ಬಿಸಿ ಬಿಸಿ ಸುದ್ದಿ

ಕೆಳಗೆ ಬಿದ್ದವರನ್ನು ಮೇಲೆತ್ತುವುದೇ ನಿಜವಾದ ಧರ್ಮ: ಸತ್ಯಂಪೇಟೆ

ಬೀದರ್: (ಹಳ್ಳಿಖೇಡ.ಕೆ): ಕೆಳಗೆ ಬಿದ್ದವರನ್ನು ಮೇಲೆತ್ತುವುದೇ ನಿಜವಾದ ಧರ್ಮ. ಬಸವಣ್ಣನವರು ಹೇಳುವಂತೆ ಯೆಯೇ ಧರ್ಮದ ಮೂಲ ಎಂದು ಪತ್ರಕರ್ತ- ಸಾಹಿತಿ ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಶರಣ ಕಿನ್ನರಿ ಬೊಮ್ಮಯ್ಯನವರ 50ನೇ ಜಾತ್ರಾ ಮಹೋತ್ಸವದ ಅಂಗವಾಗಿ ಶರಣ ಕಿನ್ನರಿ ಬೊಮ್ಮಯ್ಯನವರ ಗವಿ ಹಾಗೂ ದೇವಸ್ಥಾನ ಪಂಚ ಕಮೀಟಿ ವತಿಯಿಂದ ಗ್ರಾಮದಲ್ಲಿ ಮಂಗಳವಾರ ರಾತ್ರಿ ಆಯೋಜಿಸಿದ್ದ ಧಾರ್ಮಿಕ ಸಭೆ ಹಾಗೂ ಜಾನಪದ ಸಂಜೆ ಕಾರ್ಯಕ್ರಮದಲ್ಲಿ ಯಾವುದು ಧರ್ಮ? ವಿಷಯ ಕುರಿತು ವಿಶೇಷ ಅನುಭಾವ ನೀಡಿದ ಅವರು, ಎಲ್ಲಿ ಪ್ರೀತಿ, ಅನುಕಂಪ, ಕರುಣೆ ದಯೆ ಇದೆಯೋ ಅಲ್ಲಿ ಮಾತ್ರ ಧರ್ಮವನ್ನು ಕಾಣಲು ಸಾಧ್ಯ ಎಂದರು.

ಸಮಾಜದಲ್ಲಿ ಇಂದು ಪರಸ್ಪರ ಬೈಯ್ದಾಟ, ಕಿತ್ತಾಟ, ಅಸಹಿಷ್ಣುತೆಯ ವಾತಾವರಣ ನಿರ್ಮಾಣವಾಗಿದ್ದು, ಬಸವಾದಿ ಶಿವಶರಣರು ಹೇಳಿದ ದಯೆ ಸಂದೇಶವನ್ನು ನಮ್ಮ ಬದುಕಿನಲ್ಲಿ ತಂದುಕೊಳ್ಳುವ ಮೂಲಕ ‘ಮತ್ತೆ ಕಲ್ಯಾಣ’ ನಿರ್ಮಿಸೋಣ.                                                                                                                                – ಸತ್ಯಪ್ರಿಯ

ನಾವು ಭಾವಿಸಿಕೊಂಡಿರುವಂತೆ ಧರ್ಮವನ್ನು ಶರಣರು ಸಂಕುಚಿತ ಅರ್ಥದಲ್ಲಿ ಬಳಸಲಿಲ್ಲ. ಬಹಳ ವಿಶಾಲವಾದ ಅರ್ಥದಲ್ಲಿ ಧರ್ಮವನ್ನು ಅರ್ಥೈಸಿದರು ಎಂದು ತಿಳಿಸಿದರು. ಒಂದು ಹೂವಿನ ತೋಟದಲ್ಲಿ ಹಲವು ಬಗೆಯ ಹೂಗಳ ಜಾತಿ ಬೇರೆಯಾಗಿದ್ದರೂ ಅವುಗಳ ಮುಖ್ಯಗುಣ ಸುವಾಸನೆ ಬೀರುವುದು, ಕಣ್ಣಿಗೆ  ಸೌಂದರ್ಯ ಕೊಡುವುದು ಅವುಗಳಿಗೆ ಎಷ್ಟು ಮುಖ್ಯವೋ ಹಾಗೆಯೇ ಮನುಷ್ಯರಾದ ನಾವು ಕೂಡ ಮತಾಂಧರಾಗದೆ ಪರಸ್ಪರ ಸೌಹಾರ್ದ ಬದುಕು ನಡೆಸುವುದೇ ನಿಜವಾದ ಧರ್ಮವಾಗಿದೆ ಎಂದು ಶರಣರ ವಚನಗಳ ಉದಾಹರಣೆಯೊಂದಿಗೆ ವಿವರಿಸಿದರು.

ಖೇಳಗಿ ಶಿವಲಿಂಗೇಶ್ವರ ವಿರಕ್ತಮಠದ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ, ಬಸವ ಕಲ್ಯಾಣ ಅನುಭವ ಮಂಟಪದ ಸಂಗಮೇಶ್ವರ ದೇವರು ಸಮ್ಮುಖ, ಹಳ್ಳಿಖೇಡ ಹಿರೇಮಠದ ಸಿದ್ಧರಾಮ ಸ್ವಾಮೀಜಿ ನೇತೃತ್ವ ವಹಿಸಿದ್ದರು. ವಚನ ಸಾಹಿತ್ಯ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಕಲಬುರಗಿಯ ವಿಜಯಕುಮಾರ ಪಾಟೀಲ ಅನುಭಾವ ನೀಡಿದರು. ಅಥಣಿಯ ಪ್ರಭಾವತಿ ಕಿರಣಗಿ ಭಜನಾ ಮಂಡಳಿಯವರಿಂದ ಬಸವ ಭಜನೆ ಹಾಗೂ ಜಾನಪದ ಭಜನೆ ಕಾರ್ಯಕ್ರಮ ಜನಮನ ರಂಜಿಸುವಲ್ಲಿ ಯಶಸ್ವಿಯಾಯಿತು.

ಗ್ರಾಮದ ವಿವಿಧ ಶಾಲಾ ಮಕ್ಕಳು ಪ್ರಸ್ತುತಪಡಿಸಿದ ವಚನ ನೃತ್ಯ ಹಾಗೂ ಜಾನಪದ ನೃತ್ಯಗಳು ಮೈನವಿರೇಳಿಸುವಂತಿದ್ದವು. ಚಿದಾನಂದ ಚಿಕ್ಕಮಠ ಅವರ ಸಂಗೀತ ಕಾರ್ಯಕ್ರಮದಲ್ಲಿ  ಮೃತ್ಯಂಜಯ ಚಿಕ್ಕಮಠ ತಬಲಾ ನುಡಿಸಿದರು. ಸುಭಾಷ ವಾರದ, ಡಾ. ಚಿದಾನಂದ ಚಿಕ್ಕಮಠ, ನಾಗೇಂದ್ರಪ್ಪ ಮಾಡ್ಯಾಳ, ಶ್ರೀಕಾಂತಗೌಡ ಪಾಟೀಲ ತಿಳಗೂಳ, ಗ್ರಾಮದ ಗಣ್ಯರು, ಮಹಿಳೆಯರು, ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 hour ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 hour ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 hour ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago