ಬಿಸಿ ಬಿಸಿ ಸುದ್ದಿ

ಭಾರತೀಯ ಬೌದ್ಧ ಮಹಾ ಸಭಾ ತಾಲೂಕು ಘಟಕದ ಪದಾಧಿಕಾರಿಗಳ ನೇಮಕ

ಕಲಬುರಗಿ: ಭಾರತ ಬೌದ್ಧ ಮಹಾಸಭಾ ರಾಜ್ಯಾಧ್ಯಕ್ಷ ಸೂರ್ಯಕಾಂತ ನಿಂಬಾಳಕರ್ ಅವರ ನೇತೃತ್ವದಲ್ಲಿ ಭಾರತೀಯ ಬೌದ್ಧ ಮಹಾ ಸಭಾ ತಾಲೂಕು ಘಟಕದ ಪದಾಧಿಕಾರಿಗಳ ನೇಮಕ ಮಾಡಲಾಯಿತು.

ನಗರದ ಕಾಂತಾ ಕಾಲೋನಿ ಬುದ್ಧವಿಹಾರದಲ್ಲಿ ರವಿವಾರ ಹಮ್ಮಿಕೊಂಡಿದ್ದ ಭಾರತೀಯ ಬೌದ್ಧ ಮಹಾ ಸಭಾ ಜಿಲ್ಲಾ ಘಟಕದ ಸಭೆಯಲ್ಲಿ ತಾಲೂಕ ಅಧ್ಯಕ್ಷರಾಗಿ ಶಿವಶರಣರ ದೊಡ್ಡಮನಿ, ತಾಲೂಕ ಪ್ರದಾನ ಕಾರ್ಯದರ್ಶಿಯಾಗಿ ರವಿ ಕೋರಿ, ತಾಲೂಕ ಉಪಾಧ್ಯಕ್ಷರಾಗಿ ಪ್ರಭು ಪಟ್ಟಣ, ಖಜಾಂಚಿಯಾಗಿ ಬಾಲಚಂದ್ರ ಔರಾದ್ ಅವರನ್ನು ಸರ್ವಾನುಮತದ ಆಯ್ಕೆ ಮಾಡಲಾಯಿತು.

ಭಾರತೀಯ ಬೌದ್ಧ ಮಹಾ ಸಭಾ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ ಸೋನ್ ಕಾಂಬಳೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಖಾನೆಕರ್, ರಾಜ್ಯ ಕಾರ್ಯಕಾರಣಿ ಸದಸ್ಯರು ಷಣ್ಮುಖ ವಾಘ್ಮೋರೆ, ಸಂಸ್ಕಾರ ವಿಭಾಗದ ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವುಪುತ್ರ ಸಿಂಗೆ, ಜಿಲ್ಲಾ ಘಟಕದ ಕೋಶಾಧಿಕಾರಿ ಸಂಗಮ, ಸಾರಿಗೆ ಇಲಾಖೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಶಿವಶಾಂತ ಮುನ್ನಳಿ, ಭಾರತೀಯ ಬೌದ್ಧ ಮಹಾ ಸಭಾ ಜೀಲ್ಲಾ ಘಟಕದ ಬೋಧಕರು ಮತ್ತು ಹಿರಿಯ ಬೌದ್ಧ ಉಪಾಸಕರಾದ ಮಾರುತಿ ಕಾಂಬಳೆ, ಸೂರ್ಯಕಾಂತ ಯಂಕಂಚಿ, ರಮೇಶ್ ಪಟ್ಟೆದಾರ, ಮಾಜಿಮಹಾಪೌರ ಸೋಮಶೇಖರ ಮೇಲಿನಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

“ನಮ್ಮ ನಡೆ ಬುದ್ಧನ ಕಡೆ”
“ನಮ್ಮ ಸಂಕಲ್ಪ ಪ್ರಬುದ್ಧ ಭಾರತ ನಿರ್ಮಾಣ”
“ನಮ್ಮ ಧ್ವನಿ ಸತ್ಯ ಮೆವೂ ಜಯತೆ”
ನನ್ನ ಆತ್ಮೀಯ ದಮ್ಮಾ ಬಂಧುಗಳೇ.

