ಕಲಬುರಗಿ; ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಂಗಣದಲ್ಲಿ ಶುಕ್ರವಾರದಂದು 2ನೇಯ ಎರಡು ದಿನಗಳ Iಇಇಇ ಇಂಟರ್‍ನ್ಯಾಶನಲ್ ಕಾನ್ಫರೆನ್ಸ್ ಆನ್ ಇಂಟಿಗ್ರೇಟೆಡ್ ಇಂಟೆಲಿಜೆನ್ಸ್ ಅಂಡ್ ಕಮ್ಯುನಿಕೇಷನ್ ಸಿಸ್ಟಮ್ಸ್ (IಅIIಅS)-2024 ರ ಉದ್ಘಾಟನಾ ಸಮಾರಂಭದಲ್ಲಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿಯವರ 55ನೇ ಜನ್ಮದಿನಾಚರಣೆಯನ್ನು ಪ್ರಪಂಚದಾದ್ಯಂತದ ಭಾಷಣಕಾರರು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳು ಸೇರಿಕೊಂಡು ಅದ್ಧೂರಿಯಾಗಿ ಆಚರಿಸಿದರು.
ಡಾ. ಅವ್ವಾಜಿ ಅವರ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಪ್ರಮುಖರಲ್ಲಿ ದಕ್ಷಿಣ ಆಫ್ರಿಕಾದ ಕೇಪ್ ಪೆನಿನ್ಸುಲಾ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ಡಾ. ಜೋಹಾನ್ಸ್ ಕ್ರೊಂಜೆ, ಸಿಂಗಾಪುರದ ಎನ್‍ಟಿಯುಟಿವ್‍ನ ಡಾ. ಚವಾ ವಿಜಯ ಸಾರಧಿ, ಹೈದರಾಬಾದ್‍ನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಡಾ. ಸಿ ಕೃಷ್ಣ ಮೋಹನ್, ವಿಜ್ಞಾನಿ-Sಈ, ಂಆಖIಓ, ISಖಔ ಸಿಕಂದರಾಬಾದ್‍ನ ಡಾ. ಡಿ ರಾಜೇಶ್ ರೆಡ್ಡಿ, ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಹಾಗೂ ಅವರ ಸಹೋದರಿಯರಾದ ಕುಮಾರಿ ಭವಾನಿ ಎಸ್ ಅಪ್ಪ, ಕುಮಾರಿ ಶಿವಾನಿ ಎಸ್ ಅಪ್ಪ, ಕುಮಾರಿ ಮಹೇಶ್ವರಿ ಎಸ್ ಅಪ್ಪ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ, ಡಾ. ಅಲ್ಲಮಪ್ರಭು ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ. ಅನಿಲಕುಮಾರ ಬಿಡವೆ, ಕುಲಸಚಿವ ಡಾ. ಎಸ್.ಜಿ. ಡೊಳ್ಳೆಗೌಡರ್, ಕುಲಸಚಿವ (ಮೌಲ್ಯಮಾಪನ) ಡಾ. ಎಸ್ ಎಚ್ ಹೊನ್ನಳ್ಳಿ, IಅIIಅS-2024ನ ಅಧ್ಯಕ್ಷರು ಹಾಗೂ ವಿವಿಯ ಡೀನ್ ಡಾ. ಲಕ್ಷ್ಮೀ ಪಾಟೀಲ್ ಮಾಕಾ, ಹಣಕಾಸು ಅಧಿಕಾರಿ ಪೆÇ್ರ. ಕಿರಣ ಮಾಕಾ ಸೇರಿದಂತೆ ವಿವಿಧ ವಿಭಾಗದ ಡೀನ್‍ರು, ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತೋಶ್ರೀ ಡಾ. ಅವ್ವಾಜಿಯವರಿಗೆ ಪುμÁ್ಪರ್ಚನೆಯಿಂದ ಪುಷ್ಪವೃಷ್ಟಿ ಮಾಡಿ ಸುಂದರವಾಗಿ ಅಲಂಕೃತವಾದ ಶ್ವೇತ ವರ್ಣದ ಕೇಕ್ ಅನ್ನು ಕತ್ತರಿಸಿ ಅವರ ಹುಟ್ಟುಹಬ್ಬವನ್ನು ಆಚರಿಸಿದರು.
