ಹಿರೇಕೋಡಿಯಲ್ಲಿ ಜೈನ ಮುನಿ ಹತ್ಯೆ ಘಟನೆ ಖಂಡಿಸಿ ಮೌನ ಪ್ರತಿಭಟನೆ

ಸುರಪುರ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರನಂದಿ ಮಹರಾಜರ ಹತ್ಯೆ ಮಾಡಿದ ಕೊಲೆಗಡುಕರಿಗೆ ಗಲ್ಲು ಶಿಕ್ಷೆಯನ್ನು ನೀಡುವಂತೆ ಜೈನ ವರ್ಧಮಾನ ಸ್ಥಾನಕವಾಸಿ ಶ್ರಾವಕ ಸಂಘದ ಪ್ರಮುಖ ಕಿಶೋರಚಂದ ಜೈನ್ ಆಗ್ರಹಿಸಿದರು.

ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರನಂದಿ ಮಹರಾಜರನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿ, ಶರೀರವನ್ನು ಹಿಂಸಾತ್ಮಕ ರೀತಿಯಲ್ಲಿ ವಿಕೃತಗೊಳಿಸಿ ಕೊಲೆ ಮಾಡಿರುವ ಘಟನೆಯನ್ನು ಖಂಡಿಸಿ ತಾಲೂಕು ಜೈನ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಇಂತಹ ಕೃತ್ಯವನ್ನು ಸಕಲ ಜೈನ ಸಮಾಜ, ಜೈನ ಮಠಗಳು ಮತ್ತು ಎಲ್ಲ ಮಠಾಧೀಶರು ಖಂಡಿಸಿದ್ದಾರೆ.ಮುನಿ ಹತ್ಯಾ ದೋಷ ಮಹಾ ಪಾಪವಾಗಿರುತ್ತದೆ. ದಯವೇ ಧರ್ಮದ ಮೂಲವೆಂದು ಲೋಕದ ಎಲ್ಲ ಜೀವಿಗಳಲ್ಲಿಯೂ ಸಮತಾ ಭಾವನೆಯನ್ನು ಹೊಂದಿದ್ದ ಭಗವಾನ ಮಹಾವೀರರ ಮೂಲ ಸಂದೇಶವಾದ ಬದುಕು, ಬದುಕಲು ಬಿಡು ಮತ್ತು ಜೀವಿಗೆ, ಜೀವಿ ನೆರವು ಎಂಬ ತತ್ವ ಸಿದ್ಧಾಂತವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕುತ್ತಿರುವ ದಿಗಂಬರ ಜೈನ ಮುನಿಗಳು ಜೈನ ಧರ್ಮದ ಅನುಯಾಯಿಗಳು,ಆಧ್ಯಾತ್ಮದ ಪ್ರವರ್ತಕರು. ಅಹಿಂಸೆಯನ್ನು ಪ್ರತಿಪಾದನೆ ಮಾಡುವವರು, ಶಾಂತಿಪ್ರಿಯರು ಎಂದು ತಿಳಿಸಿದರು.

ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರನಂದಿ ಮಹರಾಜರ ಹತ್ಯೆ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು.ಜೈನ ಧರ್ಮದ ಸಾಧು, ಸಂತರಿಗೆ, ಮಾತೆಯರಿಗೆ ಇಂತಹ ಅಹಿತಕರ ಮತ್ತು ಹಿಂಸಾತ್ಮಕ ಘಟನೆಗಳು ನಡೆಯದಂತೆ ವಿಶೇಷ ಕಾನೂನು ರೂಪಿಸಿ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಜಿವೈಡಿಸಿಸಿ ಬ್ಯಾಂಕ್ ಪ್ರಭಾರಿ ಅಧ್ಯಕ್ಷ ಡಾ.ಸುರೇಶ್ ಸಜ್ಜನ್ ಮಾತನಾಡಿ,ಹಿರೇಕೋಡಿಯಲ್ಲಿ ಜೈನ ಮುನಿಗಳನ್ನು ಹತ್ಯೆ ಮಾಡಿರುವ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ,ಕೂಡಲೇ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಇದಕ್ಕು ಮುನ್ನ ನಗರದ ಜೈನ ಮಂದಿರದಲ್ಲಿ ಸಭೆ ನಡೆಸಿ ಮುನಿಗಳ ಆತ್ಮಕ್ಕೆ ಶಾಂತಿ ಕೋರಿ ಸಭೆ ನಡೆಸಿ ಮೌನಾಚರಣೆ ನಡೆಸಲಾಯಿತು.ನಂತರ ತಹಸೀಲ್ದಾರ ಕಚೇರಿ ವರೆಗೆ ಮೌನ ಮೆರವಣಿಗೆ ನಡೆಸಿ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಮೂಲಕ ಸಲ್ಲಿಸಲಾಯಿತು.