ಇಂದು ಭಾರತೀಯ ಬೌದ್ಧ ಮಹಾ ಸಭಾ ಜೀಲ್ಲಾ ಘಟಕದ ವತಿಯಿಂದ ಕಲಬುರ್ಗಿ ತಾಲೂಕ ಘಟಕ ಉದ್ಘಾಟನೆ ಸಭೆಯನ್ನು ಮಾಡಲಾಯ್ತು.ಈ ಸಭೆಯ ಅಧ್ಯಕ್ಷತೆಯನ್ನು “ಭಾರತೀಯ ಬೌದ್ಧ ಮಹಾ ಸಭಾ ಜೀಲ್ಲಾ ಘಟಕದ ಅಧ್ಯಕ್ಷರಾದ ಲಕ್ಷ್ಮಣ ಸೋನ್ ಕಾಂಬಳೆ ವಹಿಸಿದ್ದರು ಮತ್ತು ಮುಖ್ಯ ಅತಿಥಿಗಳಾಗಿ ರಾಜ್ಯ ಅಧ್ಯಕ್ಷರಾದ (ಭಾರತ ಬೌದ್ಧ ಮಹಾ ಸಭಾ)ಆಯಷಮನ್. ಸೂರ್ಯಕಾಂತ ಎಸ್ ನಿಂಬಾಳ್ಕರ್ ಅವರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಆಯಷಮಾನ. ಸುರೇಶ್ ಖಾನೆಕರ್ ರವರು ಮತ್ತು ರಾಜ್ಯ ಕಾರ್ಯಕಾರಣಿ ಸದಸ್ಯರು ಆಯುಷ್ ಮಾನ್ ಷಣ್ಮುಖ ವಾಘ್ಮೋರೆರವರು.

ಹಾಗೂ ಅತಿಥಿಗಳಾಗಿ ಜಿಲ್ಲಾ ಘಟಕದ ಉಪಾಧ್ಯಕ್ಷರಾದ (ಸಂಸ್ಕಾರ ವಿಭಾಗದ) ಆಯುಷ್ ಮಾನ್. ಶಿವುಪುತ್ರ ಸಿಂಗೆ ಅವರು ಮತ್ತು ಜಿಲ್ಲಾ ಘಟಕದ ಕೋಶಾಧಿಕಾರಿ ಆದ ಸಂಗಮ ಸರ್ ಅವರು ಮತ್ತು ಜಿಲ್ಲಾ ಘಟಕದ ಕಾರ್ಯದರ್ಶಿ ಗಳಾದ ಶಿವಶಾಂತ ಮುನ್ನಳಿ (ಸಾರಿಗೆ ಇಲಾಖೆ)ಭಾರತೀಯ ಬೌದ್ಧ ಮಹಾ ಸಭಾ ಜೀಲ್ಲಾ ಘಟಕದ ಬೋಧಕರು ಮತ್ತು ಹಿರಿಯ ಬೌದ್ಧ ಉಪಾಸಕರಾದ ಆಯುಷ್ ಮಾನ್ ಮಾರುತಿ ಕಾಂಬಳೆಯವರು ಮತ್ತು ಇನ್ನೊಬ್ಬ ಹಿರಿಯ ಬೋಧಕರು ಮತ್ತು ಉಪಾಸಕರು ಆದ ಸೂರ್ಯಕಾಂತ ಯಂಕಂಚಿಯವರು. ಮತ್ತು ಇನ್ನೊಬ್ಬ ಹಿರಿಯ ಬೋಧಕರು ಮತ್ತು ಉಪಾಸಕರು ಆದ ರಮೇಶ್ ಪಟ್ಟೆದಾರ ಅವರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ನೂತನವಾಗಿ ಈ ಸಭೆಯಲ್ಲಿ ಕಲಬುರ್ಗಿ ತಾಲೂಕ ಘಟಕ ಉದ್ಘಾಟನೆ ಮಾಡಲಾಯಿತು.

ತಾಲೂಕ ಅಧ್ಯಕ್ಷರಾಗಿ. ಶಿವಶರಣರ ದೊಡ್ಡಮನಿ, ತಾಲೂಕ ಪ್ರದಾನ ಕಾರ್ಯದರ್ಶಿಯಾಗಿ ರವಿ ಕೋರಿ, ತಾಲೂಕ ಉಪಾಧ್ಯಕ್ಷರಾಗಿ ಪ್ರಭು ಪಟ್ಟಣ, ಖಜಾಂಚಿಯಾಗಿ. ಬಾಲಚಂದ್ರ ಔರಾದ್ ಅವರೆಲ್ಲರನ್ನೂ ಸರ್ವಾನುಮತದ ಆಯ್ಕೆ ಮಾಡಲಾಗಿದೆ, ಅಂಬಾರಾಯ ಎಸ್ ಹಡಗೀಲ್. ಸಂ. ಕಾರ್ಯದರ್ಶಿ, ಜಿಲ್ಲಾ ಘಟಕ ಕಲಬುರ್ಗಿ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

22 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago