ಕಲಬುರಗಿ: ಭಾರತ ಸ್ವಾತಂತ್ರ್ಯ ಚಳುವಳಿ ಇತಿಹಾಸದ ಪುಟಗಳಲ್ಲಿ ಅತ್ಯಂತ ಪ್ರಮುಖವಾಗಿದೆ. ಅದರಲ್ಲಿ ಅನೇಕ ಹೋರಾಟಗಾರರು ಭಾಗವಹಿಸಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದ್ದಾರೆ. ವೀರ, ಧೀರ, ಅಪ್ಪಟ ದೇಶಪ್ರೇಮಿ, ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರು ಬ್ರಿಟಿಷರ ವಿರುದ್ಧ ಸಮರ ಸಾರುವ ಮೂಲಕ ಸ್ವಾತಂತ್ರದ ಜ್ಯೋತಿ ಹೊತ್ತಿಸಿದ ಮಹಾನ ಚೇತನವೆಂದು ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ, ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ ಹೇಳಿದರು.
ನಗರದ ಜಗತ್ ಬಡಾವಣೆಯ ಮೇಲಕೇರಿಯ ಮಲ್ಲಯ್ಯ ದೇವಸ್ಥಾನದ ಸಮೀಪದಲ್ಲಿ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘ’ದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ‘ಸಂಗೊಳ್ಳಿ ರಾಯಣ್ಣನವರ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ರಾಯಣ್ಣನವರ ಮನೆತನದ ವಂಶಸ್ಥರು ಅಪ್ರತೀಮ ಶೌರ್ಯ, ಸಾಹಸವನ್ನು ಹೊಂದಿದ ಕುಟುಂಬದವರಾಗಿದ್ದರು. ಇಂತಹ ಮನೆತನದಲ್ಲಿ ರಾಯಣ್ಣ ಜನಿಸಿದ್ದರಿಂದ, ಹೋರಾಟದ ಮನೋಭಾವ ಇತನಲ್ಲಿ ರಕ್ತಗತವಾಗಿಯೇ ಬಂದಿತು. ರಾಯಣ್ಣನು ತನ್ನ ನಾಡು, ರಾಷ್ಟ್ರಕ್ಕಾಗಿ ತನ್ನ ಜೀವನವನ್ನೇ ನೀಡಿ, ಬ್ರಿಟೀಷರನ್ನು ದೇಶದಿಂದ ಹೊಡೆದೊಡಿಸಬೇಕೆಂದು ಹೋರಾಟ ಮಾಡಿದನು. ರಾಣಿ ಚನ್ನಮ್ಮಳನ್ನು ಬ್ರಿಟೀಷರು ಬಂಧಿಸಿದಾಗ ವ್ಯವಸ್ಥಿತವಾಗಿ ಸೈನ್ಯವನ್ನು ಕಟ್ಟಿ ಬ್ರಿಟೀಷರ ವಿರುದ್ಧ ‘ಗೆರಿಲ್ಲಾ ಯುದ್ಧ’ ಮಾಡಿದನು. ರೈತರಿಗೆ ಆಗುತ್ತಿದ್ದ ಕಂದಾಯ ಶೋಷಣೆಯನ್ನು ತಪ್ಪಿಸಲು ಪ್ರಯತ್ನಿಸಿದನು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಂ.ಬಿ.ನಿಂಗಪ್ಪ, ಬಸಯ್ಯಸ್ವಾಮಿ ಹೊದಲೂರ, ಶರಣಪ್ಪ ಪೂಜಾರಿ, ಮಲ್ಲು, ಧರ್ಮರಾಜ, ಬೀರಪ್ಪ, ಅಮರೇಶ್, ನಾಗರಾಜ, ಮಾಳಿಂಗರಾಯ, ಮಲ್ಲಿಕಾರ್ಜುನ, ಮಾದೇಶದ, ವಿಜಯ ಹೂಗಾರ, ಶಿವು ಪೂಜಾರಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…