ಕಲಬುರಗಿ: ಎಲೆ ಮರೆ ಕಾಯಿಯಂತೆ ಸಮಾಜದಲ್ಲಿ ಅನೇಕರು ತಮ್ಮದೇ ಆದ ಸಾಧನೆಯನ್ನು ಮಾಡುತ್ತಿದ್ದಾರೆ. ಸಂಘ-ಸಂಸ್ಥೆಗಳು ಅವರಲ್ಲಿರುವ ಪ್ರತಿಭೆ, ಸಾಧನೆಯನ್ನು ಗುರ್ತಿಸಿ, ಸಮಾಜಕ್ಕೆ ಪರಿಚಯಿಸಿ, ಪ್ರೋತ್ಸಾಹ ನೀಡುವುದು ಮುಖ್ಯವಾಗಿದೆ. ಇದರಿಂದ ಸಾಧಕರ ಸಂಖ್ಯೆ ಹೆಚ್ಚಳವಾಗುವುದುರ ಜೊತೆಗೆ ಸಾಧಕರ ಜವಾಬ್ದಾರಿ ಮತ್ತಷ್ಟು ಹೆಚ್ಚಾಗುತ್ತದೆ. ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ದೊಡ್ಡದಾಗಿದೆ ಎಂದು ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ನಗರದ ಸುವರ್ಣ ಕನ್ನಡ ಭವನದಲ್ಲಿ ‘ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’ ವತಿಯಿಂದ ಭಾನುವಾರ ಸಂಜೆ ಜರುಗಿದ ‘ಕಲಾ ಸಾರಂಗ ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಸೇವಾ ಸಂಸ್ಥೆ’ಯ ಉದ್ಘಾಟನೆ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಸಮಾಜಮುಖಿ ಸ್ನೇಹಜೀವಿ ಪ್ರಶಸ್ತಿ ಪ್ರದಾನ ಮತ್ತು ಕಲಾ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಮ್ಮೆಲ್ಸಿ ಶಶೀಲ್ ಜಿ.ನಮೋಶಿ ಮಾತನಾಡಿ, ನಮ್ಮ ಭಾಗದಲ್ಲಿ ಅನೇಕ ಪ್ರತಿಭಾವಂತ ಕಲಾವಿದ್ದರಿದ್ದು ಅವರಿಗೆ ವೇದಿಕೆಗಳ ಕೊರತೆಯಿದೆ. ಸರ್ಕಾರ, ವಿವಿಧ ಸಂಸ್ಥೆಗಳು ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು. ಶಿಕ್ಷಣದ ಜೊತೆಗೆ ವಿವಿಧ ಕೌಶಲ್ಯಗಳನ್ನು ಬೆಳೆಸಬೇಕು. ಎಲ್ಲರು ಶಿಕ್ಷಣ ಪಡೆಯಬೇಕು. ರಾಷ್ಟ್ರದ ಪ್ರಗತಿಗೆ ಶಿಕ್ಷಣ ಮೂಲವಾಗಿದೆ ಎಂದರು.
ಕೆಪಿಸಿಸಿ ಕಾರ್ಮಿಕ ಕೋಶದ ರಾಜ್ಯ ಕಾರ್ಯದರ್ಶಿ ಸತೀಶಕುಮಾರ ಕಾಂಡ್ರಾ, ಇಸ್ಲಾಂ ಧಾರ್ಮಿಕ ಮುಖಂಡ ಆದಾಮ್ ಅಲಿ ಚಿಸ್ತಿ ಸಾಹೇಬ್, ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ, ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ನ್ಯಾಯವಾದಿ ಹಣಮಂತರಾಯ ಎಸ್.ಅಟ್ಟೂರ್, ಮುಖಂಡ ಹಣಮಂತ ವಂಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಳಂದ ತಾಲೂಕಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ವೇದಿಕೆ ಮೇಲಿದ್ದರು. ಕಾರ್ಯಕ್ರಮವನ್ನು ಲಲಿತಾ ಹರಿಕೃಷ್ಣ ಪ್ರಾರ್ಥಿಸಿದರು. ಪ್ರೊ.ರಮೇಶ ಯಾಳಗಿ ನಿರೂಪಿಸಿದರು. ಅಭಯ ಪ್ರಕಾಶ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.
