ಬಿಸಿ ಬಿಸಿ ಸುದ್ದಿ

ಸಂವಿಧಾನದ ರಕ್ಷಣೆಯಾದರೆ ನಮ್ಮ ರಕ್ಷಣೆಯಾಗುತ್ತದೆ; ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು; ಯಾವುದೇ ಸರ್ಕಾರ ಇದ್ದರೂ ಸಹ ಸಂವಿಧಾನದ ಚೌಕಟ್ಟಿನಲ್ಲಿಯೇ ಕೆಲಸ ಮಾಡಬೇಕು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ಈ ರಾಷ್ಟ್ರಕ್ಕೆ ನೀಡಿದ್ದಾರೆ. ಸಂವಿಧಾನದಲ್ಲಿ ಯಾವ ರೀತಿಯಾಗಿ ಕಾರ್ಯನಿರ್ವಹಿಸಬೇಕೆಂದು ತಿಳಿಸಲಾಗಿದೆ. ನಾವೆಲ್ಲರೂ ಸಂವಿಧಾನದ ಚೌಕಟ್ಟಿನಲ್ಲಿಯೇ ಕೆಲಸ ನಿರ್ವಹಿಸಬೇಕು. ಸಂವಿಧಾನದ ವಿರುದ್ಧ ಹಾಗೂ ದ್ಯೇಯೋದ್ದೇಶಗಳ ವಿರುದ್ದವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಸಂವಿಧಾನದ ರಕ್ಷಣೆಯಾದರೆ ನಮ್ಮ ರಕ್ಷಣೆಯಾಗುತ್ತದೆ. ಸಂವಿಧಾನದ ರಕ್ಷಣೆ ನಮ್ಮೆಲ್ಲರ ಜವಬ್ದಾರಿ. ಇದನ್ನು ಆಡಳಿತ ಪಕ್ಷವಿರಲಿ ಮತ್ತು ವಿರೋಧ ಪಕ್ಷವಿರಲಿ ನಾವೆಲ್ಲರೂ ಚಾಚೂ ತಪ್ಪದೇ ಪಾಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಇಂದು ವಿಧಾನಪರಿಷತ್ತಿನ ಕಲಾಪದ ವೇಳೆ ಸನ್ಮಾನ್ಯ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುತ್ತಾ ಮಾತನಾಡಿದ ಮುಖ್ಯಮಂತ್ರಿಗಳು, ಇದೇ ತಿಂಗಳು 3ರಂದು ಸನ್ಮಾನ್ಯ ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದರು. ಈ ವರ್ಷ 2ನೇ ಬಾರಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಸಾಮಾನ್ಯವಾಗಿ ಹೊಸ ವರ್ಷದಲ್ಲಿ ಮೊದಲನೇ ಅಧಿವೇಶನ ನಡೆಯುತ್ತದೆ. ರಾಜ್ಯಪಾಲರು ಸರ್ಕಾರದ ನೀತಿ ನಿಲುವುಗಳು ಮತ್ತೆ ಅವರ ದೂರದೃಷ್ಠಿ, ಮುನ್ನೋಟ ಇವುಗಳನ್ನು ಒಳಗೊಂಡಂತೆ ಸದನದ ಮುಂದೆ ವಿಚಾರಗಳನ್ನು ಮಂಡಿಸುತ್ತಾರೆ.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬಲವಾದ ವಿರೋಧ ಪಕ್ಷ ಇರಬೇಕು ಆಗ ಎಚ್ಚರಿಕೆಯಿಂದ ಕೆಲಸ ಮಾಡಲು ಸಾಧ್ಯ. ನಾನು ಟೀಕೆಗಳಿರಲಿ, ಸಲಹೆಗಳಿರಲಿ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುತ್ತೇನೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಹೊಗಳಿಕೆ ಮತ್ತು ತೆಗಳಿಕೆ ಇರಬೇಕು. ಹೊಗಳಿಕೆ ಮತ್ತು ತೆಗಳಿಕೆ ಎರಡನ್ನೂ ಸಹ ನಾನು ಸ್ವೀಕರಿಸುತ್ತೇನೆ. ವಿರೋಧ ಪಕ್ಷದವರು ನೀಡುವ ಸಲಹೆಗಳನ್ನು ಒಪ್ಪಿ, ದೋಷಗಳನ್ನು ತಿದ್ದಿಕೊಂಡು ಸಮರ್ಥವಾಗಿ ಕೆಲಸ ಮಾಡುತ್ತೇನೆ. ರಾಜಕೀಯವಾಗಿ ತೆಗಳಿದರೂ ಸಹ ಸ್ವೀಕರಿಸಿ ಕೆಲಸ ಮಾಡುತ್ತೇನೆ ಎಂದರು.

