ಬಿಸಿ ಬಿಸಿ ಸುದ್ದಿ

ಅವಘಡದಿಂದ ಪಾರಾಗಲು ಮುಂಜಾಗೃತೆ ಅವಶ್ಯಕ; ಅಗ್ನಿಶಾಮಕ ಜೈಭೀಮ ಕೋರೆ

ಆಳಂದ; ಅಗ್ನಿ, ಜಲ, ವಿದ್ಯುತ್, ನೈಸರ್ಗಿಕ ಅವಘಡಗಳಿಂದ ಪಾರಾಗಲು ಮುಂಜಾಗೃತೆ ಅವಶ್ಯಕವಾಗಿದೆ ಎಂದು ಆಳಂದ ಅಗ್ನಿಶಾಮಕ ಠಾಣೆಯ ಜೈಭೀಮ ಕೋರೆ ಹೇಳಿದರು.

ಶನಿವಾರ ಪಟ್ಟಣದ ಎಸ್‍ಆರ್‍ಜಿ ಆಂಗ್ಲ್ ಮಾಧ್ಯಮ ಶಾಲೆಯ ಆವರಣದಲ್ಲಿ ಅಗ್ನಿಶಾಮಕ ಇಲಾಖೆ ವತಿಯಿಂದ ಜರುಗಿದ ಅಣುಕು ಪ್ರದರ್ಶನದಲ್ಲಿ ಇಲಾಖೆಯ ವತಿಯಿಂದ ಲಭ್ಯವಿರುವ ಸೇವೆಗಳು ಮತ್ತು ಇತರೆ ವಿಷಯಗಳ ಕುರಿತು ಮಾಹಿತಿ ನೀಡಿ ಮಾತನಾಡಿದರು.

ಪ್ರತಿ ವರ್ಷ ಇಲಾಖೆಯಿಂದ ಶಾಲೆ ಮಕ್ಕಳಿಗೆ ಅಗ್ನಿ ಅವಘಡ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ವಿವಿಧೆಡೆ ಅಗ್ನಿ ಅವಘಡಗಳಿಂದ ಪ್ರಾಣಹಾನಿಯಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬರುತ್ತಿರುವುದನ್ನು ಗಮನಿಸಿದಾಗ, ಅಗ್ನಿ ಅವಘಡಗಳು ಸಂಭವಿಸಲು ಸಾರ್ವಜನಿಕರ ಕೆಲವೊಂದು ನಿರ್ಲಕ್ಷ್ಯಗಳು ಕಾರಣವಾಗಿವೆ ಎಂಬುದನ್ನು ನಾವು ಗಮನಿಸಬಹುದಾಗಿದೆ ಎಂದರು.

ಸರ್ಕಾರಿ ಕಛೇರಿಗಳು, ಶಾಲಾ-ಕಾಲೇಜು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಅಗ್ನಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಗ್ನಿಶಾಮಕ ಇಲಾಖೆಯಿಂದ ಮಾಹಿತಿ, ತರಬೇತಿಯನ್ನು ಪಡೆದುಕೊಳ್ಳಬೇಕು. ಅಗ್ನಿ ಅವಘಡಗಳ ಸಂದರ್ಭದಲ್ಲಿ ಪ್ರತಿಯೊಂದು ಕ್ಷಣವೂ ಅಮೂಲ್ಯವಾಗಿದ್ದು, ತುರ್ತು ಸಂದರ್ಭದಲ್ಲಿ 112, 108, ಹತ್ತಿರದ ಅಗ್ನಿಶಾಮಕ ಠಾಣೆ, ಪೆÇಲೀಸ್ ಠಾಣೆಗೆ ಮಾಹಿತಿ ತಿಳಿಸಬೇಕು. ಅಗ್ನಿ ಅವಘಡಗಳಲ್ಲಿ ಬೆಂಕಿಗಿಂತಲೂ ಹೊಗೆಯೇ ಹೆಚ್ಚು ಅಪಾಯಕಾರಿಯಾಗಿದ್ದು, ಹೊಗೆಯಿಂದಲೇ ಜನರು ಬೇಗ ಉಸಿರುಗಟ್ಟಿ ಸಾಯುವ ಸಂಭವ ಹೆಚ್ಚಿರುತ್ತದೆ. ಬೆಂಕಿ ಆಕಸ್ಮಿಕ ಸಮಯದಲ್ಲಿ ಎಚ್ಚರಿಕೆಯ ಕರೆ ಗಂಟೆಯನ್ನು ಬಾರಿಸಲು ಮುಂದಾಗಬೇಕು ಎಂದು ಹೇಳಿದರು.

