ಮಕ್ತಂಪುರದ ಆದ್ಯ ವಚನಕಾರ ದಾಸಿಮಯ್ಯ ದೇವಸ್ಥಾನದಲ್ಲಿ ಶ್ರಾವಣ ಉಪನ್ಯಾಸ

ಕಲಬುರಗಿ: ಶರಣರು ಧರ್ಮದಲ್ಲಿ ಸಾಮಾಜಿಕ ಬದುಕಿಗೆ, ನ್ಯಾಯಕ್ಕೆ ಒತ್ತು ನೀಡಿದ್ದಾರೆ. ಅವರು ತೋರಿದ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು ಎಂದು ಪ್ರೊ.ಸಂಜಯ ಮಾಕಲ್ ಹೇಳಿದರು.

ಪುನರ್ಜನ್ಮ ಪಡೆದ ಬಸವಣ್ಣ: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಫ.ಗು.ಹಳಕಟ್ಟಿ ಅವರ ಸೇವೆ ಸ್ಮರಣೀಯ. ೧೨ನೇ ಶತಮಾನದ ಬಸವಣ್ಣನವರು ಫ.ಗು.ಹಳಕಟ್ಟಿ ಅವರಿಂದಲೇ ಪುನರ್ಜನ್ಮ ಪಡೆದರು. ಹಳಕಟ್ಟಿ ವಚನ ಸಾಹಿತ್ಯ ಸಂಗ್ರಹಿಸಿ. ಅವುಗಳನ್ನು ಪ್ರಚುತ ಪಡಿಸದಿದ್ದರೆ, ಬಸವಣ್ಣ ಸೇರಿದಂತೆ ವಚನಕಾರರು ನಮಗೆ ಪರಿಚಯವೇ ಆಗುತ್ತಿರಲಿಲ್ಲ. -ಪ್ರೊ. ಸಂಜಯ ಮಾಕಲ್

ಮಕ್ತಂಪುರದ ಆದ್ಯ ವಚನಕಾರ ಶ್ರೀ ದಾಸಿಮಯ್ಯ ದೇವಸ್ಥಾನದಲ್ಲಿ ಸಪ್ತ ನೇಕಾರ ಸೇವಾ ಸಂಘದ ಅಡಿಯಲ್ಲಿ ಸಪ್ತ ಸಾಲಿಗಳ ಧಾರ್ಮಿಕ ಸಮಿತಿಗಳ ಜಂಟಿ ಆಶ್ರಯದಲ್ಲಿ ಭಾನುವಾರ ಸಂಜೆ ನಡೆದ ಶ್ರಾವಣ ಮಾಸದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮ ಎಂದರೆ ಜೀವ, ಜಗತ್ತು, ದೇವರು ಆಗಿದೆ. ಇವುಗಳ ಸಂಬಂಧವನ್ನು ಧರ್ಮ ತಿಳಿಸುತ್ತದೆ ಎಂದರು.

ಎಲ್ಲಾ ಶರಣರು ಕಾಯಕ ದೊಡ್ಡದು ಎಂದು ತಿಳಿಸಿ, ಅದರಂತೆ ನಡೆದುಕೊಂಡಿದ್ದಾರೆ. ಕಾಯಕದ ಮೂಲಕವೇ ಅವರು ದೊಡ್ಡವರಾಗಿ, ದೇವರಾಗಿದ್ದಾರೆ. ಇದರಿಂದ ಎಲ್ಲಾ ಶರಣರು ಎಲ್ಲರಿಗೂ ಗುರುಗಳೇ ಅಗಿದ್ದಾರೆ. ಶರಣರು ಬದುಕನ್ನು ರೂಪಿಸಿ, ಬದುಕಲು ಕಲಿಸಿದರು. ಧರ್ಮದಿಂದ ನಾವು ಬದುಕುವಂತಾಗಬೇಕು. ಇದರಿಂದ ಬದುಕು ಪರಿಪೂರ್ಣವಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಯಲು ಗ್ರಂಥಾಲಯದ ರೂವಾರಿ, ಹಿರಿಯ ಪತ್ರಕರ್ತ ಸುಭಾಷ ಬಣಗಾರ ಮಾತನಾಡಿ, ೧೨ನೇ ಶತಮಾನದ ಶರಣರು ಕಾಯಕಕ್ಕೆ ಹೆಚ್ಚು ಮಹತ್ವ ನೀಡಿದರು. ಕಾಯಕವೇ ಕೈಲಾಸ ಎಂದು ನಡೆದಂತೆ ನುಡಿದರು. ನುಡಿದಂತೆ ನಡೆದು ದೇವರಾದರು ಎಂದರು.

ಸುರಪುರ ತಾಲೂಕಿನ ಮುದನೂರು ಗ್ರಾಮದ ದಾಸಿಮಯ್ಯ ೧೧ನೇ ಶತಮಾನದ ಶರಣರಾಗಿದ್ದಾರೆ. ದಾಂಪತ್ಯ ಜೀವನಕ್ಕೆ ಒಳಪಟ್ಟರೂ, ದೇವರನ್ನು ಪ್ರತ್ಯಕ್ಷವಾಗಿಸಿಕೊಂಡು ದೇವರ ದಾಸಿಮಯ್ಯ ಆದರು. ದೇವರ ಆಶೀರ್ವಾದಂತೆ ಬಟ್ಟೆ ನೇಯುವ ಮೂಲಕ ಜೇಡರ ದಾಸಿಮಯ್ಯ ಆದರು. ನೂರಾರು ವಚನಗಳನ್ನು ರಚಿಸುವ ಮೂಲಕ ಆದ್ಯ ವಚನಕಾರರೂ ಆದರು ಎಂದು ಹೇಳಿದರು.

ಪಟ್ಟಸಾಲಿ ಸಮಾಜದ ಅಧ್ಯಕ್ಷ ಮಡಿವಾಳಪ್ಪ ಹತ್ತೂರೆ ಅವರು ಮಾತನಾಡಿದರು. ಸಪ್ತ ನೇಕಾರ ಸಂಘದ ಅದ್ಯಕ್ಷ ಶಿವಲಿಂಗಪ್ಪ ಅಸ್ಟಗಿ ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರೇವಣಸಿದ್ದಪ್ಪ ಗಡ್ಡದ, ಕುರಹಿನಶೆಟ್ಟಿ ಸಮಾಜದ ಅಧ್ಯಕ್ಷ ಬಸವರಾಜ ಕರದಳ್ಳಿ, ಹಿರಿಯ ವಕೀಲರಾದ ಶಿವಲಿಂಗಪ್ಪಾ ಅಷ್ಟಗಿ ಉಪಸ್ಥಿತರಿದ್ದರು. ಮುಖಂಡರಾದ ವಿಮೋದ ಜನೇವರಿ ವಂದಿಸಿದರು. ರೇವಣ್ಣ ಸಿದ್ದಪ್ಪಾ ಗಡ್ಡದ, ಚಂದ್ರಶೇಖರ ಮ್ಯಾಳಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪಟ್ಟಸಾಲಿ ಸಮಾಜದ ಖಜಾಂಚಿ ಶಿವಶಂಕರ ನನ್ನಾ, ಸದಸ್ಯರಾದ ಶರಣಪ್ಪ ಮಾಳಗೆ, ಶರಣು ಲಖಮಣ, ದಯಾನಂದ ಖದ್ದೆ, ಭಾಗೇಶ ಹಾರಕೆ, ನಾಗಣ್ಣ ಹಬ್ಬಣ, ದುಗ್ಗಳ್ಳೆ ದೇವಿ ಮಹಿಳಾ ಅಕ್ಕನ ಬಳಗದ ಅಧ್ಯಕ್ಷರಾದ ಗೀತಾಂಜಲಿ ಮ್ಯಾನಾಳೆ, ಶೋಭಾ ಆರ ಗಡ್ಡದ, ಶಿವಗುಂಡೇ, ಶ್ರೀಮತಿ ಹತ್ತೂರೆ, ಶ್ರೀಮತಿ ಸರುಬಾಯಿ ಮುಂಡಾಸೆ ಇತರರು ಇದ್ದರು, ನೇಕಾರ ಸಂಪದ ಮಾಸ ಪತ್ರಿಕೆಯ ಸಂಪಾದಕ ಭಾಪ್ರೇ ವಿಜಯ ಕುಮಾರ ಉಪಸ್ಥಿತರಿದ್ದರು.

emedialine

Recent Posts

ನಾಡಹಬ್ಬ ಆಚರಣೆ ಅಂಗವಾಗಿ ನಾಡ ದೇವತೆ ಸ್ತಬ್ಧ ಚಿತ್ರಗಳ ಮೆರವಣಿಗೆ

ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…

13 hours ago

ವೀರಪ್ಪ ನಿಷ್ಠಿ ಕಾಲೇಜ್ ಮಹಾತ್ಮ ಗಾಂಧಿಜಿ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ

ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…

13 hours ago

ಲೈಂಗಿಕ ದೌರ್ಜನ್ಯ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ 8ಕ್ಕೆ ಸುರಪುರ ಬಂದ್

ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…

13 hours ago

ಗರ್ಭಿಣಿ ಮಹಿಳೆಯರಿಗೆ ಹಣ್ಣು ಹಂಪಲು ವಿತರಣೆ

ಕಲಬುರಗಿ:  ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…

13 hours ago

ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…

13 hours ago

ಜುಡೋಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಕಲಬುರಗಿ: ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯಮಟ್ಟದ ಶಾಲಾ ಮಕ್ಕಳ ಆಟೊಗಳ ಸ್ಪರ್ಧೆ 2024 25 ಈಚೆಗೆ ಬೆಂಗಳೂರಿನಲ್ಲಿ ನಡೆದ…

13 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420