ಬಿಸಿ ಬಿಸಿ ಸುದ್ದಿ

ಸುರಪುರ: ಮಾಜಿ ಸಚಿವ ರಾಜಾ ಮದನಗೋಪಾಲನಾಯಕ 3ನೇ ಸ್ಮರಣೋತ್ಸವ

ಸುರಪುರ :ನಗರದ ಕನ್ನಡ ಸಾಹಿತ್ಯ ಸಂಘದ ಕಾರ್ಯಾಲಯದಲ್ಲಿ ಮಾಜಿ ಸಚಿವ ಹಾಗೂ ಸಗರ ನಾಡಿನ ಸಾಂಸ್ಕøತಿಕ ರಾಯಭಾರಿ ಎಂದು ಎಲ್ಲರು ಅಭಿಮಾನದಿಂದ ಕರೆಯುತ್ತಿದ್ದ ರಾಜಾ ಮದನಗೋಪಾಲ ನಾಯಕ ಅವರ 3ನೇ ವರ್ಷದ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಂಶುಪಾಲ ಬಿ.ಪಿ ಹೂಗಾರ ಮಾತನಾಡಿ, ಸಗರನಾಡಿನ ಸಾಂಸ್ಕøತಿಕ ರಾಯಭಾರಿ ಎಂದೇ ಖ್ಯಾತರಾಗಿದ್ದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಅವರು ಮೂರು ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿ ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದರು. ಕಲೆ, ಸಂಗೀತ, ಸಾಹಿತ್ಯ, ಸಾಂಸ್ಕøತಿಕ ಚುಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದ್ದರು. ಅವರ ಸೇವೆ, ಸಾಧನೆಗಳು ಅವಿಸ್ಮರಣೀಯವಾಗಿವೆ ಎಂದರು.

ಶಿಕ್ಷಣಾಭಿಮಾನಿಯಾಗಿದ್ದ ರಾಜಾ ಮದನಗೋಪಾಲ ನಾಯಕ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅದ್ವೀತಿಯವಾಗಿದೆ. ಸಗರನಾಡಿನ ವಿದ್ಯಾರ್ಥಿಗಳಿಗೆ ಸರಕಾರದಿಂದ ಪದವಿ ಕಾಲೇಜು ಮಂಜೂರು ಮಾಡಿಸಿದ್ದರು. ನೀರಾವರಿ, ರಸ್ತೆ, ಆರ್ಥಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದರು.

ಕ್ರೀಡಾಭಿಮಾನಿಯಾಗಿ ಕ್ರೀಡೆಗೆ ಸಾಕಷ್ಟು ಉತ್ತೇಜನೆ ಕೊಟ್ಟು ಸುರಪುರದಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ನಡೆಸಿದ್ದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಗರುಡಾದ್ರಿ ಕಲಾ ಮಂದಿರ, ಕನ್ನಡ ಸಾಹಿತ್ಯ ಸಂಘದ ಭವನ ಅವರ ಅಪೂರ್ವ ಕಾಣಿಕೆಗಳಾಗಿವೆ. ಪರರ ವ್ಯಕ್ತಿತ್ವವನ್ನು ನಮ್ಮ ಬದುಕು ಎಂದು ಸ್ವೀಕಾರ ಮಾಡುವ ಉದಾರ ಮನೋಭಾವ ಅವರದಾಗಿತ್ತು. ಅವರ ಕಾರ್ಯಗಳು ನಮ್ಮೆಲ್ಲರಿಗೆ ಆದರ್ಶವಾಗಿ ಅವರ ದಾರಿಯಲ್ಲಿ ನಾವು ಸಾಗಿ ಅವರ ಆಸೆ, ಕನಸುಗಳನ್ನು ಈಡೇರಿಸಬೇಕು ಎಂದರು.

ಹಿರಿಯ ಸಾಹಿತಿ ಸಿದ್ರಾಮ ಹೊನ್ಕಲ್ ಮಾತನಾಡಿ, ಮಾಜಿ ಸಚಿವ ಆರ್‍ಎಂಜಿ ನಾಯಕ ಅವರದು ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಅಪರೂಪದ ವ್ಯಕ್ತಿತ್ವ. ಪ್ರತಿಯೊಬ್ಬರನ್ನು ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದರು. ಯಾವುದೇ ಬಿಗುಮಾನವಿಲ್ಲದ ಸರಳ, ಆದರ್ಶ ವ್ಯಕ್ತಿತ್ವ ಅವರದಾಗಿತ್ತು. ಜೀವನದಲ್ಲಿ ಅಂತವರು ಸಿಗುವುದು ವಿರಳ. ಜಿಲ್ಲೆಯ ಸಾಂಸ್ಕøತಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ಅವರು ಸಗರನಾಡಿನ ಸಾಂಸ್ಕøತಿಕ ರಾಯಭಾರಿ ಎಂದೇ ಕೀರ್ತಿ ಗಳಿಸಿದ್ದರು ಎಂದು ಹೇಳಿದರು.

