ಸುರಪುರ: ನಗರದ ಕುಂಬಾರಪೇಟೆಯಲ್ಲಿರುವ ಡಾ:ಬಿ.ಆರ್ ಅಂಬೇಡ್ಕರ್ ಅವರ ವೃತ್ತದಲ್ಲಿರುವ ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ನಾಮಫಲಕದ ಬಳಿ ಯಾವುದೇ ಕಾರಣಕ್ಕೂ ಎಮ್.ಎಸ್.ಐ.ಎಲ್‍ನ ಮದ್ಯದ ಅಂಗಡಿಯನ್ನು ಆರಂಭಿಸಬಾರದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನಾಗವಾರ ಬಣದ ತಾಲೂಕು ಸಂಚಾಲಕ ಹಣಮಂತ ಭದ್ರಾವತಿ ಒತ್ತಾಯಿಸಿದರು.
ಸಂಘಟನೆಯಿಂದ ನಗರದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ,ಕುಂಬಾರಪೇಟೆಯಲ್ಲಿರುವ ಡಾ:ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ ಬಳಿಯಲ್ಲಿ ಮದ್ಯದ ಅಂಗಡಿ ತೆರೆಯಲಾಗುತ್ತಿದೆ ಎನ್ನುವ ಮಾಹಿತಿ ಲಭಿಸಿದೆ.ಸಂವಿಧಾನ ಶಿಲ್ಪಿಯ ನಾಮಫಲಕದ ಬಳಿ ಮದ್ಯದ ಅಂಗಡಿಯನ್ನು ತೆರೆಯುವ ಮೂಲಕ ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡಲಾಗುತ್ತಿದೆ.
ಮದ್ಯ ಸೇವಿಸಿದ ಜನರು ನಶೆಯಲ್ಲಿ ರಾಷ್ಟ್ರ ನಾಯಕರ ನಾಮಫಲಕಗಳಿಗೆ ಅವಮಾನಿಸುವ ಸಾಧ್ಯತೆಯೂ ಇರುತ್ತದೆ,ಅಲ್ಲದೆ ಇದು ಜನನಿಬಿಡ ಸ್ಥಳವಾಗಿದೆ,ಅಲ್ಲದೆ ಈ ಸ್ಥಳದ ಸ್ವಲ್ಪ ದೂರದಲ್ಲಿಯೇ ಶಾಲೆಗಳಿವೆ ಇದರಿಂದ ಶಾಲಾ ಮಕ್ಕಳಿಗೂ ಸಮಸ್ಯೆಯಾಗಲಿದೆ.ಆದ್ದರಿಂದ ನಮ್ಮ ಸಂಘಟನೆ ಈ ಸ್ಥಳದಲ್ಲಿ ಎಮ್.ಎಸ್.ಐ.ಎಲ್ ಮದ್ಯದ ಅಂಗಡಿ ತೆರೆಯುವುದನ್ನು ಬಲವಾಗಿ ಖಂಡಿಸುತ್ತದೆ.ಕೂಡಲೇ ಈ ಸ್ಥಳದಲ್ಲಿ ಆರಂಭಿಸಲಿರುವ ಮದ್ಯದ ಅಂಗಡಿ ಬೇರೆಡೆ ಸ್ಥಳಾಂತರಿಸಬೇಕು ಇಲ್ಲವಾದಲ್ಲಿ ನಮ್ಮ ಸಂಘಟನೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಗೋಪಾಲ ತಳವಾರ,ಜಿಲ್ಲಾ ಸಂಘಟನಾ ಸಂಚಾಲಕರಾದ ಶರಣಪ್ಪ ವಾಗಣಗೇರ,ನ್ಯಾಯವಾದಿ ಅಪ್ಪಣ್ಣ ಗಾಯಕವಾಡ,ತಾಲೂಕು ಸಂಘಟನಾ ಸಂಚಾಲಕ ಮಲ್ಲಪ್ಪ ದೊಡ್ಮನಿ,ರಾಮಚಂದ್ರ ವಾಗಣಗೇರ,ಬಸವರಾಜ ಹೊಸಮನಿ ಕಕ್ಕೇರ,ಮರೆಪ್ಪ ಗೌಂಡಿ ಮಲ್ಲಾ,ಸಂಗಣ್ಣ ಹೆಮ್ಮಡಗಿ,ಸಾಹೇಬಗೌಡ ವಾಗಣಗೇರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…