ರಾಜ್ಯಪಾಲರು ಈ ಬಾರಿ 2ನೇ ಬಾರಿಗೆ ಯಾಕೆ ಭಾಷಣ ಮಾಡಿದ್ದಾರೆ ಎಂದರೆ, ಮೊದಲನೇ ಬಾರಿ ಅಧಿವೇಶನ ಮುಗಿದ ಬಳಿಕ ಚುನಾವಣೆ ನಡೆದು ಹೊಸ ಸರ್ಕಾರ ಚುನಾಯಿತವಾಗಿದೆ. ಹೊಸ ಸರ್ಕಾರದ ನೀತಿ ನಿಲುವುಗಳನ್ನು ಮಂಡಿಸುವುದು ಸರ್ಕಾರದ ಕರ್ತವ್ಯ. ಆದ್ದರಿಂದ ಎರಡನೇ ಬಾರಿಗೆ ಭಾಷಣ ಮಾಡಿದ್ದಾರೆ. ರಾಜ್ಯಪಾಲರು ಭಾಷಣದಲ್ಲಿ ನಮ್ಮ ಸರ್ಕಾರದ 5 ವರ್ಷಗಳ ಕಾಲದ ರಾಜ್ಯ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅದಕ್ಕೆ ಎರಡೂ ಸದನಗಳಲ್ಲಿ ವಂದನೆಗಳನ್ನು ಸಲ್ಲಿಸುವ ನಿರ್ಣಯ ಮಾಡಬೇಕಾಗುತ್ತದೆ. ಈ ಸದನದಲ್ಲಿ ಯು.ಬಿ. ವೆಂಕಟೇಶ್ ಅವರು ರಾಜ್ಯಪಾಲರ ಭಾಷಣಕ್ಕೆ ಸಮರ್ಥವಾಗಿ ವಂದನಾ ನಿರ್ಣಯಗಳನ್ನು ಮಂಡಿಸಿದ್ದಾರೆ. ಅದಕ್ಕೆ ಬೆಂಬಲಿಸಿ ಎಂ. ನಾಗರಾಜು ಅವರು ಮಾತನಾಡಿದ್ದಾರೆ. ಅಲ್ಲದೇ ಈ ನಿರ್ಣಯದ ಮೇಲೆ ಆಡಳಿತ ಮತ್ತು ವಿರೋಧ ಪಕ್ಷದ 25 ಜನರು ಮಾತನಾಡಿದ್ದಾರೆ. ಬಿ.ಜೆ.ಪಿಯಿಂದ 9 ಜನ ಜೆ.ಡಿ.ಎಸ್ ನಿಂದ 6 ಜನ ಮತ್ತು ಕಾಂಗ್ರೇಸ್ ಪಕ್ಷದಿಂದ 10 ಜನ ತಮ್ಮ ಅಭಿಪ್ರಾಯಗಳನ್ನು ಈ ಸದನದಲ್ಲಿ ವ್ಯಕ್ತಪಡಿಸಿದ್ದಾರೆ.

