ಬಿಸಿ ಬಿಸಿ ಸುದ್ದಿ

ಜನಸ್ನೇಹಿ ಪೊಲೀಸ್ ವಾತಾವರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ; ಪಿಎಸ್‍ಐ ಸುರೇಶಕುಮಾರ ಚವ್ಹಾಣ

ಕಲಬುರಗಿ: ಸಾರ್ವಜನಿಕ ಆಸ್ತಿ-ಪಾಸ್ತಿ ರಕ್ಷಣೆ, ಸಮಾಜದಲ್ಲಿ ಶಾಂತಿ ಕಾಪಾಡುವುದು, ನಾಗರಿಕ ಸುರಕ್ಷತೆ, ಅಪರಾಧಗಳನ್ನು ತಡೆಗಟ್ಟುವುದು, ಸೌಹಾರ್ಧತೆಯ ವಾತಾವರಣ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ಹಗಲು-ರಾತ್ರಿಯೆನ್ನದೇ ಶ್ರಮಿಸುತ್ತದೆ. ಅಪರಾದಗಳನ್ನು ಮಟ್ಟಹಾಕಿ, ಕಾನೂನಿನ ರಕ್ಷಣೆ ಮಾಡುವಲ್ಲಿ, ಜನಸ್ನೇಹಿ ಪೊಲೀಸ್ ವಾತಾವರಣ ನಿರ್ಮಿಸಲು ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ಪಿಎಸ್‍ಐ ಸುರೇಶಕುಮಾರ ಚವ್ಹಾಣ ಹೇಳಿದರು.

ಜೇವರ್ಗಿ ಪಟ್ಟಣದ ಬಸ್ ಸ್ಟಾಂಡ್ ಸಮೀಪವಿರುವ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಗುರುವಾರ ಜರುಗಿದ ‘ಜನಸ್ನೇಹಿ ಪೊಲೀಸ್ ಅಭಿಯಾನ ಕಾರ್ಯಕ್ರಮ’ದಲ್ಲಿ ಭಾಗವಹಿಸಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಪೊಲೀಸ್ ಠಾಣೆ, ಸಿಬ್ಬಂದಿಯ ಬಗ್ಗೆ ಭಯ ಬೇಡ, ಗೌರವ ನೀಡಿ. ಅವರನ್ನು ಮಾನವೀಯತೆಯಿಂದ ಕಾಣಿ. ಅಪರಾಧ ಕಾರ್ಯಗಳನ್ನು ತಡೆಗಟ್ಟುವಲ್ಲಿ ಪೊಲೀಸ್‍ರೊಂದಿಗೆ ಕೈಜೋಡಿಸಿ. ವಿದ್ಯಾರ್ಥಿ ದೆಸೆಯಿಂದಲೇ ಕಾಯ್ದೆ-ಕಾನೂನುಗಳನ್ನು ತಿಳಿದುಕೊಂಡು ಅನುಸರಿಸಿ. ಪೊಲೀಸ್‍ರು ದಂಡ ವಿಧಿಸುವುದು ಸಾರ್ವಜನಿಕರ ಶೋಷಣೆಗಾಗಿ ಅಲ್ಲ. ಬದಲಿಗೆ ಅಪರಾಧ ಪುನರಾವರ್ತನೆಯಾಗಬಾರದು ಎಂಬ ಉದ್ದೇಶದಿಂದ ಎಂಬುದನ್ನು ತಿಳಿಯಬೇಕು. ರಸ್ತೆ ನಿಯಮಗಳು, ಸಾಮಾನ್ಯ ಕಾನೂನಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು.

