ಎಲ್ಲರ ಮನೆಮನೆಗಳ ಮೇಲೆ ಹಾರಾಡಲಿ ಭಾರತದ ರಾಷ್ಟ್ರಧ್ವಜ

ಶಹಾಬಾದ: ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಸರ್ಕಾರದ ಸೂಚನೆಯಂತೆ ಹರ್ ಘರ್ ತಿರಂಗ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಆ. 13 ರಿಂದ 15 ರವರೆಗೆ ಮೂರು ದಿನಗಳ ಕಾಲ ತಾಲೂಕಿನ ಪ್ರತಿಯೊಬ್ಬರ ಮನೆ ಮೆನೆಗಳÀ ಮೇಲೆ ಭಾರತದ ರಾಷ್ಟ್ರ ಧ್ವಜ ಹಾರಿಸುವ ಮೂಲಕ ಪ್ರತಿಯೊಬ್ಬರೂ ದೇಶಪ್ರೇಮ ಮೆರೆಯುವಂತಾಗಬೇಕು ಎಂದು ತಹಸೀಲ್ದಾರ ಗುರುರಾಜ ಸಂಗಾವಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯಾದಾದ್ಯಂತ ಇದೇ ಆ. 13 ರಿಂದ 15 ರವರೆಗೆ ಹರ್ ಘರ್ ತಿರಂಗ ಅಭಿಯಾನವನ್ನು ಆಯೋಜಿಸಲಾಗಿದೆ.ಈ ಅವಧಿಯಲ್ಲಿ ಎಲ್ಲಾ ಮನೆಗಳ ಮೇಲೆ ಸಾರ್ವಜನಿಕರು ರಾಷ್ಟ್ರಧ್ವಜ ಹಾರಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು.

ಎಲ್ಲರಿಗೂ ಸುಲಭವಾಗಿ ರಾಷ್ಟ್ರದ ಧ್ವಜ ಲಭ್ಯವಾಗುವಂತೆ ಮಾಡಲು ನಗರಸಭೆ, ಅಂಚೆ ಕಚೇರಿ ಹಾಗೂ ತಹಸೀಲ್ ಕಚೇರಿಯಲ್ಲಿ ವಿತರಿಸಲಾಗುತ್ತಿದೆ.ಪ್ರತಿಧ್ವಜಕ್ಕೆ 25 ರೂಪಾಯಿ ನಿಗದಿಪಡಿಸಲಾಗಿದ್ದು, ಅಲ್ಲಿಂದ ಸಾರ್ವಜನಿಕರು ಪಡೆಯಬಹುದಾಗಿದೆ. ಪ್ರತಿಯೊಬ್ಬರಲ್ಲಿ ದೇಶಪ್ರೇಮ ಮೂಡುವಲ್ಲಿ ಈ ಅಭಿಯಾನ ಅತ್ಯಂತ ಪರಿಣಾಮಕಾರಿಯಾಗಲಿದ್ದು, ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸಬೇಕು. ಎಲ್ಲಾ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಅಭಿಯಾನದಲ್ಲಿ ಪಾಲ್ಗೊಂಡು ತಮ್ಮ ತಮ್ಮ ಮನೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಬೇಕು. ತಾಲೂಕಿನಲ್ಲಿ ಈ ಅಭಿಯಾನವನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಬೇಕೆಂದು ತಹಸೀಲ್ದಾರ ಗುರುರಾಜ ಸಂಗಾವಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

emedialine

Recent Posts

ವಿಕಲಚೇತರಿಗೆ ಅನುಕಂಪ ಬೇಡ ಮನುಷ್ಯರಂತೆ ಕಾಣಿ: ಡಾ.ಗವಿಸಿದ್ಧಪ್ಪ ಪಾಟೀಲ

ಬಸವಕಲ್ಯಾಣ: ವಿಕಲಚೇತನರು ತಮ್ಮ ಅಂಗವಿಕಲತೆ ಬಗ್ಗೆ ಅಗೌರವ ತಾಳಲಾರದೇ,ಅನುಕಂಪ ತೋರಿಸದೇ ಸ್ವ ಪ್ರತಿಭೆ ಹೊಂದಿದ ಅವರಿಗೆ ಮೂಲಭೂತ ಸೌಲಭ್ಯ ಗಳನ್ನು…