ತೇಜಸ್ವಿನಿಗೌಡ ಅವರು ಅತಿ ಹೆಚ್ಚು ಸಮಯ ಅಂದರೆ ಸುಮಾರು 1 ಗಂಟೆ 10 ನಿಮಿಷಗಳ ಕಾಲ ತೆಗೆದುಕೊಂಡು ಭಾಷಣ ಮಾಡಿದ್ದಾರೆ. ನಾರಾಯಣಸ್ವಾಮಿ, ಭೋಜೇಗೌಡ ಅವರು 40 ನಿಮಿಷ ಮಾತನಾಡಿದ್ದಾರೆ. ಯು.ಬಿ. ವೆಂಕಟೇಶ್ 50 ನಿಮಿಷ, ಎಂ. ನಾಗರಾಜು 40 ನಿಮಿಷ ಮಾತನಾಡಿದ್ದಾರೆ. ಹಿರಿಯ ಸದಸ್ಯರಾದ ಮರಿತಿಬ್ಬೇಗೌಡ ಅವರು ಸಹ ಮಾತನಾಡಿದ್ದಾರೆ. ಎಲ್ಲ ಸದಸ್ಯರೂ ಸಹ ತಮ್ಮ ಭಾವನೆಗಳನ್ನು, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಎಲ್ಲರಿಗೂ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅದೇ ರೀತಿ ಸಭಾಪತಿಯವರಿಗೂ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.

ನಮ್ಮ ಸರ್ಕಾರವು 5 ವರ್ಷಗಳ ಕಾಲ ಜನರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಉದ್ದೇಶವನ್ನು ಹೊಂದಿದೆ. ಕರ್ನಾಟಕದಲ್ಲಿ 7 ಕೋಟಿ ಜನರಿದ್ದಾರೆ. ಎಲ್ಲರ ಅಭಿವೃದ್ಧಿಯೇ ನಮ್ಮ ಗುರಿ ನುಡಿದಂತೆ ನಡೆಯುವ ಸರ್ಕಾರ ನಮ್ಮದು. ರಾಜ್ಯದ ಎಲ್ಲಾ ಜನರು ನೆಮ್ಮದಿ, ಶಾಂತಿ ಮತ್ತು ಸಮಾನತೆಯಿಂದ ಬದುಕುವ ವ್ಯವಸ್ಥೆ ಮಾಡಬೇಕು. ಕುವೆಂಪು ಅವರು ಹೇಳಿದಂತೆ ಸರ್ವಜನಾಂಗದ ಶಾಂತಿಯ ತೋಟ ಮಾಡಬೇಕು. ಬುದ್ದ ಬಸವ ಅಂಬೇಡ್ಕರ್, ಗಾಂಧೀಜಿ ಅವರು ಹೇಳಿದಂತೆ ಎಲ್ಲರ ಕನಸು ನನಸು ಮಾಡುವ ಉದ್ದೇಶ ಕಾಂಗ್ರೆಸ್ ಪಕ್ಷ ಹೊಂದಿದೆ. ಅದಕ್ಕೆ ಎಲ್ಲರ ಸಹಕಾರ ಬೆಂಬಲ ಬೇಕು. ಜನರ ಮುಂದೆ ಆಶ್ವಾಸನೆ ನೀಡಿದಂತೆ ನಾವು ಐದು ಗ್ಯಾರಂಟಿಗಳನ್ನು ಈಗಾಗಲೇ ಜಾರಿಗೆ ತಂದಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಯ ಆಚಾರ ವಿಚಾರ ಮತ್ತು ಜೀವನ ಮಾರ್ಗಗಳನ್ನು ಗೌರವಿಸುವುದೇ ಸಮಾಜದ ಆಸ್ತಿ. ಅದೇ ಪರಂಪರೆಯಲ್ಲಿ ಎಲ್ಲರನ್ನೂ ನೋಡಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

2 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

2 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

2 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

2 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

3 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

4 hours ago