ಬಿಸಿ ಬಿಸಿ ಸುದ್ದಿ

ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣಾ ಅಭಿಯಾನ : ನಾಲ್ಕುಚಕ್ರ ತಂಡ

ಕಲಬುರಗಿ: ನಗರದ ಶರಣಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಕ್ರೀಡಾ ವಸತಿ ಶಾಲೆ ಶರಣ ಶಿರಸಗಿಯಲ್ಲಿ ನಾಲ್ಕುಚಕ್ರ ತಂಡ ಕೈಗೊಂಡಿರುವ “ಸ್ಕೂಲ್ ಬ್ಯಾಗ್ ವಿತರಣಾ ಅಭಿಯಾನ” ಅಂಗವಾಗಿ ಶಾಲಾ ಬ್ಯಾಗ್ ವಿತರಣೆ ಮಾಡಲಾಯಿತು.

ಈ ಶಾಲೆಗೆ ಸುತ್ತಮುತ್ತ ಹಳ್ಳಿಯ ರೈತಾಪಿ ಕುಟುಂಬದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಶಾಲೆಯ ಮನವಿಗೆ ಸ್ಪಂದಿಸಿ ನಾಲ್ಕುಚಕ್ರ ತಂಡ ದಾನಿಗಳ ಸಹಕಾರದೊಂದಿಗೆ ಸ್ಕೂಲ್ ಬ್ಯಾಗ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೆರಿತು.

ನಾಲ್ಕುಚಕ್ರ ತಂಡದ ಮುಖ್ಯಸ್ಥರಾದ ಕಾಲ್ಯಾಣರಾವ್ ಪಾಟೀಲ್ ಕಣ್ಣಿ ಮಾತಾನಾಡಿ, ವಿದ್ಯೆ ಬಹಳ ಮುಖ್ಯವಾದದ್ದು. ಈ ವಿದ್ಯೆಯಿಂದ ಏನು ಬೇಕಾದರೂ ಜೀವನದಲ್ಲಿ ಸಾಧಿಸಬಹುದು. ಯಾರು ವಿದ್ಯಾವಂತ ರಾಗಿರುತ್ತಾರೆ ಅವರು ಸೃಜನಶೀಲತೆ ,ಸಂಸ್ಕಾರ ಒಳ್ಳೆಯ ನಡತೆ. ಒಳ್ಳೆಯ ಗುಣಗಳನ್ನು ರೂಢಿಸಿಕೊಳ್ಳಬೇಕು. ನಿಮ್ಮ ಸಾಧನೆ ಬಹಳ ಮುಖ್ಯ ನೀವು ನಿಮ್ಮ ತಂದೆ-ತಾಯಿಯರಿಗೆ ಗೌರವ ಮತ್ತು ವಿದ್ಯೆ ಕಲಿಸಿದ ಗುರುಗಳಿಗೂ ಒಳ್ಳೆಯ ಗೌರವ ತಂದುಕೊಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ಇದೇ ಸಂದರ್ಭದಲ್ಲಿ ನಾಲ್ಕುಚಕ್ರ ಮುಖ್ಯಸ್ಥರಾದ ಮಹೇಶ್ಚಂದ್ರ ಪಾಟೀಲ್ ಕಣ್ಣಿ ಮಾತನಾಡಿ
ನಾಲ್ಕುಚಕ್ರ ತಂಡ ಸದಾ ಸಾಮಾಜಿಕ ಕಾರ್ಯ ಹಮ್ಮಿಕೊಳ್ಳುತ್ತಾ ಬರುತಿದ್ದು ಕೊಡುವ ಕೈಗಳಿಗೆ ಕೊರತೆಯಿಲ್ಲ ಆದರೆ ವಿದ್ಯಾರ್ಥಿಗಳು ದಾನಿಗಳ ಸಹಾಯವನ್ನು ಸದುಪಹೋಗ ಪಡೆದುಕೊಂಡು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಿ ಇಂತಹ ಸಾಮಾಜಿಕ ಕಾರ್ಯಗಳಿಗೆ ಅರ್ಥಬರುವಂತೆ ಸಾಧಿಸಿ ತೋರಿಸಬೇಕು ಎಂದು ಹೇಳಿದರು.

ಶಾಲೆಯ ಅಧ್ಯಕ್ಷರಾದ ಸಿ ಎನ್ ಬಾಬಳಗಾಂವ್ ಮಾತನಾಡಿ, ನಮ್ಮ ಶಾಲೆಯ ಮಕ್ಕಳಿಗೆ ಭ್ಯಾಗ್ ಗಳ ಅತಿ ಅವಶ್ಯಕತೆ ಇತ್ತು ನಮ್ಮ ಮನವಿಗೆ ಸ್ಪಂದಿಸಿ ಶಾಲಾ ಮಕ್ಕಳಿಗೆ ಬ್ಯಾಗ್ ನೀಡಿರುವುದು ಹರ್ಶದಾಯಕ ಇದೇ ರೀತಿಯಲ್ಲಿ ಉಳ್ಳವರು ಮುಂದೆ ಬಂದು ಸಹಾಯ ಮಾಡಿದರೆ ಯಾವೊಂದು ಮಗು ಕೂಡ ಶಿಕ್ಷಣದಿಂದ ವಂಚಿತರಾಗಲಾರದು ನಾಲ್ಕುಚಕ್ರ ತಂಡದ ಸಮಾಜ ಕಳಕಳಿ ಶ್ಲಾಘಿಸುವಂತದ್ದು.