ಜೈನ ಶ್ವೇತಾಂಬರ ಮೂರ್ತಿ ಪೂಜಕ ಸಂಘದ ಮೋಹನಲಾಲ ಜೈನ, ಜೈನ ದಿಗಂಬರ ಸಂಘದ ಆನಂದ ವಿದ್ಯಾಸಾಗರ ಗಡಗಡೆ, ಸುರೇಶ ಬಪ್ಪರಗಿ ಜೈನ್, ಸಮಾಜದ ಮಹಾವೀರಚಂದ ಅಂಚಲಿಯ, ಸರದಾರಮಲ ಜೈನ,ದೀಲಿಪಕುಮಾರ ಬಾಗಮಾರ, ದೀಲಿಪಕುಮಾರ ಅಂಚಾಲಿಯಾ, ನರೇಶಕುಮಾರ ಅಂಚಾಲಿಯ, ಏವಂತಕುಮಾರ ಸುರಾಣಾ, ಅಜೇಯ ಕುಮಾರ ಬೋಹರಾ, ದಿನೇಶ ರಾಠೋಡ, ಬಾಬುಲಾಲ ಗಾಂ, ರಾಜೇಶ ಜೈನ, ಶಾಂತಿಲಾಲ ಜೈನ, ಕಾಂತಿಲಾಲ ಜೈನ, ಬಾಲಾಜಿ ಧರಕ, ನಯಿಮಲ್ ಜೈನ, ಬಾಲಾಜಿ ಬಂಗ್, ಕೇಶವಕುಮಾರ ಜೈನ್, ಡಾ.ಪವನಕುಮಾರ ಜೋಷಿ, ಡಾ.ರವೀಂದ್ರ ಅಂಡಗಿ, ಬಿರ್ಜು ಗೋಪಾಲಸೇಠ, ಪವನಕುಮಾರ ಕೊಡೇಕಲ್, ಭರತ ಜೈನ, ಮನೀಶ ಕುಮಾರ, ಅಶೋಕ ಸಿಜೆ, ಭದ್ರಿನಾರಾಯಣ ರಾಠಿ, ಕಮಲ ಕಿಶೋರ, ವೀರಶೈವ ಲಿಂಗಾಯತ ಸಮಾಜದ ಚಂದ್ರಕಾಂತ ಕಳ್ಳಿಮನಿ ಸೇರಿ ಇತರರು ಇದ್ದರು.

emedialine

Recent Posts

ಕಲಬುರಗಿ: ಹಜರತ್ ಲಾಡ್ಲೆ ಮಶಾಕ(ರ.ಅ) ದರ್ಗಾದ 669ನೇ ಉರುಸ್ 13 ರಿಂದ

ಕಲಬುರಗಿ: ಇಲ್ಲಿನ ಪ್ರಸಿದ್ಧಿ ಸೂಫಿ ಸಂತ ಹಜರತ್ ಖಾಜಾ ಶೇಖ ಮಗದೂಮ್ ಅಲ್ಲಾವುದ್ದೀನ್ ಅನ್ಸಾರಿ ಚಿಸ್ತಿ ಲಾಡ್ಲೆ ಮಶಾಕ ಅನ್ಸಾರಿ…

3 hours ago

ಪತ್ರಕರ್ತ ಮಣೂರರಿಗೆ ಟಿಎಸ್‍ಆರ್ ಪ್ರಶಸ್ತಿ ಪ್ರದಾನ

ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ'ದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಶ್ರೀಕಾಂತಾಚಾರ್ಯ ಆರ್. ಮಣೂರ ಅವರಿಗೆ ಬುಧವಾರ ಸಂಜೆ ಬೆಂಗಳೂರಿನಲ್ಲಿ…

4 hours ago

ನವರಾತ್ರಿ ಮಹೋತ್ಸವದ ನಿಮಿತ್ತ ದೇವಿ ಪೂಜಾ ಕಾರ್ಯಕ್ರಮ

ಕಲಬುರಗಿ; ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ…

4 hours ago

ಶ್ರೀ ಭವಾನಿ 1ನೇ ದಿನದ ಪುರಾಣ, ಕಳಸ ರೋಹಣ

ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ…

4 hours ago

ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಅವಶ್ಯಕತೆಯಿಲ್ಲ: ಮುದ್ದಾ

ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ…

4 hours ago

ಅಹಿಂಸೆಯ ದಾರಿಯಲ್ಲಿ ನಡೆದಾಗ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯ

ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು…

5 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420