ತೊನಸನಹಳ್ಳಿ(ಎಸ್) ಗ್ರಾಪಂ ಅಧ್ಯಕ್ಷೆ ನಿರ್ಮಲ-ಉಪಾಧ್ಯಕ್ಷ ಬೆಳ್ಳಪ್ಪ ಖಣದಾಳ ಆಯ್ಕೆ

ಶಹಾಬಾದ: ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಪಂಯಲ್ಲಿ ಗುರುವಾರ ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಿರ್ಮಲಾ ಶಿವರಾಜ ಮತ್ತು ಉಪಾಧ್ಯಕ್ಷರಾಗಿ ಬೆಳ್ಳಪ್ಪ ಅರ್ಜುನ ಖಣದಾಳ ಆಯ್ಕೆಯಾಗಿದ್ದಾರೆ.

ತೊನಸನಹಳ್ಳಿ(ಎಸ್) ಗ್ರಾಪಂ ತೊನಸನಹಳ್ಳಿ, ತರನಳ್ಳಿ ಹಾಗೂ ಗೋಳಾ(ಕೆ) ಗ್ರಾಮಗಳನ್ನು ಒಳಗೊಂಡಿದ್ದು, ಒಟ್ಟು 22 ಸದಸ್ಯರ ಬಲವನ್ನು ಹೊಂದಿದೆ. ಪರಿಶಿಷ್ಟ ಜಾತಿ ಮಹಿಳೆ ಸ್ಥಾನಕ್ಕೆ ಮೀಸಲಾಗಿದ್ದ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ನಿರ್ಮಲಾ ಶಿವರಾಜ ಮತ್ತು ರಮಾಬಾಯಿ ಸಿದ್ರಾಮಪ್ಪ ನಾಮಪತ್ರ ಸಲ್ಲಿಸಿದರೇ, ಸಾಮನ್ಯ ಸ್ಥಾನಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬೆಳ್ಳಪ್ಪ ಅರ್ಜುನ ಖಣದಾಳ ಮತ್ತು ಉಮಾದೇವಿ ಶಂಕರಲಿಂಗ ನಾಮಪತ್ರ ಸಲ್ಲಿಸಿದರು.

ನಿರ್ಮಲಾ ಶಿವರಾಜ 15 ಮತಗಳನ್ನು ಮತ್ತು ಉಪಾಧ್ಯಕ್ಷ ಬೆಳ್ಳಪ್ಪ ಅರ್ಜುನ ಖಣದಾಳ 15 ಮತ ಪಡೆದು ಗೆಲುವನ್ನು ಸಾಧಿಸಿದರೇ, ಅಧ್ಯಕ್ಷ ಸ್ಥಾನದ ಪ್ರತಿಸ್ಪರ್ಧಿ ರಮಾಬಾಯಿ ಸಿದ್ರಾಮಪ್ಪ 7 ಮತಗಳನ್ನು ಹಾಗೂ ಉಪಾಧ್ಯಕ್ಷ ಸ್ಥಾನದ ಪ್ರತಿಸ್ಪರ್ಧಿ ಉಮಾದೇವಿ ಶಂಕರಲಿಂಗ 7 ಮತಗಳನ್ನು ಪಡೆದು ಸೋಲನ್ನುಭವಿಸಿದ್ದಾರೆ ಎಂದು ಚುನಾವಣಾಧಿಕಾರಿ ತಾ. ಪಂ ಕಾರ್ಯನಿರ್ವಹಣಾಧಿಕಾರಿಯಾದ ಮಲ್ಲಿನಾಥ ರಾವೂರ ತಿಳಿಸಿದ್ದಾರೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಸೇರಿ ಪಟಾಕಿ ಸಿಡಿಸಿ, ಗುಲಾಲ್‍ಎರಚಿ, ಸಿಹಿ ಹಂಚಿಕೊಳ್ಳುವ ಮೂಲಕವಿಜಯೋತ್ಸವ ಆಚರಿಸಿದರು.

ಮುಖಂಡರಾದ ಮರಿಯಪ್ಪ ಹಳ್ಳಿ, ಅಪ್ಪುಗೌಡ ತರನಳ್ಳಿ, ಅಜೀತಕುಮಾರ ಪಾಟೀಲ ಮರತೂರ, ಹಣಮಂತ ಕೊಂಡಯ್ಯ, ಮೀರಲಿ ನಾಗೂರೆ, ದೇವೆಂದ್ರ ಕಾರೊಳ್ಳಿ,ಬಸವರಾಜ ಮದ್ರಿಕಿ, ಮಹಾಲಿಂಗ ಪೂಜಾರಿ,ನಾಗರಾಜ ಕರಣಿಕ್,ಶರಣು ಪೂಜಾರಿ,ಸಮೀರ ಗೋಳಾ, ಗ್ರಾಪಂ ಸದಸ್ಯರಾದ ಮಲ್ಲಣ್ಣ ಮರತೂರ,ಬಸವರಾಜ ಗೊಳೇದ್,ಮಹ್ಮದ್ ಫಯಾಜ್,ಸಿದ್ದು ಸಜ್ಜನ್,ಮುತ್ತಮ್ಮ ಮರತೂರ, ಅವಿನಾಶ ಕೊಂಡಯ್ಯ, ಹಣಮಂತ ಶಾಲಿ ಸೇರಿದಂತೆ ಅನೇಕರು ಇದ್ದರು.

emedialine

Recent Posts

ಎಲೇಕ್ಷನ್’ನಲ್ಲಿ ಗಿಮಿಕ್ ಮಾಡಿ ಮತಪಡೆದುಕೊಳ್ಳುವುದು ಮಾತ್ರ ಗೊತ್ತು; ಮಣಿಕಂಠ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…

17 mins ago

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

4 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

10 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

20 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

22 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

22 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420