ಪಬ್ಲಿಕ್ ರಿಕ್ರಿಯೇಶನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಮಾತನಾಡಿ, ಆರ್‍ಎಂಜಿಎನ್ ಅವರ ಸೇವೆ ಸ್ಮರಿಸಿದರು. ಕಸಾಸಂ ಅಧ್ಯಕ್ಷ ಬಸವರಾಜ ಜಮದ್ರಖಾನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ಜೆ.ಅಗಸ್ಟಿನ್ ಪ್ರಾಸ್ತಾವಿಕ ಮಾತನಾಡಿದರು. ಶ್ರೀಹರಿರಾವ್ ಆದೋನಿ ಪ್ರಾರ್ಥನೆ ಗೀತೆ ಹಾಡಿದರು. ಹೆಚ್.ಠಾರೋಡ್ ನಿರೂಪಿಸಿ ವಂದಿಸಿದರು.

ರಾಜಾ ಮದನಗೋಪಾಲ ನಾಯಕರ ಮೂರ್ತಿ ಸ್ಥಾಪನೆ
ಸುರಪುರ ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ ರಾಜಾ ಮದನಗೋಪಾಲನಾಯಕ ಅವರ ಮೂರ್ತಿ ಸ್ಥಾಪಿಸಲಾಗುವುದು. ಅವರ ಕುರಿತಾದ ಸ್ಮರಣ ಸಂಚಿಕೆ ಕೂಡ ಹೊರ ತರಲಾಗುವುದು ಎಂದು ಕಸಾಸಂ ಉಪಾಧ್ಯಕ್ಷ ಜೆ.ಅಗಸ್ಟಿನ್ ತಿಳಿಸಿದರು.

ಆರ್‍ಎಂಜಿಎನ್ ಅವರ ವ್ಯಕ್ತಿತ್ವ, ಸಂದರ್ಶನ, ಯುವ ದೆಸೆÀಯಿಂದ ಕೊನೆ ಹಂತದವರೆಗಿನ ಚಿತ್ರಗಳು, ನೆನಪುಗಳು ಕುರಿತು ಅನೇಕ ಹಿರಿಯರು, ಆತ್ಮೀಯರ ಅನಿಸಿಕೆಗಳು ಸಂಚಿಕೆಯಲ್ಲಿವೆ. ಸಂಚಿಕೆಯ ಎರಡನೇ ಭಾಗದಲ್ಲಿ ಕೆಲ ಸಂಶೋಧನಾತ್ಮಕ ಲೇಖನಗಳು, ಸಮಗ್ರ ಚಿತ್ರಸಂಪುಟ, ಮೂರನೇ ಭಾಗದಲ್ಲಿ ಅಗಲಿ ಹೋದ ಸುರಪುರ ಸಾಂಸ್ಕøತಿಕ ಲೋಕದ ಅನೇಕ ಹಿರಿಯರ, ಬರಹಗಾರರ, ಕವಿಗಳ ನೆನಪುಗಳನ್ನು ಹಾಕಲಾಗಿದೆ.

ಶ್ರೀನಿವಾಸ ಜಾಲವಾದಿ ಸಂಪಾದಕತ್ವದಲ್ಲಿ ಇದೊಂದು ಅವಿಸ್ಮರಣೀಯ ಸಂಚಿಕೆಯಾಗಲಿದೆ. ಜೆ.ಅಗಸ್ಟಿನ್ ಸಂಪಾದಕತ್ವದಲ್ಲಿ ಸುರಪುರ ಕಸಾಸಂ ನಡೆದು ಬಂದ ದಾರಿ ಕುರಿತು ಗ್ರಂಥ ಹೊರ ತರುತ್ತಿದೆ. ಡಾ.ಸುನಂದಾ ಸಾಲವಾಡಿ ಅವರು ಸಂಶೋಧನಾ ಗ್ರಂಥವಾದ ಹಿಂದೂಸ್ಥಾನಿ ಶಾಸ್ತ್ರಿಯ ಸಂಗೀತಕ್ಕೆ ಉತ್ತರ ಕರ್ನಾಟಕದ ಮಹಿಳೆಯರ ಕೊಡುಗೆ ಎಂಬ ಅಪೂರ್ವವಾದ ಗ್ರಂಥ ಕೂಡ ಸಂಘ ಹೊರ ತರಲಿದೆ.

ಇವು ಮುಂದಿನ ವರ್ಷದವರೆಗಿನ ಯೋಜನೆಗಳಾಗಿದ್ದು, ಈಗಾಗಲೇ ಶೇ.60 ರಷ್ಟು ಸಿದ್ಧತೆಗಳು ಪೂರ್ಣಗೊಂಡಿವೆ. ನಮ್ಮ ತಲೆಮಾರಿನವರೆಗೆ ನಡೆದು ಬಂದ ಅನೇಕ ಸಾಹಿತಿಕ, ಸಾಂಸ್ಕøತಿಕ ಬೆಳವಣಿಗೆಗಳನ್ನು ತಿಳಿಸುವ ಪ್ರಯತ್ನ ಸಂಘದ್ದಾಗಿದೆ ಎಂದು ಜೆ.ಅಗಸ್ಟಿನ್ ಎಂದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

17 mins ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

11 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

11 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

13 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

13 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

13 hours ago