ಕಲಬುರಗಿ: ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ಮೊದಲನೆ ಹಂತದ ಮಂತ್ರಿ ಮಂಡಲ ರಚನೆಯಲ್ಲಿ, ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಸಂಪೂರ್ಣವಾಗಿ ನಿರ್ಲಕ್ಷಿಸಿ ಮಲತಾಯಿ ಧೋರಣೆ ಮಾಡಿರುವುದು ಖಂಡನೀಯವಾಗಿದೆ ಎಂದು ಹೈದಾರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಅವರು ಯಡಿಯೂರಪ್ಪ ಸರಕಾರದ ನೂತನ ಸಚಿವ ಸಂಪುಟದ ಕುರಿತು ಪ್ರಕಟಣೆಯಲ್ಲಿ ಪ್ರಸ್ತುತ ಯಡಿಯೂರಪ್ಪನವರ ನೇತೃತ್ವದ ಒಟ್ಟು 17 ಮಂತ್ರಿಗಳಲ್ಲಿ ಆಯ್ಕೆಯಾದ, ಆಯಾ ಪ್ರದೇಶವಾರು ಶಾಸಕರಲ್ಲಿ ಯಡಿಯೂರಪ್ಪನವರನ್ನು ಸೇರಿ ಹಳೆ ಮೈಸೂರಿನಿಂದ 11 ಜನ ಸಂಪುಟದಲ್ಲಿದ್ದರೆ. ಅದೇ ರೀತಿ 6 ಜನ ಮುಂದೈ ಕರ್ನಾಟಕದಿಂದ ಮಂತ್ರಿ ಮಂಡಲದಲ್ಲಿ ಪ್ರತಿನಿಧತ್ವ ಪಡೆದಿದ್ದು, ಹೈದ್ರಾಬಾದ ಕರ್ನಾಟಕ ಪ್ರದೇಶದ 6 ಜಿಲ್ಲೆಗಳಿಂದ ಆಯ್ಕೆಯಾಗಿ ಬಂದ ಶಾಸಕರಲ್ಲಿ ಬೀದರ, ಜಿಲ್ಲೆಯ ಕ್ಷೇತ್ರದ ಶಾಸಕ ಪ್ರಬು ಚವ್ಹಾಣ ಒಬ್ಬರನ್ನು ಮಾತ್ರ ಮಂತ್ರಿ ಮಂಡಲದಲ್ಲಿ ತೆಗೆದುಕೊಂಡಿರುವುದನ್ನು ಗಮನಿಸಿದರೆ ಪ್ರಸ್ತುತ ಯಡಿಯೂರಪ್ಪನವರ ಸರಕಾರವು ಸಹ ನಮ್ಮ ಭಾಗಕ್ಕೆ ಮಲತಾಯಿ ಧೋರಣೆ ತೋರಿಸಿರುವದನ್ನು ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.
ಪ್ರಾದೇಶಿಕ ಅಸಮತೋಲನೆ ನಿವಾರಣೆ ಮಾಡುವ ಬಗ್ಗೆ ಮತ್ತು 371 (ಜೆ) ಕಲಂ, ಪರಿಣಾಮಕಾರಿ ಅನುಷ್ಠಾನ ಮಾಡುವ ಬಗ್ಗೆ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕರಿಸಿದ ನಂತರ ಭರವಸೆ ನೀಡಿದ ಸಿಎಂ ಯಡಿಯೂರಪ್ಪನವರು ನುಡಿದಂತೆ ನಡೆಯದೆ ನಮ್ಮ ಪ್ರದೇಶಕ್ಕೆ ನಿರ್ಲಕ್ಷಿಸಿರುವುದು ಹೈ.ಕ. ಜನಪರ ಸಂಘರ್ಷ ಸಮಿತಿ ಹೈಕ. ಪ್ರದೇಶದ ಜನಮಾನಸದ ಪರವಾಗಿ, ಬಲವಾಗಿ ಖಂಡಿಸುತ್ತದೆ ಎಂದರು.
ಕರ್ನಾಟಕ ರಾಜ್ಯ ರಚನೆಯಾದ ನಂತರ ಬಹುತೇಕ ಮುಖ್ಯಮಂತ್ರಿಗಳು, ಹೈ.ಕ. ಪ್ರದೇಶವೆಂದರೆ ಯಾವೊದೊ ಒಂದು ಯುದ್ಧದಲ್ಲಿ ಗೆದ್ದುಕೊಂಡ ಪ್ರದೇಶದಂತೆ ನಮ್ಮನ್ನು ಎರಡನೇ ದರ್ಜೆ ನಾಗರಿಕರಂತೆ ನಿರ್ಲಕ್ಷ ಭಾವನೆಯಿಂದ ನೋಡುತ್ತಿರುವುದು ಖೇದರಕರ ವಿಷಯವಾಗಿದೆ ಎಂದು ಕಳವಳ ವ್ಯಕ್ತ ಪಡಿಸಿ, ಈ ಬಗ್ಗೆ ಗಂಭೀರವಾಗಿ ಚರ್ಚಿಸಿ ಮುಂದಿನ ಹೋರಾಟದ ರೂಪರೇಶಗಳನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…