ವಿವಿಧ ಕ್ಷೇತ್ರದ ಸಾಧಕರಿಗೆ ಸಮಾಜಮುಖಿ ಸ್ನೇಹಜೀವಿ ಪ್ರಶಸ್ತಿ ಪ್ರದಾನ : ಬಸವರಾಜ ಹೆಳವರ ಯಾಳಗಿ, ಸೈಯದ್ ಮಹಮ್ಮದ್ ಅಹಮ್ಮದ್, ವೆಂಕಟೇಶ ರಂಗಂಪೇಟ್, ನರಸಪ್ಪ ಬಿರಾದಾರ ದೇಗಾಂವ, ಅನೀಲಕುಮಾರ ಆರ್.ಎಂಟಮನಿ, ಬಸವರಾಜ ಎನ್.ಎಂಟಮನಿ, ಸೋಮನಾಥ ಎಂ., ಸವಿತಾ ಎಚ್.ವಂಟಿ, ಪುಷ್ಪಾ ಬಿ.ಬಡಿಗೇರ,ಎಚ್.ಎಸ್.ಬರಗಾಲಿ, ಅನುರಾಧಾ ಕಟ್ಟಿಮನಿ, ಮಲ್ಲಿಕಾರ್ಜುನ ಅಗಸ್ಥೈತೀರ್ಥ, ಎಸ್.ಬಿ.ಹರಿಕೃಷ್ಣ, ಪ್ರೊ.ರಮೇಶ ಯಾಳಗಿ, ಬಸವರಾಜ ಎಸ್.ಪುರಾಣೆ, ನಂದಕುಮಾರ ತಳಕೇರಿ, ಅನೀಲಕುಮಾರ ಡಬರಾಬಾದಿ, ಸುಧಾಕರ ಕಬಾಡೆ, ಮಲ್ಲಿಕಾರ್ಜುನ ಹೊಸಮನಿ, ಪೀರಪ್ಪ ದೊಡ್ಡಮನಿ, ವೈಭವ ಬಬಲಾದ, ಮುತ್ತಣ್ಣ ಭಾಗೋಡಿ ಅವರಿಗೆ ‘ಸಮಾಜಮುಖಿ ಸ್ನೇಹಜೀವಿ’ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಲಾಯಿತು.
ಕಲಬುರಗಿ: ಖ್ಯಾತ ಶಿಕ್ಷಣತಜ್ಞ ದಿ: ಪೆÇ್ರ :ಶಂಕರಲಿಂಗ ಹೆಂಬಾಡಿ'ಯವರು ಸಂಸ್ಥಾಪಿತ ಡಾ.ರಾಜಕುಮಾರ ಸಾಹಿತ್ಯಿಕ ಮತ್ತು ಸಾಂಸ್ಕ್ರತಿಕ ಕಲಾ ಸಂಘ ರಾಜಾಪೂರ-ಕಲಬುರಗಿ…
ಕಲಬುರಗಿ: ನ.22 ಸಂವಿಧಾನ ದಿನಾಚರಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ವತಿಯಿಂದ…
ವಾಡಿ (ಕಲಬುರಗಿ): ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್, ಮತ್ತು ಐಟಿ/ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಕ್ ರ‍್ಗೆ…
45ನೇ ಹುಟ್ಟುಹಬ್ಬ ಆಚರಿಕೊಳ್ಳುತ್ತಿರುವ ಪ್ರಿಯಾಂಕ್ ಖರ್ಗೆಯವರ ವೈಯಕ್ತಿಕ ಪರಿಚಯ ಎಲ್ಲರಿಗೂ ತಿಳಿದಿರುವಂತೆದ್ದೆ. ಅವರ ತಂದೆಯವರಾದ ಮಲ್ಲಿಕಾರ್ಜುನ ಖರ್ಗೆಯವರ ನಿಷ್ಟುರ ಮತ್ತು…
ಕಲಬುರಗಿ; ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಂಗಣದಲ್ಲಿ ಶುಕ್ರವಾರದಂದು 2ನೇಯ ಎರಡು ದಿನಗಳ Iಇಇಇ ಇಂಟರ್‍ನ್ಯಾಶನಲ್ ಕಾನ್ಫರೆನ್ಸ್ ಆನ್ ಇಂಟಿಗ್ರೇಟೆಡ್…
ಕಲಬುರಗಿ ; ಗ್ರಾಮೀಣಾಭಿವೃದ್ಧಿ ಪಂಚಾಯತ, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಕ್ ಖರ್ಗೆ ಅವರ ಜನ್ಮದಿನದ ಅಂಗವಾಗಿ…