ಶಹಾಬಾದ: ಶತಮಾನಗಳಿಂದÀ ಬ್ರಿಟಿಷರ ದಾಸ್ಯದಿಂದ ಬಳಲಿದ ಭಾರತಕ್ಕೆ ತಮ್ಮ ತ್ಯಾಗ, ಬಲಿದಾನ ನೀಡುವುದರ ಮೂಲಕ ನಮಗೆ ಸ್ವಾತಂತ್ರ್ಯ ಕಲ್ಪಿಸಿಕೊಟ್ಟ ಮಹಾನ್ ಹೋರಾಟಗಾರರನ್ನು ಸ್ಮರಿಸುವ ವಿಶೇಷ ದಿನವೇ ಸ್ವಾತಂತ್ರ್ಯ ದಿನ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಅವರು ಮಂಗಳವಾರÀ ತಾಲೂಕಾಢಳಿತ ವತಿಯಿಂದ ನಗರದ ಸರಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಆಯೋಜಿಸಲಾದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶವನ್ನು ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಳಿಸಲು ಗಾಂಧೀಜಿ, ಭಗತ್‍ಸಿಂಗ್,ಲಾಲಬಹಾದ್ದೂರ ಶಾಸ್ತ್ರಿ, ಚಂದ್ರಶೇಖರ ಆಜಾದ, ಸುಭಾಶ್ಚಂದ್ರಭೋಸರಂತಹ ಅಸಂಖ್ಯ ಮಹನೀಯರು ತಮ್ಮ ವೈಯಕ್ತಿಕ ಬದುಕಿನ ಸಂತೋಷಗಳನ್ನು ತ್ಯಾಗ ಮಾಡಿದರು.ಬ್ರಿಟಿಷರ ವಿರುದ್ಧ ಉಗ್ರ ಹೋರಾಟದ ಮೂಲಕ ಇತಿಹಾಸ ಬರೆದರು.ನಮಗೆ ದೇಣಿಗೆಯಾಗಿ ಕೊಟ್ಟ ಸ್ವಾತಂತ್ರ್ಯವನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ದೇಶವನ್ನು ಅಭಿವೃದ್ಧಿಪಥದತ್ತ ಸಾಗಬೇಕಾಗಿದೆ. ಭಾರತೀಯರಾದ ನಾವು ಯಾವುದೇ ಜಾತಿ,ಮತ,ಪಂಥ, ಧರ್ಮದ ಹೆಸರಿನಲ್ಲಿ ಬೇಧ-ಭಾವ ಮಾಡದೇ ಎಲ್ಲರೂ ಕೂಡಿಕೊಂಡು ಬಾಳುವುದರ ಮೂಲಕ ಭಾರತದ ಭವಿಷ್ಯ ಉಜ್ವಲಗೊಳಿಸೋಣ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ ಗುರುರಾಜ ಸಂಗಾವಿ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಇದು ದೇಶದ ಅತಿ ದೊಡ್ಡ ಹಬ್ಬ.ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ಗಳಿಸಿದ ಸ್ವಾತಂತ್ರ್ಯ ದೇಶದ ಜನ ಸಮುದಾಯ ಅಭಿವೃದ್ಧಿ, ಭಾವೈಕ್ಯತೆ ಮತ್ತು ನೆಮ್ಮದಿ ಬದುಕಿಗೆ ಸಹಕಾರಿಯಾಗಿದೆ. ಬಡತನ,ಅನಕ್ಷರತೆ ಮತ್ತು ಅಸಮಾನತೆಯಿಂದ ಮುಕ್ತಿಯೇ ನಿಜವಾದ ಸ್ವಾತಂತ್ರ್ಯ ಎಂದ ಗಾಂಧೀಜಿಯವರ ಆಶಯದ ಬೆಳಕಿನಲ್ಲಿ ಮುನ್ನಡೆಯಬೇಕಾಗಿದೆ.ಇಂದು ಅವರು ಕೊಟ್ಟ ಸ್ವಾತಂತ್ರ್ಯದ ಫಲವಾಗಿಯೇ ಮುಕ್ತ ವಾತಾವರಣದಲ್ಲಿ ಬದುಕುತ್ತಿದ್ದೆವೆ ಎಂದು ಯಾರು ಮರೆಯಬಾರದು. ರಾಷ್ಟ್ರಪ್ರೇಮ, ದೇಶಾಭಿಮಾನ ,ನಮ್ಮ ನಾಡು ನುಡಿಗಳ ಬಗ್ಗೆ ಅಭಿಮಾನ ಬೆಳೆಸಿಕೊಂಡಾಗ ಮಾತ್ರ ಸ್ವಾತಂತ್ರ್ಯಕ್ಕೆ ಬೆಲೆ ಬರುತ್ತದೆ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಸ್ಮರಿಸುವ ಮೂಲಕ ಸ್ವತಂತ್ರೋತ್ಸವವನ್ನು ಅರ್ಥ ಗರ್ಭಿತಗೊಳಿಸಬೇಕೆಂದು ಹೇಳಿದರು.
ನಗರಸಭೆಯ ಪೌರಾಯುಕ್ತೆ ಪಂಕಜಾ, ಸಿಡಿಪಿಓ ಬಿ.ಎಸ್.ಹೊಸಮನಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿನಾಥ ರಾವೂರ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ, ಸರಕಾರಿ ಪ.ಪೂ ಕಾಲೇಜಿ ಪ್ರಾಂಶುಪಾಲ ಎಸ್.ಎಂ.ಪಟೇಲ್,ಸರಕಾರಿ ಬಾ.ಪ್ರೌಢಶಾಲೆಯ ಮುಖ್ಯಗುರು ಏಮನಾಥ ರಾಠೋಡ, ಡಾ.ಯಲ್ಲಪ್ಪ ಇಂಗಳೆÉ್ಜಸ್ಕಾಂ ಎಇಇ ಮಹ್ಮದ್ ಯುನೂಸ್ ವೇದಿಕೆಯ ಮೇಲಿದ್ದರು.
ಮರಲಿಂಗ ಯಾದಗಿರಿ ನಿರೂಪಿಸಿದರು, ಮಲ್ಲಿನಾಥ ರಾವೂರ ಸ್ವಾಗತಿಸಿದರು,ಜಗಪ್ಪ ಹೊಸಮನಿ ವಂದಿಸಿದರು. ಮುಖಂಡರಾದ ಅಣವೀರ ಇಂಗಿನಶೆಟ್ಟಿ,ನಾಗರಾಜ ಮೇಲಗಿರಿ,ನಿಂಗಣ್ಣ ಹುಳಗೋಳಕರ್,ರವಿ ರಾಠೋಡ, ಸದಾನಂದ ಕುಂಬಾರ,ಸಿದ್ರಾಮ ಕುಸಾಳೆ,ಪರಮಾನಂದ ಯಲಗೋಡಕರ್,ಉಪನ್ಯಾಸಕರಾದ ಅಂಬಿಕಾ ಹಂಗರಗಿ, ವಿಜಯಲಕ್ಷ್ಮಿ ಪಾಟೀರವಿ ಚವ್ಹಾಣ ಇತರರು ಇದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…