಯ್ದೆ ಮುಂತಾದವುಗಳ ಕುರಿತು ಸರಕಾರ ಜಾಣ ಮೌನ ಅನುಸರಿಸಿದ್ದು ಮತ್ತು ರೈತರ ಸಾಲ ಮನ್ನಾ ಕುರಿತಂತೆ ಮತ್ತು ಕೃಷಿರಂಗದ ಕನಿಷ್ಠ ವೇತನ 424 ರೂಗಳನ್ನು ಉದ್ಯೋಗ ಖಾತ್ರಿಗೆ ವಿಸ್ಥರಿಸುವ ಕುರಿತು ಮೌನ ಬಹಿಸಿದ್ದು ನೀರಾಶೆ ಮೂಡಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಒದಗಿಸಲಾದ ಮೊತ್ತವು ಸಮರ್ಪಕವಾಗಿಲ್ಲ.  ಈ ಕೊರತೆಗಳನ್ನು ಈ ಬಜೆಟ್ ಹೊಂದಿದೆ. ಮುಖ್ಯಮಂತ್ರಿಗಳು ಈ ಕುರಿತಂತೆ ಬಜೆಟ್ ನಲ್ಲಿ ಸೇರ್ಪಡೆ ಮಾಡುವುದು ಅಗತ್ಯವಿದೆಯೆಂದು ಸಿಪಿಐಎಂ ಪಕ್ಷ ಒತ್ತಾಯಿಸಿದೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

6 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

6 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

6 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

22 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago