ಬಿಸಿ ಬಿಸಿ ಸುದ್ದಿ

ಕಾಲಮಿತಿಯಲ್ಲಿ ಕಲ್ಯಾಣದ ರಚನಾತ್ಮಕ ಪ್ರಗತಿಗೆ ದಿಟ್ಟ ಕ್ರಮ; ಡಾ. ಅಜಯ ಸಿಂಗ್ ಸಮಿತಿಯ ನಿಯೋಗಕ್ಕೆ ಭರವಸೆ

ಕಲಬುರಗಿ: ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ನಿಯೋಗದ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಡಾ.ಅಜಯ ಸಿಂಗ್ ರವರು ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಕಾಲಮಿತಿಯಲ್ಲಿ ದಿಟ್ಟ ಕ್ರಮ ಕೈಗೊಳ್ಳಲಾಗುವದೆಂದುಸಮಿಯ ನಿಯೋಗಕ್ಕೆ ಭರವಸೆ ನೀಡಿದರು.

ಇಂದು ಬೆಳಿಗ್ಗೆ ಐವಾನ್ ಶಾಹಿ ಅತಿಥಿ ಗೃಹದ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ  ಪರಿಣಿತ ತಜ್ಞರ ಮತ್ತು ಸಮಿತಿಯ ಮುಖಂಡರ ನಿಯೋಗದ ಸಮಾಲೋಚನಾ ಸಭೆ ಜರುಗಿತು.

ಈ ಸಭೆಯಲ್ಲಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಳಣ ದಸ್ತಿಯವರು ಕಲ್ಯಾಣದ ಕಲ್ಯಾಣಕ್ಕೆ ಸಂಬಂಧಿಸಿದಂತೆ 16 ಅಂಶಗಳ ವಿವರವಾದ ಪ್ರಸ್ತಾವನೆ ಸಲ್ಲಿಸಿ ವಿವರಿಸಿದರು,ಪ್ರೊ.ಆರ್.ಕೆ.ಹುಡಗಿ ಮತ್ತು ಪ್ರೊ.ಬಸವಾರಾಜ ಕುಮ್ನೋರ್ ರವರು ಮಾತನ್ನಾಡಿ  371ನೇಜೇ ಕಲಂ ಅಡಿ ಸ್ವಾಯತ್ತತೆ ಪಡೆದಿರುವ ಮಂಡಳಿ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ನಿಗದಿತ ಕಾಲಮಿತಿಯೊಳಗೆ  ಕಾರ್ಯಾಚರಣೆಯ ರೂಪದಲ್ಲಿ ಸಮಗ್ರ ಪ್ರಗತಿಗೆ ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸುವ ವಿಷಯಗಳ ಬಗ್ಗೆ ವಿವರಿಸಿದರು.

ಸಮಾಲೋಚನಾ ಸಭೆಯಲ್ಲಿ ಸಮಿತಿ ಮಂಡಿಸಿರುವ 16 ಅಂಶಗಳು ಇಂತಿವೆ

ಮಂಡಳಿಯಿಂದ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ 5 ವರ್ಷಗಳ ಗುರಿ ಇಟ್ಟುಕೊಂಡು ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸುವದು. ನಂಜುಂಡಪ್ಪ ವರದಿಯನ್ನು ಮಾನದಂಡವಾಗಿಟ್ಟು ಕೊಂಡು ಒಂದು ಗ್ರಾಮ ಪಂಚಾಯಿತಿಯನ್ನು ಘಟಕ ಮಾಡಿಕೊಂಡು ಕಲ್ಯಾಣದ ವರದಿ ರಚಿಸಬೇಕು ಎಂದು ತಿಳಿಸಿದರು.

ಕಲ್ಯಾಣದ ಪ್ರಗತಿಗೆ ಕೇಂದ್ರ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಹಣ ಪಡೆಯಲು ಪ್ರಸ್ತಾವನೆ ಸಲ್ಲಿಸಬೇಕು,  ಕೆಕೆಆರ್ ಡಿಬಿಗೆ ಮಂಜೂರಾಗುವ ಅನುದಾನ ಆಯಾ ಸಾಲಿನಲ್ಲಿ ಪೂರ್ಣ ಪ್ರಮಾಣದಲ್ಲಿ ವಿವಿಧ ಪ್ರಗತಿ ಕಾರ್ಯಾಗಳಿಗೆ ವೆಚ್ಚವಾಗಬೇಕು, ಮಂಡಳಿ ಅಡಿ ಮೇಲ್ವಿಚಾರಣಾ ಸಮಿತಿ, ಮೌಲ್ಯ ಮಾಪನ ಸಮಿತಿ, ಜಾಗೃತ ದಳ ಸಮಿತಿ (ವಿಜಿಲೆನ್ಸ್ ಕಮಿಟಿ) ಹೀಗೆ ಮೂರು ಸಮಿತಿಗಳು ರಚಿಸಬೇಕು, ಮಂಡಳಿಗೆ ವಾಸ್ತವ್ಯ ನೆಲೆಗಟ್ಟಿನಲ್ಲಿ ಅಧ್ಯಯನ ವಿರುವ ಆಯಾ ಕ್ಷೇತ್ರದ ಪರಿಣಿತರನ್ನು ಮಂಡಳಿಗೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿಕೊಳ್ಳಬೇಕು ಎಂದರು.