ಮಹಿಳಾ ಪೊಲೀಸ್ ಪೇದೆ ಕಾಶಿಂಬಿ ಅವರು ಪೋಕ್ಸೊ ಕಾಯ್ದೆ, ಮಹಿಳಾ ಕಾನೂನುಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಹಾಗೂ ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ, ಉಪನ್ಯಾಸಕ ಬಸಲಿಂಗಪ್ಪ ನಾಡಗೌಡ್, ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‍ಐ ಸಿದ್ರಾಮಪ್ಪ ನಿಂಬರ್ಗಾ, ಎಎಸ್‍ಐ ಜಗದೇವಿ, ಮುಖ್ಯ ಪೇದೆ ಮೌಲಪ್ಪ, ಬರಹಗಾರರಾದ ಲಾಲಪ್ಪ, ಮಲ್ಲಿಕಾರ್ಜುನ, ಉಪಸ್ಥಿತರಿದ್ದರು.

emedialine

Recent Posts

ತೊಗರಿ ಬೆಳೆ ಹಾನಿ ಪ್ರದೇಶಕ್ಕೆ‌ ಡಿ.ಸಿ ಭೇಟಿ: ಶೀಘ್ರ ಪರಿಹಾರದ ಭರವಸೆ

ಕಲಬುರಗಿ: ನ.28 ಜಿಲ್ಲೆಯಾದ್ಯಂತ ಮಣ್ಣಿನಲ್ಲಿ ತೇವಾಂಶದ ಕೊರತೆ ಹಾಗೂ ಒಣ ಬೇರು ಕೊಳೆ ರೋಗದಿಂದ ತೊಗರಿ ಒಣಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ…

13 hours ago

ಕರ್ಜಗಿ: ಹಜರತ್ ಖ್ವಾಜಾ ಸೈಫನ್ ಉರ್ಸ್

ಕರ್ಜಗಿ (ಕಲಬುರಗಿ): ನ.28 ಅಫಜಲಪುರ ತಾಲ್ಲೂಕಿನ ಸುಕ್ಷೇತ್ರ ಕುಬೇರ ಕರಜಗಿ ಗ್ರಾಮದ ಹಜರತ್ ಖ್ವಾಜಾ ಸೈಫನ್ ಮುಲ್ಕ 891 ಜಾತ್ರೆ…

15 hours ago

ಮಹಿಪಾಲರೆಡ್ಡಿ ನಟನೆಯ `ತಮಟೆ’ ಸಿನಿಮಾ ನಾಳೆ ಬಿಡುಗಡೆ

ಕಲಬುರಗಿ, ನ.೨೮ - ಹಿರಿಯ ಚಿತ್ರನಟ ಮದನ್ ಪಟೇಲ್ ಅವರು ನಾಯಕ ನಟರಾಗಿರುವ ಕಾದಂಬರಿ ಆಧಾರಿತ `ತಮಟೆ’ ಸಿನಿಮಾ ನವೆಂಬರ್…

18 hours ago

ಎಂ.ಎಸ್ ಇರಾಣಿ ವಿದ್ಯಾರ್ಥಿಗೆ ದ್ವೀತಿಯ ಸ್ಥಾನ

ಕಲಬುರಗಿ: ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸರ್ಕಾರಿ ಪದವಿ ಸ್ವಾಯತ್ತ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಮಹಾನಗರ ಪಾಲಿಕೆ,ಸಮಾಜ ಕಲ್ಯಾಣ ಇಲಾಖೆ, ಕನ್ನಡ…

2 days ago

ವಿದ್ಯಾರ್ಥಿಗಳಿಗೆ ಸಂವಾದ ಕಾರ್ಯಕ್ರಮ

ಕಲಬುರಗಿ: ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿ ಹಾಗೂ ಸಿ.ಆರ್.ಸಿ ಸ್ನೇಹ ಬಳಗ ಕಲಬುರಗಿ ಮತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ…

2 days ago

ಸ್ಲಂ ಜನಾಂದೋಲನ ಜಿಲ್ಲಾ ಘಟಕದಿಂದ ಹಕ್ಕು ಪತ್ರ ನೊಂದಣಿ ಖಾತ ಪ್ರತಿ ವಿತರಣೆ

ಕಲಬುರಗಿ: ಸುವರ್ಣ ಭವನ (ಕನ್ನಡ ಭವನ)ದಲ್ಲಿ  ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ  ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ…

2 days ago