ಶ್ರೀ ಬಸವರಾಜ ದೇಶಮುಖ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಡಾ. ಅವ್ವಾಜಿಯವರ ಉತ್ಕøಷ್ಟ ಕೊಡುಗೆಗಾಗಿ ಶ್ಲಾಘಿಸಿದ ಅವರು, ಡಾ. ಅವ್ವಾಜಿ ಅವರು ಹೊಸ ಕೋರ್ಸ್‍ಗಳು ಮತ್ತು ಹೊಸ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಲು ಹಾಗೂ ಸಂಘ ಮತ್ತು ಶರಣಬಸವ ವಿಶ್ವವಿದ್ಯಾಲಯದ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವಾಗಲೂ ಬೆಂಬಲಿಸುತ್ತಾರೆ ಎಂದು ತಿಳಿಸಿದರು.
“ಪ್ರತಿವರ್ಷ ನವೆಂಬರ್ ತಿಂಗಳು ಸಂಸ್ಥಾನದಲ್ಲಿ ಮತ್ತು ಸಂಘದಲ್ಲಿ ಎಲ್ಲರಿಗೂ ಪ್ರಮುಖ ತಿಂಗಳು ಮತ್ತು ಈ ಪವಿತ್ರ ಮಾಸದಲ್ಲಿ ಸಂಸ್ಥಾನದ ಮೂವರು ಪೂಜ್ಯರ ಜನ್ಮದಿನಗಳು ಬರುತ್ತವೆ. ನವೆಂಬರ್ 01ರಂದು ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿಯವರ ಜನ್ಮದಿನ, ನವೆಂಬರ್ 14ರಂದು ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ಜನ್ಮದಿನ ಮತ್ತು ನವೆಂಬರ್ 22ರಂದು ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿಯವರ ಜನ್ಮದಿನವಾಗಿದ್ದು, ಇದೇ ನವೆಂಬರ್ 30 ರಂದು ಪೂಜ್ಯ ಡಾ. ಅಪ್ಪಾಜಿ ಹಾಗೂ ಮಾತೋಶ್ರೀ ಡಾ. ಅವ್ವಾಜಿಯವರ ವಿವಾಹ ವಾರ್ಷಿಕೋತ್ಸವ” ಎಂದು ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಜ್ಞಾನವನ್ನು ಹೆಚ್ಚಿಸಲು ಇಂತಹ ಸಮ್ಮೇಳನಗಳನ್ನು ಆಯೋಜಿಸುವ ಮಹತ್ವವನ್ನು ಶ್ರೀ ದೇಶಮುಖ ಒತ್ತಿ ಹೇಳಿದರು.
ಶರಣಬಸವ ವಿಶ್ವವಿದ್ಯಾಲಯದ ಸಂಸ್ಥಾಪಕರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರು ಯಾವಾಗಲೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳನ್ನು ಆಯೋಜಿಸಲು ಅಧ್ಯಾಪಕರನ್ನು ಬೆಂಬಲಿಸಿ ಪೆÇ್ರೀತ್ಸಾಹಿಸುತ್ತಾರೆ. ಇದು ವಿದ್ಯಾರ್ಥಿಗಳಿಗೆ ಹೆಚ್ಚಿಗೆ ಅಭ್ಯಾಸಿಸಲು ಸಹಾಯ ಮಾಡುತ್ತದೆ. ತಮ್ಮ ಕಲಿಕೆಯ ಕ್ಷೇತ್ರಗಳಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ತಿಳಿಸಿಕೊಡುತ್ತದೆ ಎಂದರು.
ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ. ಅನಿಲಕುಮಾರ ಬಿಡವೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಶ್ವವಿದ್ಯಾಲಯದ ಕುಲಸಚಿವ ಡಾ. ಡೊಳ್ಳೇಗೌಡರ್ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದರು.
ಸಮ್ಮೇಳನದ ಕುರಿತು ಡಾ. ಲಕ್ಷ್ಮೀ ಪಾಟೀಲ ಮಾಕಾ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಪೆÇ್ರ. ಕಿರಣ ಮಾಕಾ ಗಣ್ಯರೆಲ್ಲರನ್ನು ಸ್ವಾಗತಿಸಿದರು.
