ಗ್ರಾಮ ನೈರ್ಮಲ್ಯಿಕರಣವಾಗ ಬೇಕಾದರೆ ನಡವಳಿಕೆಯಲ್ಲಿ ಬದಲಾವಣೆಯಾಗಬೇಕು

ಕಲಬುರಗಿ:ಗ್ರಾಮಗಳು ಸಂಪೂರ್ಣ ಸ್ವಚ್ಛತೆಯಿಂದ ಹಾಗೂ ನೈರ್ಮಲ್ಯಿಕರಣದಿಂದ ಇರಬೇಕಾದರೆ ಹಳೆಯ ನಡವಳಿಕೆ/ ಪದ್ದತಿ ಬದಲಾದಾಗ ನಗರದಂತೆ ಗ್ರಾಮಗಳು ಸಂಪೂರ್ಣ ಸ್ವಚ್ಛತೆಯಿಂದ ಕೂಡಿರುತ್ತದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭನ್ವರಸಿಂಗ್ ಮೀನಾ ರವರು ಹೇಳಿದರು.

ನಗರದಲ್ಲಿರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ರಾಜ್ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ಗ್ರಾಮೀಣಾಭೀವೃದ್ಧಿ ಪಂಚಾಯತ ರಾಜ್ ಇಲಾಖೆ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಂಸ್ಥೆ ಮೈಸೂರು, ಸಂಜೀವಿನಿ ಎನ್.ಆರ್.ಎಲ್.ಎಂ., ಸ್ವಚ್ಛಭಾರತ ಮಿಷನ್, ಅರ್ಬನ್ ಮ್ಯಾನೇಜ್ ಮೆಂಟ್ ಸೆಂಟರ ರವರ ಆಶ್ರಯದಲ್ಲಿ ಆಯೋಜಿಸಿದ್ದ ಗ್ರಾಮೀಣ ಪ್ರದೇಶದಲ್ಲಿನ ಸ್ವಚ್ಛತಾಗಾರರ ಸುರಕ್ಷತೆ ಮತು ಘನತೆ ಕುರಿತು3 ದಿನಗಳ ತರಬೇತುದಾರರ ತರಬೇತಿ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಸಿ ಮಾತನಾಡುತ್ತಿದ್ದ ಅವರು ಗ್ರಾಮಗಳಲ್ಲಿ ಸ್ವಚ್ಛ ಸಂಕೀರ್ಣ ಘಟಕಗಳಿದ್ದು, ಪ್ರತಿಯೊಬ್ಬರು ಗ್ರಾಮಕ್ಕೆ ಬರುವ ಸ್ವಚ್ಛ ವಾಹಿನಿಗೆ ತಮ್ಮ ಮನೆಯ ಕಸವನ್ನು ನೀಡಿದರೆ ಗ್ರಾಮ ಸ್ವಚ್ಛತೆಯಿಂದ ಇರುತ್ತದೆ. ಹಾಗೆಯೇ ಬಯಲು ಶೌಚಾಲಯಕ್ಕೆ ಹೋಗದೆ ಮನೆಯಲ್ಲಿ ಶೌಚಾಲಯ ಕಟ್ಟಿ ಉಪಯೋಗಿಸಿದರೆ ಅವರ ಕುಟುಂಬವಲ್ಲದೆ, ಗ್ರಾಮದ ಪರಿಸರವು ಆರೋಗ್ಯದಿಂದರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮೀಣಾಭೀವೃದ್ಧಿ ಆಯುಕ್ತಾಲಾಯದ ಪ್ರಿಯಾಂಕ ಮೇರಿ ಪ್ರಾನ್ಸಿಸ್ ರವರು ವಿಡಿಯೋ ವರ್ಚುವಲ್ ಮೂಲಕ ಕಾರ್ಯಕ್ರಮ ಕುರಿತು ಮಾತನಾಡಿದರು. ನಂತರ ವೇದಿಕೆ ಮೇಲೆ ಆಸೀನರಾಗಿದ್ದ ಯುನಿಸೆಫ್-ವಾಷ್ ಕರ್ನಾಟಕ, ತೆಲಂಗಾಣ ಮುಖ್ಯಸ್ಥರಾದ ಪ್ರಭಾತ್ ಮಟ್‍ಪಾಡಿ ರವರು ತರಬೇತಿಯ ರೂಪು-ರೇಷೆ ಉದ್ದೇಶದ ಕುರಿತು ಮಾತನಾಡಿದರು.

ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಂಸ್ಥೆಯ ಮೈಸೂರು ಬೋಧಕರಾದ ಎಸ್.ಎಚ್.ಪ್ರಕಾಶ, ಹಾಗೂ ಪ್ರಾದೇಶಿಕ ಕಚೇರಿಯ ಬೋಧಕರಾದ ಶಿವಪುತ್ರ ಹಾಗೂ ಡಾ.ರಾಜು ಎಂ.ಕಂಬಳಿಮಠ ವೇದಿಕೆಯಲ್ಲಿ ಆಸೀನರಾಗಿ ಕಾರ್ಯಕ್ರಮ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಯುನಿಸೆಫ್ ಸಂಯೋಜಕರಾದ ಡಾ.ದಿಲೀಪ್ ಕಾರ್ಯಕ್ರಮ ನಿರೂಪಿಸಿದರು, ಯುನಿಸೆಪ್ ಕೆ.ಎಸ್.ಆರ್.ಎಲ್.ಪಿ.ಎಸ್ ಸರ್ಪೋಟೆಡ್ ಸಮಾಲೋಚಕರಾದ ಗಿರೀಶ ಕುಮಾರ ಪ್ರಾಸ್ತವಿಕ ಮಾತನಾಡಿದರು. ಯುನಿಸೆಫ್ ಸಮಾಲೋಚಕರಾದ ಗೋವಿಂದರಾಜಲು ರವರು ಸರ್ವರನ್ನು ಸ್ವಾಗತಿಸಿದರು. ಯುನಿಸೆಫ್ ಸಂಜೀವಿನಿ ಸಮಾಲೋಚಕರಾದ ಚಂದ್ರಕಾಂತ ಹೀರೆಮಠ ವಂದಿಸಿದರು.

emedialine

Recent Posts

ಕಲಬುರಗಿ: ವಕ್ಫ್ ಬಚಾವ್ ಪ್ರತಿಭಟನಾ ಸಮಾವೇಶ ಇಂದು

ಕಲಬುರಗಿ: ಕೇಂದ್ರ ಸರಕಾರ ಜಾರಿಗೊಳ್ಳಿಸುತ್ತಿರುವ ವಕ್ಫ್ ಬಚಾವ್ ಆಂದೋಲನದ ನಿಮಿತ್ತ ಇಂದು ಹಫ್ತ್ ಗುಂಬಜ್ ದರ್ಗಾ ರಸ್ತೆಯ ನ್ಯಾಷನಲ್ ಕಾಲೇಜು…

2 hours ago

ಟ್ರಾಮಾ‌ ಕೇರ್ ನಲ್ಲಿ ನಿರಂತರ ಚಿಕಿತ್ಸೆ, : ವೈದ್ಯರ ಪರಿಶ್ರಮಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಶ್ಲಾಘನೆ

ಕಲಬುರಗಿ: ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಯುವಕನೊಬ್ಬನಿಗೆ ಸುಮಾರು 45 ದಿನಗಳ ಕಾಲ ಐಸಿಯು‌ನಲ್ಲಿ‌‌ ಚಿಕಿತ್ಸೆ ನೀಡುವುದರ ಜೊತೆಗೆ ಅಗತ್ಯವಿದ್ದ ಕ್ಲಿಷ್ಟಕರ…

10 hours ago

ಇಂದಿನ ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೆತರ ಚಟುವಟಿಕೆ ಅನಿವಾರ್ಯ

ಕಲಬುರಗಿ; ಕ್ರೀಡ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಮಕ್ಕಳ ಸರ್ವೋತೊಅಭಿವೃದ್ದಿಗೆ ಮುಂದಾಗಿರುವುದು ಸಂತೋಷದಾಯಕ ಜೊತೆಗೆ ಮಕ್ಕಳಿಗೆ ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಹ…

11 hours ago

ಗ್ರಾಮೀಣ ಪ್ರದೇಶದಲ್ಲಿ ಘನ-ತಾಜ್ಯ ನಿರ್ವಹಣೆ ಕುರಿತು ತರಬೇತಿ

ಕಲಬುರಗಿ: ನಗರದಲ್ಲಿರುವ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆ ಪ್ರಾದೇಶಿಕ ಕೇಂದ್ರ ಕಲಬುರಗಿಯಲ್ಲಿ, ಅಬ್ದುಲ್‌…

11 hours ago

ಶ್ರೀ ವಿನಾಯಕ ಮಿತ್ರ ಮಂಡಳಿಯಿಂದ ಗಣೇಶ್ ವಿಸರ್ಜನೆ

ಕಲಬುರಗಿ: ಬಿದ್ದಾಪುರ ಕಾಲೋನಿಯಲ್ಲಿ ಶ್ರೀ ವಿನಾಯಕ ಮಿತ್ರ ಮಂಡಳಿ ವತಿಯಿಂದ ಗಣೇಶ್ ವಿಸರ್ಜನೆ ಕಾರ್ಯಕ್ರಮವನ್ನು ನೆರವೇರಿತು. ವಿನಾಯಕ ಪುರಾಣಿಕ್, ಅನಿಲ್…

11 hours ago

ಅಯ್ಯಪ್ಪ ಸ್ವಾಮಿ ಮಹಾ ಪೂಜಾ ಕಾರ್ಯಕ್ರಮಕ್ಕೆ ಚಾಲನೆ

ಕಲಬುರಗಿ: ನಾಗನಹಳ್ಳಿ ಕ್ರಾಸ್‍ನಲ್ಲಿರುವ ಗುರುಸ್ವಾಮಿಗಳಾದ ಅಶೋಕ ಹೊನ್ನಳ್ಳಿ ಸನ್ನಿಧಾನದಲ್ಲಿ ಅಯ್ಯಪ್ಪ ಸ್ವಾಮಿ ಮಹಾ ಪೂಜಾ ಕಾರ್ಯಕ್ರಮದಲ್ಲಿ ಮುಗುಳನಾಗಾವ ಅಭಿನವ ಶ್ರೀ…

11 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420