ಕಲ್ಯಾಣದ ಎಳು ಜಿಲ್ಲೆಗಳ ಎಲ್ಲಾ ಕ್ಷೇತ್ರಗಳ ಕನಿಷ್ಠ 35 ರಿಂದ 50 ಜನ ಚಿಂತಕರ ಒಂದು ಸಲಹಾ ಸಮಿತಿ ರಚಿಸಿ ವರ್ಷದಲ್ಲಿ ಕನಿಷ್ಠ ಎರಡು ಸಭೆಗಳು ಮಾಡಬೇಕು. ಮಂಡಳಿಯಿಂದ ಗುಣಮಟ್ಟದ ಕಾಮಗಾರಿ ಗಳು ನಡೆಯುವ ನಿಟ್ಟಿನಲ್ಲಿ ಕಠಿಣ ನಿಗಾ ವಹಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಮಂಡಳಿಯಿಂದ ಆಯಾ ಕ್ಷೇತ್ರದ ಪ್ರಗತಿ ಕಾರ್ಯಾಗಳಿಗೆ ಮಂಜೂರಾಗುವ ಹಣದಲ್ಲಿ ನಿಯಮ ಬಾಹಿರ ಲೋಪ, ಅವ್ಯವಹಾರ, ಭ್ರಷ್ಟಾಚಾರ ನಡೆದರೆ ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಜರುಗಬೇಕು. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮಂಡಳಿಯ ಸಭೆ ವರ್ಷದಲ್ಲಿ ಕನಿಷ್ಠ ಒಂದಾದರೂ ನಡೆಸಬೇಕು ಎಂದು ತಿಳಿಸಿದರು.

ರಾಜ್ಯದ ರುಟಿನ್ ಬಜಟ್ ಅಡಿಯ ಅಭಿವೃದ್ಧಿಗಳನ್ನು ಹೊರತು ಪಡಿಸಿ ಅತ್ಯಂತ ನಿರ್ಲಕ್ಷ್ಯದ ಕ್ಷೇತ್ರಗಳ ಪ್ರಗತಿಗೆ ಒತ್ತು ನೀಡಬೇಕು. ಕೃಷಿ ಮತ್ತು ಕೃಷಿಯೇತರ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು. ಸರ್ಕಾರದಿಂದ ಅನುಮೋದನೆ ಪಡೆದಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಧ್ಯಯನ ಪೀಠ ಸ್ಥಾಪನೆಗೆ ಮಂಡಳಿ ತಕ್ಷಣ ಸ್ಪಂದಿಸಬೇಕು. ಕಲ್ಯಾಣದ ಬಿಟ್ಟು ಹೋದ ಸಮಗ್ರ ಇತಿಹಾಸ ಪುಸ್ತಕಗಳ ಮುದ್ರಣಕ್ಕೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.

15) ತಜ್ಞರ ಸಮಿತಿಯ ಪರಿಶೀಲನೆಯಂತೆ  ಕಲ್ಯಾಣದ ಲೇಖಕರ ಪುಸ್ತಕಗಳನ್ನು ಖರೀದಿಸಲು ಸ್ಪಂದಿಸಬೇಕು. ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವ ನಿಮಿತ್ಯ ಒಂದು ವರ್ಷ ಇಲ್ಲಿಯ ನೆಲ ಜಲ ಭಾಷೆ ಸಾಹಿತ್ಯ ಸಂಸ್ಕೃತಿ, ಶ್ರೀಮಂತ ಇತಿಹಾಸ, ಭಾರತದಲ್ಲಿ ಹೈದ್ರಾಬಾದ ಸಂಸ್ಥಾನ ವಿಲೀನ ಚಳುವಳಿ, ಏಕೀಕರಣ ಚಳವಳಿ, ಪ್ರಸ್ತುತ ಕಲ್ಯಾಣದ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ವಿಚಾರ ಸಂಕಿರಣ, ಕಾರ್ಯಾಗಾರಗಳು,ಶಾಲಾ ಕಾಲೇಜು, ವಿ.ವಿ.ಗಳಲ್ಲಿ ಸ್ಪರ್ಧೆಗಳು ಹಮ್ಮಿಕೊಳ್ಳುಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಪ್ರಸ್ತಾಪಿಸಿ ಮನವಿ ಸಲ್ಲಿಸಿದರು.

ಈ ನಿಯೋಗದಲ್ಲಿ ಮನೀಷ ಜಾಜು, ದತ್ತಾತ್ರೇಯ ಇಕ್ಕಳಕ್ಕಿ,ಡಾ ಮಾಜಿದ ದಾಗಿ, ಕಲ್ಯಾಣರಾವ ಪಾಟೀಲ,ಜ್ಞಾನಮಿತ್ರ ಸಾಮವೆಲ್, ಶಿವಲಿಂಗಪ್ಪ ಭಂಡಕ್,ಬಿ.ಬಿ.ನಾಯಕ್ ವಿಶ್ವನಾಥ ಪಾಟೀಲ ಗೌನಳ್ಳಿ ,ಸಂಧ್ಯಾರಾಜ ಶಾಮವೆಲ್,ಮಲ್ಲಿನಾಥ ಸಂಘಶೆಟ್ಟಿ,ರಾಜು ಜೈನ್, ಅಬ್ದುಲ್ ಖದೀರ್, ಸಾಬಿರ್ ಅಲಿ,ಪರಮೇಶ್ವರ್, ಶರಣಬಸಪ್ಪ ಕೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

5 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

16 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

16 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

18 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

18 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

19 hours ago