ಕಲಬುರಗಿ: ನಗರಕ್ಕೆ ಸಧ್ಯಕ್ಕೆ ಇರುವ ರಿಂಗ್ ರೋಡ್ ರಸ್ತೆ ವಾಹನಗಳ ದಟ್ಟಣೆಯಿಂದ ಸಂಚಾರ ಕಷ್ಟಕರವಾಗಿದೆ ಎಂದು ಸಂಸದರು ಕೇಂದ್ರ ಸಚಿವರ ಗಮನಕ್ಕೆ ತಂದರು. ಇದಕ್ಕೆ ಸಂಬಂಧಿಸಿದ ವಿಸ್ತೃತ ವರದಿಯನ್ನು ರಾಜ್ಯದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಂದ ಪಡೆದು ಶೀಘ್ರದಲ್ಲಿ ಇದನ್ನು ಅನುಷ್ಠಾನಕ್ಕೆ ತರಲು ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಬೇಕಾಗಿರುವ ಭೂಸ್ವಾಧೀನ ಮಾಡಲು ಅರ್ಧದಷ್ಟು ಪಾಲು (50% state government Share) ಹಾಗೂ ಕಂದಾಯ ಇಲಾಖೆ ಅಡಿಯಲ್ಲಿ ಇರುವ ಸರ್ಕಾರಿ ಜಾಗವನ್ನು ನೀಡಲು ರಾಜ್ಯ ಸಚಿವರಾದ ಸತಿಶ್ ಜಾರಕಿಹೊಳಿ ಅವರಿಗೆ ಕೋರಿದರು.
ಈ ಸಭೆಯಲ್ಲಿ ಕಲಬುರಗಿ ಸಂಸದರಾದ ಡಾ. ಉಮೇಶ್ ಜಾದವ್, ದಾವಣಗೆರೆ ಸಂಸದರಾದ ಜಿಎಂ ಸಿದ್ದೇಶ್ವರ್ ಶಿವಮೊಗ್ಗ ಸಂಸದರಾದ ಬಿ ವೈ ರಾಘವೇಂದ್ರ ಕೊಪ್ಪಳದ ಸಂಸದರಾದ ಕರಡಿ ಸಂಗಣ್ಣ ಹಾಗೂ ತುಮಕೂರು ಸಂಸದರಾದ ಜಿಎಸ್ ಬಸವರಾಜು ಹಾಜರಿದ್ದರು.
ಹುಮ್ನಾಬಾದ್ ಕಲಬುರಗಿ ಬಿಜಾಪುರ್ 4 ಪಥಕ್ಕೆ ಮಾರ್ಪಡಿಸಲು ಸೂಚನೆ: ಹುಮ್ನಾಬಾದ್ ಕಲಬುರಗಿ ಮಧ್ಯ ವಾಹನಗಳ ಸಂಚಾರ ಅತಿ ದಟ್ಟಣೆಯಿಂದ ದಿನಾಲು ಈ ಮಾರ್ಗದ ಮಧ್ಯೆ ಅಪಘಾತಗಳು ಹೆಚ್ಚುಸುತ್ತಿರುವುದರ ಬಗ್ಗೆ ಸಂಸದರು ಸಚಿವರ ಗಮನಕ್ಕೆ ತಂದರು ಹಾಗೆಯೆ ಬಾಪೂರ್ ಕ್ರಾಸನಿಂದ ಚಿಂಚೋಳಿ ಮಾರ್ಗವಾಗಿ ಮೆಹಬೂಬ್ ನಗರ್ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ NH 167N ಕೆಲಸ ಶೀಘ್ರ ಪ್ರಾರಂಭ ಮಾಡಲು ಸಚಿವರ ಗಮನಕ್ಕೆ ತಂದರು ಮತ್ತು ಬಹು ದಿನಗಳಿಂದ ನನಗುದ್ದಿಗೆ ಬಿದ್ದಿರುವ ವಾಡಿ ಜಂಕ್ಷನ್ ಹತ್ತಿರವಿರುವ ರೈಲ್ವೆ ಮೇಲ್ ಸೇತುವೆ ಕಾಮಗಾರಿಯು ಕೂಡ ಪ್ರಾರಂಭಿಸಲು ಕೋರಿದರು. ಇದಕ್ಕೆ ಸ್ಪಂದಿಸಿದ ನಿತಿನ್ ಗಡ್ಕರಿ ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಈ ಕಾಮಗಾರಿಗಳು ಶೀಘ್ರದಲ್ಲಿ ಪ್ರಾರಂಭಿಸಲು ಎಚ್ಚರಿಸಿದರು.
ರಾಷ್ಟ್ರೀಯ ಹೆದ್ದಾರಿ ಮುಖ್ಯಸ್ಥ ಶ್ರೀ ರವಿಪ್ರಸಾದ್, ಬೆಂಗಳೂರು ಪ್ರಾದೇಶಿಕ ಅಧಿಕಾರಿಗಳಾದ ನರೇಂದ್ರ ಶರ್ಮ, ಮುಕೇಶ್ ಕುಮಾರ್ ಹಾಗೂ ರಾಜ್ಯದ ಪಿಡಬ್ಲ್ಯೂಡಿ ಇಲಾಖೆಯ ಕಾರ್ಯದರ್ಶಿ ಹಾಗೂ ಕರ್ನಾಟಕ ಭವನದ ಪ್ರಾದೇಶಿಕ ಆಯುಕ್ತರು ವಂದನ ಗುರುನಾನಿ ಹಾಗೂ ಅನಿಕ ಸಿಬ್ಬಂದಿ ವರ್ಗದವರು ಹಾಜರಿದ್ದರು.
ನಗರದ ದುಬೈ ಕಾಲೋನಿಯಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲು ಎಲ್ ಅಂಡ್ ಟಿ ಕಂಪನಿ ಯವರು ಕೆದರಿರುವ 15 ಅಡಿ ಆಳದ ಹೊಂಡದಲ್ಲಿ ಮತ್ತು ಅಧಿಕಾರಿಗಳ ನಿರ್ಲಕ್ಷತೆಯಿಂದು ಇಂದು ಇಬ್ಬರು ಬಾಲಕರು ಮುಳುಗಿ ಸಾವನಪ್ಪಿರುವ ಬಗ್ಗೆ ಮಾನ್ಯ ಕೇಂದ್ರ ಸಚಿವರ ಗಮನಕ್ಕೆ ಸಂಸದರಾದ ಡಾಕ್ಟರ್ ಉಮೇಶ್ ಜಾದವ್ ರವರು ತಂದರು, ಇದಕ್ಕೆ ಸ್ಪಂದಿಸಿದ ಸಚಿವರು ಶೀಘ್ರದಲ್ಲಿಯೇ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಂಡು ಪೋಷಕರಿಗೆ ಪರಿಹಾರ ನೀಡಲು ರಾಷ್ಟ್ರೀಯ ಹೆದ್ದಾರಿ ಮುಖ್ಯಸ್ಥರು ಹಾಗೂ ಪ್ರಾದೇಶಿಕ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…