ದಕ್ಷಿಣ ಆಫ್ರಿಕಾದ ಕೇಪ್ ಪೆನಿನ್ಸುಲಾ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ಡಾ. ಜೋಹಾನ್ಸ್ ಕ್ರೊಂಜೆ, ಸಿಂಗಾಪುರದ ಎನ್‍ಟಿಯುಟಿವ್‍ನ ಡಾ. ಚವಾ ವಿಜಯ ಸಾರಧಿ, ವಿಜ್ಞಾನಿ-Sಈ, ಂಆಖIಓ, ISಖಔ ಸಿಕಂದರಾಬಾದ್‍ನ ಡಾ. ಡಿ ರಾಜೇಶ್ ರೆಡ್ಡಿ ಪ್ರಮುಖ ಭಾಷಣ ಮಾಡಿದರು.
ಸಮ್ಮೇಳನವು ಸಂಶೋಧನಾ ವಿದ್ವಾಂಸರು, ಶಿಕ್ಷಣ ತಜ್ಞರು, ಉದ್ಯಮದ ಮುಖಂಡರು, ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ ಪ್ರಪಂಚದಾದ್ಯಂತ 260 ಕ್ಕೂ ಹೆಚ್ಚು ಭಾಗವಹಿಸುವವರನ್ನು ಆಕರ್ಷಿಸಿದೆ. ವಿವಿಧ ಹಿನ್ನೆಲೆಯ ಸಂಶೋಧಕರು ಮತ್ತು ತಂತ್ರಜ್ಞರಿಗೆ ತಮ್ಮ ಇತ್ತೀಚಿನ ಸಂಶೋಧನಾ ಆಲೋಚನೆಗಳು, ಫಲಿತಾಂಶಗಳು ಮತ್ತು ಅದರ ಸಂಭಾವ್ಯ ಅನ್ವಯಿಕೆಗಳನ್ನು ಪ್ರಸ್ತುತಪಡಿಸಲು ಮತ್ತು ಚರ್ಚಿಸಲು ವೇದಿಕೆಯನ್ನು ಒದಗಿಸುವುದು ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ ಎಂದು ಡಾ. ಮಾಕಾ ಹೇಳಿದರು.
IಅIIಅS-2024 ಪ್ರಪಂಚದಾದ್ಯಂತ ಸಂಶೋಧನಾ ವಿದ್ವಾಂಸರು ಮತ್ತು ವಿಜ್ಞಾನಿಗಳಲ್ಲಿ ಬಹಳ ಜನಪ್ರಿಯವಾಗಿದೆ ಮತ್ತು ಅಮೇರಿಕಾ, ಚೀನಾ, ಹಾಂಗ್‍ಕಾಂಗ್, ಇಂಡೋನೇμÁ್ಯ, ಬಾಂಗ್ಲಾದೇಶ, ಕೀನ್ಯಾ, ಓಮನ್, ಇರಾಕ್, ಇಟಲಿ ಸೇರಿದಂತೆ ಕ್ಲಾರಿವೇಟ್, ಎನ್ವಿಡಿಯಾ, ಸೀಮೆನ್ಸ್, ಈಕ್ವಿಫ್ಯಾಕ್ಸ್, ಕವರ್ಟಸ್ ಪ್ರಸಿದ್ಧ ಕೈಗಾರಿಕೆಗಳಿಂದ ಸುಮಾರು 1600 ಪಾಂಡಿತ್ಯಪೂರ್ಣ ಸಲ್ಲಿಕೆಗಳನ್ನು ಸ್ವೀಕರಿಸಿದೆ ಎಂದು ಡಾ ಮಾಕಾ ಹೇಳಿದರು.
ಸ್ಟ್ಯಾಂಡರ್ಡ್ Iಇಇಇ ವಿಮರ್ಶೆ ಪ್ರಕ್ರಿಯೆ ಹಾಗೂ ವಿದ್ವಾಂಸರ ಕಠಿಣವಾದ ವಿಮರ್ಶೆಯ ನಂತರ, ಸಮ್ಮೇಳನದ ಪ್ರಕ್ರಿಯೆಯಲ್ಲಿ ಸುಮಾರು 260 ಉತ್ತಮ ಗುಣಮಟ್ಟದ ಪಾಂಡಿತ್ಯಪೂರ್ಣ ಸಲ್ಲಿಕೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಡಾ. ಲಕ್ಷ್ಮೀ ಪಾಟೀಲ ಮಾಕಾ ತಿಳಿಸಿದರು.
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…
ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…
ಶಹಾಬಾದ: ನಗರದ ಶಿವಯೋಗಿಸ್ವಾಮಿ ಪ್ರೌಢಶಾಲೆಯಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಜನ್ಮ…