ನಾಲ್ಕುಚಕ್ರ ಮುಖ್ಯಸ್ಥರಾದ ಮಾಲಾ ಕಣ್ಣಿ ಮಾತನಾಡಿ, ಪ್ರತಿ ವರ್ಷ ನಮ್ಮ ತಂಡದಿಂದ ಜೂನ್ ಜುಲೈ ತಿಂಗಳಲ್ಲಿ ಪುಸ್ತಕ ಅಭಿಯಾನ ಹಾಗು ಸ್ಕೂಲ್ ಬ್ಯಾಗ್ ಅಭಿಯಾನ ಮಾಡುತ್ತ ಬರುತ್ತಿದ್ದೆವೆ… ಇದರಿಂದ ಬಡ ಹಾಗೂ ಗ್ರಾಮಿಣ ಭಾಗದ ಮಕ್ಕಳಿಗೆ ಬಹಳ ಅನುಕೂಲವಗುತ್ತಿದೆ.. ಮುಂದಿನ ದಿನಗಳಲ್ಲಿ ದಾನಿಗಳ ಸಹಾಯದಿಂದ ಸರ್ಕಾರಿ ಶಾಲಾ ಕಟ್ಟಡಗಳಿಗೆ ಬಣ್ಣ ಬಳಿಯುವ ಗುರಿಯನ್ನು ಹೊಂದಿದೆ ದಾನಿಗಳು ಮುಂದೆ ಬಂದು ಸಹಕರಿಸಬೇಕಾಗಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರುಗಳಾದ ಸಿದ್ಧರಾಮ ಮುಗಳಿ, ಸಹ ಶಿಕ್ಷಕಿಯರಾದ ವೈಷ್ಣವಿ ಬಾಬಂಗೊಳ್, ಅನ್ನಪೂರ್ಣ ಪೂಜಾರಿ, ಚಂದಮ್ಮ ವಡಗೇರಿ, ರತಿಕಾ ನನ್ನ, ಗೋದಾವರಿ ಪೂಜಾರಿ, ವಿಜಯಲಕ್ಷ್ಮಿ, ನಾಗೇಶ್ ಅಳ್ಳಗಿ, ನಾಲ್ಕುಚಕ್ರ ತಂಡದ ಸದಸ್ಯರಾದ ವಿಜಯಲಕ್ಷ್ಮಿ ಹೀರೆಮಠ, ಜಯಶ್ರೀ ಜೈನ್, ಪೂರ್ಣಿಮಾ ಕುಲಕರ್ಣಿ, ಸಂಗೀತಾ ಶಿವ ಕೊರಳ್ಳಿ, ನಾಗರಾಜ ಹೆಂಬಾಡಿ, ರಾಹುಲ್ ರಾಠೊಡ್, ಆನಂದತೀರ್ಥ ಜೋಷಿ, ಸುಭಾಶ್ ಮೇತ್ರೆ, ಮೌನೇಶ್ ಬಡಿಗೇರ್ ಇನ್ನಿತರು ಉಪಸ್ಥಿತರಿದ್ದರು.

emedialine

Recent Posts

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…

1 min ago

ಸಂವಿಧಾನವನ್ನು ರಕ್ಷಿಸಲು ಜವಾಬ್ದಾರಿ ಯುವಕರು ಮೇಲಿದೆ : ಹಿರಿಯ ವಕೀಲ ವೈಜನಾಥ ಎಸ್ ಝಳಕಿ

ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…

6 mins ago

ಶ್ರೀಮತಿ ವಿ. ಜಿ. ಪದವಿ ಪೂರ್ವ ಕಾಲೇಜಿನಲ್ಲಿ – ಸಂವಿಧಾನ ದಿನ

ಕಲಬುರಗಿ: ನಗರದ ಪ್ರತಿಷ್ಠಿತ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ-ಪೂರ್ವ ಕಾಲೇಜಿನಲ್ಲಿ ಸಂವಿಧಾನ ದಿನ…

12 mins ago

ಮಹಿಳೆಯರ ಘನತೆ ಹಾಗೂ ಮಾನವ ಮೌಲ್ಯ ಉಳಿಸಿ ಪುಸ್ತಕ ಬಿಡುಗಡೆ

ಶಹಾಬಾದ: ಮಾನವೀಯ ಮೌಲ್ಯಗಳು ವಿದ್ಯಾರ್ಥಿ ಯುವಜನರ ಬೆಳೆಸಿಕೊಂಡು ಉತ್ತಮ ನಾಗರಿಕರಾಗಬೇಕೆಂದು ಎಸ್ಎಸ್ ಮರುಗೋಳ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಕೆ.ಬಿ. ಬಿಲ್ಲವ…

16 mins ago

ಅರಿವಿಂಗೆ ಹಿರಿದು ಕಿರಿದುಂಟೆ ?: ತಿಂಗಳ ಬಸವ ಬೆಳಕು 120 ವಿಶೇಷ ಉಪನ್ಯಾಸ

ಶಹಾಪುರ : 26 : ಚಿಕ್ಕ ವಯಸ್ಸಿನಲ್ಲಿಯೆ ಹಿರಿದಾದ ಜ್ಞಾನವನ್ನು ಹೊಂದಿದ್ದ ಚೆನ್ನಬಸವಣ್ಣ ಷಟಸ್ಥಲ ಜ್ಞಾನಿ ಎಂದು ಕರೆಯಿಸಿಕೊಂಡರು. ಬಸವಣ್ಣನವರ…

21 mins ago

ನಗರಸಭೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಗೆಲುವು

ಶಹಾಬಾದ: ನಗರಸಭೆಯ ವಾರ್ಡ ನಂ.3 ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಾಜೀದ್ ಖಾನ್ ಜಮಾದಾರ ಅವರು ಗೆಲುವು ಸಾಧಿಸಿದ್ದಾರೆ. ನಗರದ…

25 mins ago