ಬಿಸಿ ಬಿಸಿ ಸುದ್ದಿ

ನಿರಂತರ ಅಧ್ಯಯನ ವ್ಯಕ್ತಿಯನ್ನು ಶ್ರೀಮಂತ ವ್ಯಕ್ತಿತ್ವವನ್ನು ರೊಪಿಸುತ್ತದೆ: ಶಿರವಾಳ

ಸುರಪುರ: ವಿದ್ಯಾರ್ಥಿಗಳು ನಿರಂತರ ಅಧ್ಯಯನದಲ್ಲಿ ತೊಡಗಬೇಕು, ವಿದ್ಯಾರ್ಥಿ ಪುಸ್ತಕಗಳ ಬೆನ್ನತ್ತಬೇಕು, ಓದು ಒಂದು ಕೆಲಸವೆನ್ನದೇ ,ಓದುವದನ್ನು ಬದುಕನ್ನಾಗಿ ಸ್ವೀಕರಿಸಬೇಕು. ನೀವು ಓದಿನಲ್ಲಿ ಶ್ರೀಮಂತನಾದರೇ, ಒಳ್ಳೆ ಅಂಕ ಪಡೆದರೆ, ಜೀವನದಲ್ಲಿ ಶ್ರೀಮಂತರಾಗುತ್ತಿರಿ ಇಲ್ಲದಿದ್ದರೆ ಪಿ.ಯು.ಸಿ ಕನ್ನಡ ಪಠ್ಯಪುಸ್ತಕದಲ್ಲಿಯ ಬೇಸಗರ ಹಳ್ಳಿ ರಾಮಣ್ಣನವರ ಗಾಂಧಿ ಪಾತ್ರದಂತೆ ’ಬಡವರ ಬದುಕು ಜೀವಂತ ಇದ್ದಾಗಲೂ ಈಡೇರಲಿಲ್ಲ, ಸತ್ತಾಗಲೂ ಈಡೇರಲಿಲ್ಲ’ ಎಂಬಂತಾಗಬಾರದೆಂದು ಸಗರ ನಾಡಿನ ಖ್ಯಾತ ಸಂಶೋಧಕರು ಹಾಗೂ ಉಪಖಜಾನೆಯ ಅಧಿಕಾರಿಗಳಾದ ಡಾ. ಮೋನಪ್ಪ ಶಿರವಾಳ ಮಾರ್ಮಿಕವಾಗಿ ಹೇಳಿದರು.

ನಗರದ ರಂಗಮಪೇಟದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಪ್ರಥಮ ಪಿ,ಯು.ಸಿ. ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕಷ್ಟ ಪಟ್ಟು ಓದುವುದಕ್ಕಿಂತ ಇಷ್ಟ ಪಟ್ಟು ಓದಬೇಕು, ಇಷ್ಟಪಟ್ಟು ಓದುವಾಗ, ಓದು ಕಷ್ಟವೆನಿಸುವುದಿಲ್ಲ ನಿಮ್ಮ ಓದು ನಿಮ್ಮ ಜೀವನವನ್ನು ಬದಲಿಸಬಲ್ಲದು, ಓದಿಗೆ ವಯಸ್ಸಿನ ಮಿತಿ ಇಲ್ಲ್ಲ, ಓದುವುದರ ಜೊತೆಗೆ ಬರೆಯುವುದನ್ನು ರೂಢಿಸಿಕೊಳ್ಳಿ, ಓದಿದ್ದನ್ನು ಮನನ ಮಾಡಿಕೊಳ್ಳಬೇಕು, ಬಹು ಸಂಖ್ಯಾತ ವಿದ್ಯಾರ್ಥಗಳು ತಮಗೆ ನೆನಪಿನ ಶಕ್ತಿ ಇಲ ಎನ್ನುತ್ತಾರೆ. ಅದು ಸತ್ಯವಲ್ಲ, ಮಾನವನಿಗೆ ಅಗಣಿತವಾದ ಜ್ಞಾಪಕ ಶಕ್ತಿಯನ್ನು (ಮೆಮರಿ ಕಾರ್ಡ್) ದೇವರು ಸೃಷ್ಠಿಸಿದ್ದಾನೆ. ಮೂರು ಸೆಕೆಂಡ್ ಏನನ್ನಾದರು ಕೇಳಿದರೇ, ಓದಿದರೇ, ನೋಡಿದರೇ, ಮನುಷ್ಯನ ಮೆದುಳಿನಲ್ಲಿ ಸ್ಟೋರೆಜ್ ಆಗುತ್ತದೆ. ದಿನದ ೨೪ ತಾಸು ಸಹ ಮೆದಳು ಕಾರ್ಯನಿರ್ವಹಿಸುತ್ತುದ್ದು, ಸುಮಾರು ೧೨೦೦ ವಿಚಾರಗಳನ್ನು ಮಾಡುತ್ತದೆ.