ಬೆಂಕಿ ಹೊತ್ತಿಕೊಂಡಾಗ ಕಟ್ಟಡದಿಂದ ಹೊರಬರಲು ಹತ್ತಿರದಲ್ಲಿರುವ ನಿರ್ಗಮನ ದಾರಿಯನ್ನು ಬಳಸಬೇಕು. ಕಟ್ಟಡದಿಂದ ಹೊರಬರಲು ಇರುವ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡುವಂತಿರಬಾರದು. ಭಯದಿಂದ ಓಡದೇ ಶಾಂತಿಯಿಂದ ವೇಗ ನಡಿಗೆಯಲ್ಲಿ ಹೊರ ಬರಲು ಯತ್ನಿಸಬೇಕು. ತುರ್ತು ಸಂದರ್ಭಗಳಲ್ಲಿ ಮೆಟ್ಟಿಲುಗಳನ್ನು ಬಳಸಬೇಕೆ ಹೊರತು, ಲಿಫ್ಟ್‍ಗಳನ್ನು ಉಪಯೋಗಿಸಬಾರದು. ತುರ್ತು ಸಂದರ್ಭಗಳಲ್ಲಿ ಸುಗಮವಾಗಿ ಹೊರ ಹೋಗುವ ನಿರ್ಗಮನ ಹಾದಿಯನ್ನು ಮುಚ್ಚಿಡಬಾರದು. ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಉರಿಯುವ ವಸ್ತುಗಳನ್ನು ಶೇಖರಣೆ ಮಾಡಬಾರದು. ಅಗ್ನಿನಂದಕಗಳನ್ನು ಸುಸ್ಥಿತಿಯಲ್ಲಿಡಬೇಕು, ಅಲ್ಲದೆ ಉಪಯೋಗಿಸುವ ರೀತಿಯನ್ನು ತಿಳಿದುಕೊಂಡಿರಬೇಕು ಎಂದರು.

ಅಡುಗೆ ಅನಿಲ ಗ್ಯಾಸ್ ವಿತರಕರಿಂದ ಗ್ಯಾಸ್ ಸಿಲಿಂಡರ್ ಪಡೆಯುವಾಗ ವಾಷರ್ ಇರುವುದರ ಬಗ್ಗೆ ಖಚಿತ ಪಡೆಸಿಕೊಳ್ಳಬೇಕು. ಸಿಲಿಂಡರನ ಅವಧಿಯನ್ನು ಪರಿಶೀಲಿಸಿ ಪಡೆದುಕೊಳ್ಳಬೇಕು. ಸ್ಟೌವನ್ನು ನೆಲದ ಮೇಲೆ ಇಟ್ಟು ಅಡುಗೆ ಮಾಡಬಾರದು, ಉತ್ತಮವಾದ ಗಾಳಿ ಬೆಳಕು ಇರುವ ಕಡೆ ಸಿಲಿಂಡರ್ ಬಳಸಬೇಕು. ಸುಲಭವಾಗಿ ಬೆಂಕಿ ಹತ್ತುವ ಸಾಮಗ್ರಿಗಳನ್ನು ಅಡುಗೆ ಮನೆಯಲ್ಲಿ ಇಡಬಾರದು, ಸಿಲಿಂಡರ್ ಮೇಲೆ ಬಿಸಿ ನೀರನ್ನು ಹಾಕಬಾರದು, ಸಿಲಿಂಡರ್‍ನ್ನು ಓರೆಯಾಗಿ ಅಥವಾ ತಲೆ ಕೆಳ ಮಾಡಿ ಇಡಬಾರದು.

ಪ್ರತಿ ಎರಡು ವರ್ಷಕ್ಕೊಮ್ಮೆ ರೆಗ್ಯುಲೇಟರಗೆ ಬಳಸುವ ಹೋಸ್ ಪೈಪ್ ತಪ್ಪದೆ ಬದಲಾಯಿಸಬೇಕು. ಮನೆಯಿಂದ ಆಚೆ ಅಥವಾ ಊರಿಗೆ ಹೋಗುವ ಸಂದರ್ಭಗಳಲ್ಲಿ ರೆಗ್ಯುಲೇಟರ್ ಆಫ್ ಮಾಡಿಯೇ ತೆರಳಬೇಕು. ಗ್ಯಾಸ್ ಗೀಸರ್ ಬಳಸುವವರು, ಸ್ನಾನಕ್ಕೆ ಬೇಕಿರುವ ಬಿಸಿ ನೀರು ಸಂಗ್ರಹಿಸಿದ ಬಳಿಕವೇ ಬಾತ್‍ರೂಂ ಬಾಗಿಲು ಹಾಕಿಕೊಳ್ಳಬೇಕು, ಅಲ್ಲದೆ ಬಾತ್‍ರೂಂನಲ್ಲಿ ಸಾಕಷ್ಟು ಗಾಳಿಯಾಡುವಂತೆ ಕಿಟಕಿ ವ್ಯವಸ್ಥೆ ಮಾಡಿಕೊಂಡಿರಬೇಕು ಎಂದರು.

ಅಗ್ನಿಶಾಮಕ ಇಲಾಖೆ ಏರ್ಪಡಿಸಿದ ಅಣುಕು ಪ್ರದರ್ಶನ ಕಾರ್ಯದಲ್ಲಿ ಇಲಾಖೆಯ ಸಿಬ್ಬಂದಿಗಳಾದ ಪ್ರಕಾಶ ಮಾಳಗೆ, ಸುರೇಶಕುಮಾರ ಚವ್ಹಾಣ, ರಾಜೇಂದ್ರ, ಸಿದ್ದಪ್ಪ, ಶಿವರಾಜ, ಪೈಲಟ್ ಸಂಜೀವಕುಮಾರ ಭಾಗವಹಿಸಿದ್ದರು.

ಪ್ರಾಚಾರ್ಯೆ ಜ್ಯೋತಿ ವಿಶಾಕ್ ಸೇರಿದಂತೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

13 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

15 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

22 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

22 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

22 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago