ಬಿಸಿ ಬಿಸಿ ಸುದ್ದಿ

ಗ್ರಾ.ಪಂ. ಚುನಾವಣೆ: ಹಲ್ಲೆಗೆ ಶಾಸಕರ ಕುಮ್ಮಕ್ಕು ಆರೋಪ

ಕಲಬುರಗಿ: ಪ್ರಜಾಪ್ರಭುತ್ವದ ಉತ್ಸವವಾದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಯುಪಿ, ಬಿಹಾರ ಹಾಗೂ ಪಶ್ಚಿಮ ಬಂಗಾಳದಂತೆ ದಬ್ಬಾಳಿಕೆ ಮಾಡುವ ಮೂಲಕ ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದವರು ಅಶಾಂತಿ ಉಂಟು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಆರೋಪಿಸಿದ್ದಾರೆ.

ಇದೇ ಆಗಸ್ಟ್ 4ರಂದು ತಾಲೂಕಿನ ಸಾವಳಗಿ ಗ್ರಾಮ ಪಂಚಾಯತ್ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಯುತ್ತಿರುವ ಹಿನ್ನಲೆ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಕುಮಕ್ಕಿನಿಂದ ಅವರ ಬೆಂಬಲಿಗರು ಬಿಜೆಪಿ ಸದಸ್ಯೆ ನಾಗಮ್ಮ ಎಂಬುವರನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಪ್ರತಿರೋದ ತೋರಿದ ಸದಸ್ಯೆ ನಾಗಮ್ಮ ಹಾಗೂ ಅವರ ಪುತ್ರ ಮಲ್ಲಿಕಾರ್ಜುನ ಅವರನ್ನು ಚಾಕು ತೋರಿಸಿ ಬೆದರಿಸಿದಲ್ಲದೆ, ಹಲ್ಲೆ ನಡೆಸಿದ್ದಾರೆ ಇದು ಖಂಡನೀಯ ಎಂದು ಹಾಲಿ ಶಾಸಕರ ವಿರುದ್ದ ಮಾಜಿ ಶಾಸಕ ರೇವೂರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಗುಡುಗಿದರು.

ಪಚ್ಚಿಮ ಬಂಗಾಳದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಡೆದ ಧಂಗೆಯಲ್ಲಿ ಅನೇಕರು ಪ್ರಾಣ ಕಳೆದಕೊಂಡಿದ್ದಾರೆ. ಇದೀಗ ಅಂತಹ ವಾತಾವರಣ ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಸೃಷ್ಟಿಯಾಗಿದೆ. ಇದಕ್ಕೆಲ್ಲ ಶಾಸಕ ಅಲ್ಲಮಪ್ರಭು ಪಾಟೀಲ್ ಹಾಗೂ ಅವರ ಸುಪುತ್ರನ ಕುಮಕ್ಕಿನಿಂದ ಕಾರಣ. ಅಲ್ಲದೇ, ಈ ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಶಾಸಕರಿಂದ ನಡೆದಿದೆ. ಕೂಡಲೇ ಪೆÇಲೀಸ್ ಕಮಿಷನರ್ ಅವರು ಈ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಪೆÇಲೀಸ್ ಕಮಿಷನರ್ ಚೇತನ್.ಆರ್ ಅವರಿಗೆ ಒತ್ತಾಯಿಸಿದ್ದಾರೆ.

ಶಾಸಕ ಅಲ್ಲಮಪ್ರಭು ಪಾಟೀಲ್ ಬೆಂಬಲಿಗರಾದ ರಮೇಶ್ ಬಸಗೊಂಡ್, ಈರಣ್ಣ ದಬಕಿ, ಉಸ್ಮಾನ್ ಅಲಿ, ಆಕಾಶ್ ಸೇರಿ ಇತರರಿಂದ ಮಹಿಳಾ ಸದಸ್ಯ ಮೇಲೆ ಹಲ್ಲೆ ನಡೆದಿದೆ. ಮಹಿಳೆಯ ಎದೆಗೆ ಗಾಯವಾಗಿದೆ. ಅವರ ಪುತ್ರನ ಕೈಗೆ ಗಾಯವಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ, ಮಹಿಳೆಯ ಕೊರಳಿಲಿದ್ದ ತಾಳಿ ಹಾಗೂ ಆಭರಣಗಳು ನಾಪತ್ತೆಯಾಗಿವೆ. ಪ್ರಕರಣದಲ್ಲಿ ಶಿವರಾಜ ಎಂಬುವವನ ಬಂಧನವಾಗಿದ್ದು, ಉಳಿದವರನ್ನು ಕೂಡಲೇ ಬಂಧಿಸಿಬೇಕು ಒತ್ತಾಯಿಸಿದರು.

ಈ ಕುರಿತು ಮಹಿಳಾ ಆಯೋಗಕ್ಕೂ ಮನವಿ ಸಲ್ಲಿಸಲಾಗುವುದು. ಜತೆಗೆ ಬಿಜೆಪಿ ಮಹಿಳಾ ಮೋರ್ಚಾದಿಂದಲ್ಲೂ ದೂರು ದಾಖಳಿಸಲಾಗುವುದು ಎಂದು ತಿಳಿಸಿದರು. ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ, ಮೇಯರ್ ವಿಶಾಲ ದರ್ಗಿ ಇದ್ದರು.

emedialine

Recent Posts

ಬೀದಿ ಬದಿ ವ್ಯಾಪಾರಸ್ಥರಿಗೆ ಮೂಲಭೂತ ಸೌಕರ್ಯ ಒದಗಿಸಲು ಮೇಯರ್‍ ಗೆ ಮನವಿ

ಕಲಬುರಗಿ : ನಗರದ ಬೀದಿ ಬದಿಯಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಗೆ ಈಗಾಗಲೇ ಪಾಲಿಕೆಯಿಂದ ನೀಡಿರುವ ಹಳೆ ಜೈಲ್ ಸೂಪರ…

7 hours ago

ನಾರಿ ನ್ಯಾಯ ಸಮ್ಮಾನ್ ಕಾರ್ಯಕ್ರಮ

ಕಲಬುರಗಿ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ…

7 hours ago

ಬಾಂಗ್ಲಾದೇಶದ ಹಿಂದೂಗಳ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಶಹಾಬಾದ: ಬಾಂಗ್ಲಾದೇಶದ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಿಂಸಾತ್ಮಕ ದೌರ್ಜನ್ಯ, ಅತ್ಯಾಚಾರಗಳನ್ನು ಖಂಡಿಸಿ ವಿಶ್ವಹಿಂದೂ ಪರಿಷತ್ ವತಿಯಿಂದ ಮಂಗಳವಾರ ನಗರದ…

7 hours ago

ಹಿಂದುಳಿದ ಸಮುದಾಯಗಳ ಆಶಾಕಿರಣವಾಗಿದ್ದರು ದೇವರಾಜ ಅರಸ್

ಶಹಾಬಾದ: ಹಿಂದುಳಿದ ವರ್ಗಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಹಿಂದುಳಿದ ಸಮುದಾಯಗಳ…

7 hours ago

ವೈದ್ಯೆಯ ಮೇಲಿನ ಅತ್ಯಾಚಾರ – ಕೊಲೆ ಖಂಡಿಸಿ ಎಐಡಿವೈಒ ಪ್ರತಿಭಟನೆ

ಶಹಾಬಾದ: ಕೊಲ್ಕತ್ತಾದ ಸರ್ಕಾರಿ ಆರ್. ಜಿ. ಕರ್ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವೈಧ್ಯೆಯ ಮೇಲಿನ ಅತ್ಯಾಚಾರ ಕೊಲೆ ಹಾಗೂ ಪ್ರತಿಭಟನಾಕಾರರ…

7 hours ago

ಆ.25 ರಂದು ಹಟಗಾರ ಸಮಾಜ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ

ಕಲಬುರಗಿ: ನಗರದ ಪತ್ರಿಕಾ ಭವನದ ಸಾಂಸ್ಕøತಿಕ ಸಭಾಂಗಣದಲ್ಲಿ ಆ.25 ರಂದು ಬೆಳಗ್ಗೆ 10.30 ಗಂಟೆಗೆ ಗುಲಬರ್ಗಾ ಹಟಗಾರ ಸಮಾಜ ಅಭಿವೃದ್ಧಿ…

7 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420