9 hours ago

ಸತ್ಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ

ಕಲಬುರಗಿ: ಸ್ಥಾಪಿತ ಸಿದ್ಧಾಂತ ಹೊಡೆದು ಹಾಕಿ ಅವೈದಿಕ ವಚನ ಸಾಹಿತ್ಯವನ್ನು ಜನಮಾನಸಕ್ಕೆ ಮುಟ್ಟಿಸಿದ ಡಾ.‌ಎಂ.ಎಂ.‌ಕಲಬುರ್ಗಿ ಯವರು ಸತ್ಯದ ಸಂಶೋಧಕರಾಗಿದ್ದರು ಎಂದು…

10 hours ago

ಮಕ್ಕಳೊಂದಿಗೆ ಹುಟ್ಟ ಹುಬ್ಬ ಆಚರಿಸಿಕೊಂಡ ಡಿ.ಸಿ. ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಗುರುವಾರ ಸಂಜೆ ತಮ್ಮ ಹುಟ್ಟು ಹಬ್ಬವನ್ನು ಕಲಬುರಗಿ ನಗರದ ಆಳಂದ ನಾಕಾ ರಸ್ತೆಯಲ್ಲಿರುವ…

11 hours ago

ಚಿಂಚೋಳಿ ಗ್ರಾಮ ಅಡಳಿತಾಧಿಕಾರಿಗೆ ಡಿ.ಸಿ. ಪ್ರಶಂಸನಾ ಪತ್ರ; ಪಹಣಿಗೆ ಆಧಾರ್ ಜೋಡಣೆಯಲ್ಲಿ ಸಾಧನೆ

ಕಲಬುರಗಿ; ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಪಹಣಿಗೆ ಆಧಾರ್ ಜೋಡಣೆ ಮತ್ತು ಸರ್ಕಾರಿ ಜಮೀನುಗಳ ಸಂರಕ್ಷಣೆಯ ಲ್ಯಾಂಡ್ ಬೀಟ್ ಅಪ್ಲಿಕೇಶನ್ ನಲ್ಲಿ…

11 hours ago

ಉಚಿತ ಆರೋಗ್ಯ ತಪಾಸಣೆ| ರಾಜಾ ಕೃಷ್ಣಪ್ಪ ನಾಯಕ ಚಾಲನೆ

ಸುರಪುರ: ಹಿಂದಿನ ಕಾಲದಲ್ಲಿ ಅನೇಕ ಜನ ರಾಜರು ಸ್ವತಃ ತಾವೇ ಪಾರಂಪರಿಕ ವೈದ್ಯರಾಗಿದ್ದು ಬೇಟೆಗೆ ಹೋದ ಸಂದರ್ಭದಲ್ಲಿ ತಾವೇ ಮದ್ದು…

11 hours ago

ಲೋಕಾಯುಕ್ತ ಪೊಲೀಸ್ ಸಾರ್ವಜನಿಕರ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆ

ಸುರಪುರ: ಸಾರ್ವಜನಿಕರು ತಮ್ಮ ಕೆಸಲ ಕಾರ್ಯಗಳಿಗಾಗಿ ಕಚೇರಿಗೆ ಬಂದಾಗ ವಿಳಂಬ ಮಾಡದೆ ನ್ಯಾಯಯುತವಾದ ಅರ್ಜಿಗಳ ಕೆಲಸ ಮಾಡಿಕೊಡುವಂತೆ ಕರ್ನಾಟಕ ಲೋಕಾಯುಕ್ತ…

11 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420