ಸುರಪುರ: ಕರ್ನಾಟಕ ರಾಜ್ಯ ಗೊಲ್ಲ (ಯಾದವ್) ಸಮಾಜದ ಆಡಳಿತ ಮಂಡಳಿಗೆ ರಾಜ್ಯ ಉಪಾಧ್ಯಕ್ಷರಾಗಿ ಮುಖಂಡ ವಿಠಲ್ ಯಾದವ್ ಅವರು ಆಯ್ಕೆಯಾದರು.
ಈ ಸಂದರ್ಭದಲ್ಲಿ ಸಮಾಜ ಬಾಂದವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ೩೦-೩೫ ಲಕ್ಷ ಜನಸಂಖ್ಯೆ ಇರುವ ಗೊಲ್ಲ ಸಮಾಜ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ಈ ಸಮಾಜದ ಅಭಿವೃದ್ಧಿಗಾಗಿ ಸಮಾಜದ ಹಿರಿಯ ಮುಖಂಡರಾದ ದಿ.ಎ.ಕೃಷ್ಣಪ್ಪ ಅವರು ಕಟ್ಟಿ ಬೆಳೆಸಿದ ರಾಜ್ಯ ಗೊಲ್ಲ ಸಮಾಜವನ್ನು ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಸಿ ರಾಜ್ಯದಾದ್ಯಂತ ಸಮಾಜದ ಸದಸ್ಯರನ್ನು ನೊಂದಣಿ ಮಾಡಿಸುವ ಮೂಲಕ ಸಂಘಟಿಸುವುದು ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಮತ್ತೊಂದು ಅತ್ಯಂತ ಪ್ರಮುಖ ಬೇಡಿಕೆಯಾಗಿರುವ ಪರ್ಯಾಯ ಪದಗಳನ್ನು ಒಳಗೊಂಡ ಗೊಲ್ಲ ಸಮಾಜವನ್ನು ಎಸ್.ಟಿ ವರ್ಗಕ್ಕೆ ಸೇರಿಸುವಂತೆ ಸರಕಾರಕ್ಕೆ ಒತ್ತಾಯಿಸುವುದು, ಬೆಂಗಳೂರಿನ ಬಾಣಸವಾಡಿಯಲ್ಲಿ ಇರುವ ಸಮಾಜಕ್ಕೆ ಸೇರಿದ ಅಪೂರ್ಣಗೊಂಡಿರುವ ಕಟ್ಟಡವನ್ನು ಪೂರ್ತಿಗೊಳಿಸುವುದು, ಗೊಲ್ಲರ ಅಭಿವೃದ್ಧಿ ನಿಗಮವನ್ನು ಸ್ಥಾಪನೆಗಾಗಿ ಸರಕಾರದ ಮೇಲೆ ಒತ್ತಡ ಹಾಕಿ ಯತ್ನಿಸುವುದು, ದಿ.ಎ.ಕೃಷ್ಣಪ್ಪ ಅವರ ಕನಸಾದ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿರುವ ಸಮಾಜದ ಹಾಸ್ಟೆಲ್ಗಳನ್ನು ಪೂರ್ತಿಗೊಳಿಸುವ ಮಹತ್ವಾಕಾಂಕ್ಷೆ ಹೊಂದಿರುವುದಾಗಿ ಅವರು ಹೇಳಿದರು.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಗೊಲ್ಲ ಸಮಾಜದ ಏಕೈಕ ಬಿಜೆಪಿ ಶಾಸಕಿ ಆಗಿರುವ ದಿ.ಎ.ಕೃಷ್ಣಪ್ಪ ಅವರ ಪುತ್ರಿಯಾದ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ ಅವರನ್ನು ರಾಜ್ಯ ಬಿಜೆಪಿ ಸರಕಾರದಲ್ಲಿ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.
ಶಹಾಬಾದ: ಮಾನವೀಯ ಮೌಲ್ಯಗಳು ವಿದ್ಯಾರ್ಥಿ ಯುವಜನರ ಬೆಳೆಸಿಕೊಂಡು ಉತ್ತಮ ನಾಗರಿಕರಾಗಬೇಕೆಂದು ಎಸ್ಎಸ್ ಮರುಗೋಳ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಕೆ.ಬಿ. ಬಿಲ್ಲವ…
ಶಹಾಪುರ : 26 : ಚಿಕ್ಕ ವಯಸ್ಸಿನಲ್ಲಿಯೆ ಹಿರಿದಾದ ಜ್ಞಾನವನ್ನು ಹೊಂದಿದ್ದ ಚೆನ್ನಬಸವಣ್ಣ ಷಟಸ್ಥಲ ಜ್ಞಾನಿ ಎಂದು ಕರೆಯಿಸಿಕೊಂಡರು. ಬಸವಣ್ಣನವರ…
ಶಹಾಬಾದ: ನಗರಸಭೆಯ ವಾರ್ಡ ನಂ.3 ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಾಜೀದ್ ಖಾನ್ ಜಮಾದಾರ ಅವರು ಗೆಲುವು ಸಾಧಿಸಿದ್ದಾರೆ. ನಗರದ…
ಶಹಾಬಾದ: ಜಾತಿ-ಬೇಧ ಎನ್ನದೇ ಸರ್ವರಿಗೂ ಮೂಲಭೂತ ಹಕ್ಕನ್ನು ಒದಗಿಸಿ, ಬದುಕುವ ವಾತಾವರಣ ಸೃಷ್ಠಿಸಿದ್ದೇ ಡಾ. ಬಿ .ಆರ್. ಅಂಬೇಡ್ಕರ್ ಬರೆದ…
ಶಹಾಬಾದ: ಸಂವಿಧಾನದ ಆಶೋತ್ತರಗಳು, ಮೌಲ್ಯಗಳನ್ನು ಅರಿತು ಅದರಂತೆ ಎಲ್ಲರೂ ನಡೆದರೆ ನಮ್ಮ ದೇಶ ಜಗತ್ತಿನಲ್ಲಿಯೇ ಉನ್ನತ ಸ್ಥಾನದಲ್ಲಿರುತ್ತದೆ ಎಂದು ಬಿಜೆಪಿ…
ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಇ.ಪಿ.ಎಫ್ ಕ್ಷೇತ್ರೀಯ ಕಾರ್ಯಾಲಯದಲ್ಲಿ ಮಂಗಳವಾರ 69ನೇ ಕನ್ನಡ ರಾಜ್ಯೋತ್ಸವವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಕಲ್ಯಾಣ…