ಸುರಪುರ: ಕ್ರೀಡಾ ಕೂಟದಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳು ಕ್ರೀಡಾ ಭಾವನೆ ಮೆರೆಯಬೇಕು,ಸೋಲು ಗೆಲುವು ಸಹಜ ಆದರೆ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಮರೇಶ ಕುಂಬಾರ ಮಾತನಾಡಿದರು.
ನಗರದ ಸರಕಾರಿ ಬಾಲಕರ ಪದವಿ ಪೂರ್ವ ಮಹಾ ವಿದ್ಯಾಲಯದ ಆವರಣದಲ್ಲಿ ನಡೆದ ಸುರಪುರ ವಲಯ ಮಟ್ಟದ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿ,ಕ್ರೀಡಾ ಕೂಟದಲ್ಲಿ ಸುರಪುರ ವಲಯ ಮಟ್ಟದ ಎಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಎಲ್ಲರು ಕ್ರೀಡಾ ಮನೋಭಾವದಿಂದ ಆಟಗಳಲ್ಲಿ ಭಾಗವಹಿಸಿ ಯಾವುದೆ ಗದ್ದಲ ಗಲಾಟೆಗಳಿಗೆ ಅವಕಾಶ ನೀಡಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪ ಪ್ರಾಂಶುಪಾಲ ಯಲ್ಲಪ್ಪ ಕಾಡ್ಲೂರ ಮಾತನಾಡಿ,ವಿದ್ಯಾರ್ಥಿಗಳಿಗೆ ಪಾಠದಷ್ಟೆ ಆಟವು ಮುಖ್ಯವಾಗಿದ್ದು ಎಲ್ಲರು ಶಾಂತಿ ರೀತಿಯಿಂದ ಭಾಗವಹಿಸಿ ಎಂದು ಸ್ಪರ್ಧಾಳುಗಳಿಗೆ ಹಾರೈಸಿದರು.
ನಂತರ ಕ್ರೀಡಾ ಧ್ವಜಾರೋಹಣ ನಡೆಸಿ ಅಕ್ಷರ ದಾಸೋಹದ ಅಧಿಕಾರಿ ಮೌನೇಶ ಕಂಬಾರವರಿಗೆ ಕ್ರೀಡಾ ಜ್ಯೋತಿ ನೀಡಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿ.ಆರ್.ಪೊಲೀಸ್ ಪಾಟೀಲ,ಸಂಜೀವಪ್ಪ ದರಬಾರಿ,ಭೀಮಣ್ಣ ಬೋಸಗಿ,ಆರ್.ಕೆ.ಕೋಡಿಹಾಳ,ಶರಣಗೌಡ ಪಾಟೀಲ,ಮಹೇಶ ಜಹಾಗೀರದಾರ,ಶರಣಬಸವ ಗಚ್ಚಿನ,ರವಿ ನಾಯಕ ಬೈರಿಮರಡಿ,ಹಣಮಂತ್ರಾಯ ದೊರೆ,ಹಣಮಂತ್ರಾಯ ಮೇಟಿಗೌಡ ಭಾಗವಹಿಸಿದ್ದರು.ಸಂಗಮ್ಮ ನಾಗಾವಿ ನಿರೂಪಿಸಿದರು,ದೈಹಿಕ ಶಿಕ್ಷಕ ಜೋಗಪ್ಪ ಸ್ವಾಗತಿಸಿದರು,ಜಯರಾಮ ಚವ್ಹಾಣ ವಂದಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…