ಸುರಪುರ: ಶ್ರೀಕೃಷ್ಣರು ಕೊಟ್ಟ ಸಂದೇಶಗಳು ಲೋಕ ಮಾನ್ಯವಾದವುಗಳಾಗಿವೆ.ಅವರು ಮಾನವ ಜನಾಂಗದ ಸುಖ ಸಂತೋಷ ಮತ್ತು ನ್ಯಾಯಯುತವಾದ ಜೀವನಕ್ಕೆ ಉಪದೇಶ ನೀಡದವರು ಎಂದು ತಹಸೀಲ್ದಾರ ಸುರೇಶ ಅಂಕಲಗಿ ಮಾತನಾಡಿದರು.
ನಗರದ ತಹಸೀಲ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಯಾದವ(ಗೊಲ್ಲ) ಸಮಾಜದ ರಾಜ್ಯ ಉಪಾಧ್ಯಕ್ಷ ವಿಠಲ್ ಯಾದವ್ ಮಾತನಾಡಿ,ಶ್‌ಈಕೃಷ್ಣನು ಬಾಲ್ಯದಲ್ಲಿ ತುಂಬಾ ತುಂಟತನ ತೋರಿಸಿದ್ದರು.ಕೃಷ್ಣನು ಗೋವುಗಳ ಕಾಯುವ ಕಾಯಕದ ಮೂಲಕ ಜಗತ್ತಿಗೆ ಆದರ್ಶ ಪುರುಷನಾಗಿ ಕಂಡಿದ್ದಾರೆ.ಅಲ್ಲದೆ ಜಗತ್ಪ್ರಸಿದ್ದವಾದ ರಾಮಾಯಣ ಮತ್ತು ಮಹಾಭಾರತದಲ್ಲಿ ಶ್ರೀಕೃಷ್ಣ ತೋರಿದ ಅನೇಕ ಪವಾಡ ಸದೃಶ ಘಟನೆಗಳು ಎಂದಿಗು ಜನಮಾನಸದಲ್ಲಿ ಉಳಿದಿವೆ.ಅವರ ನ್ಯಾಯದನ ಮತ್ತು ಶ್ರೀಕೃಷ್ಣನನ್ನು ಭಜಿಸಿದವರಿಗೆ ಸದಾಕಾಲ ಕಾಯುವ ಕರುಣಾಮಯಿಯಾಗಿದ್ದಾರೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಮಿಸಲಾಯಿತು.ಈ ಸಂದರ್ಭದಲ್ಲಿ ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ,ಆರ್.ಐ ಗುರುಬಸಪ್ಪ,ಅಶೋಕ ಸುರಪುರಕರ್,ಉಪ ಖಜಾನಾಧಿಕಾರಿ ಮಂಗಲಕುಮಾರ ಗುಡಗುಂಟಿ ಮುಖಂಡರಾದ ನದೀಂ ಮುಲ್ಲಾ,ವಿರುಪಾಕ್ಷಿ ಕೋನಾಳ,ಶಿವರಾಜ ನಾಯಕ ಬೊಮ್ಮನಹಳ್ಳಿ, ಕೊಂಡಲ ನಾಯಕ,ರವಿ ನಾಯಕ ಇತರರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…