ಬಿಸಿ ಬಿಸಿ ಸುದ್ದಿ

ಸಹೋದರ-ಸಹೋದರಿಯರ ಬಾಂದವ್ಯ ಬಲಪಡಿಸುವ ದಿನವೇ ರಕ್ಷಾಬಂಧನ

ಶಹಾಬಾದ: ಮಾನವನ ಜೀವನದಲ್ಲಿ ಸಂಬಂಧಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಅದರಲ್ಲೂ ಅಣ್ಣ-ತಂಗಿಯರ ಬಾಂಧವ್ಯ ತುಂಬಾ ಪವಿತ್ರ.ಇಂತಹ ಸಹೋದರ-ಸಹೋದರಿಯರ ನಡುವಿನ ಬಾಂದವ್ಯದ ಬೆಸುಗೆಯನ್ನು ಬಲಪಡಿಸಲು ಇರುವ ದಿನವೇ ರಕ್ಷಾಬಂಧನ ಎಂದು ಎಸ್‍ಜಿವರ್ಮಾ ಹಿಂದಿ ಪ್ರೌಢಶಾಲೆಯ ಶಿಕ್ಷಕ ಬಾಬಾಸಾಹೇಬ ಸಾಳುಂಕೆ ಹೇಳಿದರು.

ಅವರು ಬುಧವಾರದಂದು ನಗರದ ಎಸ್.ಜಿ.ವರ್ಮಾ ಹಿಂದಿ ಪ್ರೌಢಶಾಲೆಯಲ್ಲಿ ಆಯೋಜಿಸಿದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಹಬ್ಬ ಕೇವಲ ರಕ್ತ ಸಂಬಂಧವಾಗಬೇಕಿಲ್ಲ.ಬದಲಾಗಿ ಎಂದು ಅಳಿಸಲಾಗದ ಅನುಬಂಧವಾಗಿರಬಹುದು. ಇದು ಜಾತಿ ಧರ್ಮಗಳನ್ನು ಮೀರಿ ನಿಲ್ಲುವ ಭಾತೃತ್ವದ ಹಬ್ಬವಾಗಿದೆ ಎಂದರು.ಧಾರ್ಮಿಕ,ಸಾಂಸ್ಕøತಿಕವಾಗಿ ಆಚರಿಸುವ ರಕ್ಷಾಬಂಧನ ಹಬ್ಬ ನೈತಿಕ ಮೌಲ್ಯಗಳನ್ನು ಜಾಗೃತಗೊಳಿಸಿ, ಪವಿತ್ರ ಸಬಂಧವನ್ನು ಬೆಸೆಯುವ ಪರಂಪರೆಯಾಗಿದೆ. ಇದನ್ನು ನಾವೆಲ್ಲರೂ ಉಳಿಸಿ ಬೆಳೆಸಿಕೊಂಡು ಹೋಗುವ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದ ಎಸ್.ಜಿ.ವರ್ಮಾ ಪ್ರೌಢಶಾಲೆಯ ಮುಖ್ಯಗುರು ಮಲ್ಲಿನಾಥ ಪಾಟೀಲ ಮಾತನಾಡಿ,ಈ ಹಬ್ಬವು ಸಹೋದರ ಮತ್ತು ಸಹೋದರಿಯ ನಡುವಿನ ಧಾರ್ಮಿಕ ಬಾಂಧವ್ಯಕ್ಕೆ ಹೆಸರಾಗಿದೆ. ರಕ್ಷಾ ಎಂದರೆ ಸುರಕ್ಷತೆ ಮತ್ತು ಬಂಧನ ಎಂದರೆ ಬಂಧ ಅಥವಾ ಬಾಂಧವ್ಯ. ಸಹೋದರಿಯರು ತಮ್ಮ ಸಹೋದರರ ಕೈಗೆ ಪವಿತ್ರ ದಾರವನ್ನು ಕಟ್ಟುತ್ತಾರೆ. ಪ್ರತಿಯಾಗಿ ಅವನ ರಕ್ಷಣೆಯನ್ನು ಬಯಸುತ್ತಾರೆ ಎಂದರು.

ಶಿಕ್ಷಕಿ ಲತಾ ಸಾಳುಂಕೆ ಪ್ರಾಸ್ತಾವಿಕ ಮಾತನಾಡಿ, ಪುರಾಣಗಳ ಪ್ರಕಾರ, ಶ್ರೀಕೃಷ್ಣನು ಆಕಸ್ಮಿಕವಾಗಿ ತನ್ನ ಸುದರ್ಶನ ಚಕ್ರದಿಂದ ತನ್ನ ಬೆರಳನ್ನು ಕತ್ತರಿಸಿಕೊಂಡಾಗ ದ್ರೌಪದಿ ತನ್ನ ಸೀರೆಯ ತುಂಡನ್ನು ಹರಿದು ಶ್ರೀಕೃಷ್ಣನ ಗಾಯದ ಸುತ್ತಲೂ ರಕ್ತ ಹರಿಯುವುದನ್ನು ತಡೆಯಲು ಕಟ್ಟಿತ್ತಾಳೆ. ಮತ್ತು ಆ ಬಟ್ಟೆಯನ್ನು ಪವಿತ್ರ ದಾರವೆಂದು ಪರಿಗಣಿಸಲಾಗುತ್ತದೆ. ಆ ದಿನದಿಂದ, ಶ್ರೀಕೃಷ್ಣನು ದ್ರೌಪದಿಯನ್ನು ಯಾವುದೇ ಸಂದರ್ಭದಲ್ಲಿ ರಕ್ಷಿಸುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ಅಂದಿನಿಂದ ಇಂದಿನವರೆಗೂ ಪವಿತ್ರ ರಕ್ಷಬಂಧನ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

ಎಸ್.ಎಸ್.ನಂದಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸುಧೀರ ಕುಲಕರ್ಣಿ ವೇದಿಕೆಯ ಮೇಲಿದ್ದರು. ಶಿಕ್ಷಕಿಯರಾದ ವಿಜಯಲಕ್ಷ್ಮಿ ವೆಂಕಟೇಶ, ಗೀತಾ.ಪಿ. ಸಿಪ್ಪಿ, ರಂಜಿತಾ ಹಿರೇಮಠ,ಭಾರತಿ ಸಾಲೋಮನ್,ನಾಗವೇಣಿ ಕಂಬಾನೂರ ಸೇರಿದಂತೆ ಶಾಲಾ ಮಕ್ಕಳು ಇದ್ದರು. ಮಹೇಶ್ವರಿ ಗುಳಿಗಿ ನಿರೂಪಿಸಿದರು, ಭಾರತಿ ಶ್ರೀರಾಮ ಚವ್ಹಾಣ ವಂದಿಸಿದರು.

emedialine

Recent Posts

ಸತ್ಯಂ ಶಿವಂ ಸುಂದರಂ: ದೇವರ ಸ್ವರೂಪ ಕಟ್ಟಿಕೊಟ್ಟ ಶರಣರು

ನಮ್ಮ ಬದುಕಿನಲ್ಲಿ ಸಾಧನೆಯಿಲ್ಲದೆ ಪ್ರತಿಫಲ ಪಡೆಯುವುದು ಕಷ್ಟ. ಹೀಗಾಗಿ ನಾವು ವಚಿಸುವ ನುಡಿ ಶುದ್ಧವಾಗಿರಲಿ. ನಾಲಿಗೆಯ ಮೇಲೆ ಸತ್ಯ ಮೂಡಿ…

2 hours ago

ವಾಡಿ: ಹಲಕಟ್ಟಾ ದರ್ಗಾ ಶರೀಫ್ 47ನೇ ಉರುಸ್ ಜು. 20ಕ್ಕೆ

ವಾಡಿ: ಕಲ್ಯಾಣ ಕರ್ನಾಟಕದ ಸೂಫಿಯಾಗಿರುವ ಹಜರತ್ ಖಾಜಾ ಸೈಯದ್ ಮೊಹಮ್ಮದ್ ಬಾದಶಾ ಖಾದ್ರಿ ಚಿಸ್ತಿ ಯಾಮನಿ ಖದೀರ್ (ರ.ಅ) ಹಲಕಟ್ಟಾ…

2 hours ago

ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆಗೆ ಅಭಿನಂದಿಸಿದ ಇರ್ಫಾನ್ ಅಹ್ಮದ್ ಸರಡಗಿ

ಕಲಬುರಗಿ: ಕರ್ನಾಟಕದ ಧೀಮಂತ ನಾಯಕ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರ 83ನೇ ಜನ್ಮದಿನ ನಿಮಿತ್ತ ಮಾಜಿ ಸಂಸದ…

3 hours ago

ಅನರ್ಹ ಬಿ.ಪಿ.ಎಲ್ ಪಡಿತರ ಚೀಟಿ ಪತ್ತೆ ಹಚ್ಚಿ: ಅಕ್ರಮ‌ ಮದ್ಯ ಮಾರಾಟಕ್ಕೆ ಬ್ರೆಕ್ ಹಾಕಿ| ಡಿ.ಸಿ. ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಉಳ್ಳವರು ಸಹ ಸರ್ಕಾರಿ ಸೌಲಭ್ಯ ಪಡೆಯಲು ಬಿ‌.ಪಿ‌.ಎಲ್ ಪಡಿತರ ಚೀಟಿ ಪಡೆದಿರುವ ಸಾಧ್ಯತೆ ಇದ್ದು, ಕೂಡಲೆ ಇಂತಹ ಅನರ್ಹ…

20 hours ago

ಕುಂಬಾರ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ನೀಡಲು ಒತ್ತಾಯ

ಶಹಾಬಾದ: ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಕುಂಬಾರ ಸಮಾಜದ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ಅನುದಾನ ನೀಡುವ ಮೂಲಕ ಕಲಬುರಗಿ…

22 hours ago

ಪರಿಸರಸ್ನೇಹಿ ಪರ್ಯಾಯ ಇಂಧನಗಳ ಬಳಕೆ ಅಗತ್ಯ

ಶಹಬಾದ: ಪರಿಸರ ಮಾಲಿನ್ಯ ಉಂಟು ಮಾಡುವ ಇಂಧನಗಳ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸ್ನೇಹಿಯಾಗುವ ಪರ್ಯಾಯ ಇಂಧನಗಳ ಬಳಕೆ ಮಾಡಿದಲ್ಲಿ…

22 hours ago