ಸಮಯ ಅಮೂಲ್ಯವಾದದ್ದು, ಸಮಯವನ್ನು ವ್ಯರ್ಥವಾಗಿ ಹಾಳು ಮಾಡದೇ ,ಸಮಯವನ್ನು ಓದಿನಲ್ಲಿಯೇ ಕಳೆಯಬೇಕು. ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ, ಸ್ವಸಾಮರ್ಥ್ಯದಿಂದ ಮುಂದೆ ಬರಬೇಕು. ಹಣೆ ಬರಹವನ್ನು ನಂಬಿ ಯಾರೂ ಕುಳಿತುಕೊಳ್ಳಬಾರದು. ಆಧುನಿಕ ತಂತ್ರಜ್ಞಾನಗಳಾದ ಟಿ.ವ್ಹಿ, ಮೊಬೈಲ್, ಫೆಸ್ ಬುಕ್, ವಾಟ್ಸ ಅಪ್ ಗಳನ್ನು ಇತಮಿತವಾಗಿ ಬಳಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.

ಇನ್ನೊರ್ವ ಅತಿಥಿಗಳಾದ ಅಬ್ದುಲ್ ರಜಾಕ್ ಭಾಗವಾನ ಮಾತನಾಡುತ್ತಾ ಮಕ್ಕಳ ಮನಸ್ಸು ಮುಗ್ದ. ಮಕ್ಕಳಿಗಾಗಿ ಆಸ್ತಿ ಮಾಡಬಾರದು, ಮಕ್ಕಳನೇ ಆಸ್ತಿ ಮಾಡಬೇಕು. ಶಿಕ್ಷಕರು ಒಳ್ಳೆದ್ದು, ಕೆಟ್ಟದರ ವ್ಯತ್ಯಾಸ ವಿದ್ಯಾರ್ಥಿಗಳಿಗೆ ಹೇಳಿಕೊಡಿ, ಸಮಾಜ ಸೇವೆಯ ಸಂದೇಶ ನೀಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಹ ಪ್ರತಿಭಾವಂತರಿರುತ್ತಾರೆ ಅವರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಕಲಾ ವಿಭಾಗದ ಮಕ್ಕಳಿಗೂ ಸಾಕಷ್ಟು ಅವಕಾಶಗಳಿರುತ್ತವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ಉಪಪ್ರಾಂಶುಪಾಲರು ಗುರುಲಿಂಗಪ್ಪ ಖಾನಾಪುರ, ಗೌಸಿಯಾ ಬೇಗಂ, ವೆಂಕೋಬ, ನಿಂಗನಗೌಡ ಪಾಟೀಲ್ ಉಪನ್ಯಾಸಕರು ಉಪಸ್ಥಿತರಿದ್ದರು. ಬಸವರಾಜ ಕೊಡೇಕಲ್ ಸಮಾರಂಭದ ವೇದಿಕೆಯಲ್ಲಿದ್ದರು. ಅರುಣಮ್ಮ ಚಿನ್ನಾಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಕುಂತಲಾ ಜಾಲವಾದಿ ಅತಿಥಿಗಳನ್ನು ಪರಿಚಯಿಸಿದರು. ಅಬ್ದುಲ್ ಅಜೀಜ಼್ ಆಲಂಪುರ ಸ್ವಾಗತಿಸಿದರು. ಮಹಮ್ಮದ್ ಮಶಾಖ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

10 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

20 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

20 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

20 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago