ಬಿಸಿ ಬಿಸಿ ಸುದ್ದಿ

ಹಟ್ಟಿ ಚಿನ್ನದ ಗಣಿ: ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ಆಗ್ರಹ

ಹಟ್ಟಿ: ಚಿನ್ನದ ಗಣಿ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಹಟ್ಟಿ ಚಿನ್ನದ ಗಣಿ ಘಟಕದಿಂದ ಕಂಪನಿಯ ಪ್ರಧಾನ ವ್ಯವಸ್ಥಾಪಕ (ಸಮನ್ವಯ) ಹನುಮಂತಪ್ಪ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಶುಕ್ರವಾರದಂದು ಹಟ್ಟಿ ಚಿನ್ನದ ಗಣಿಯ ಕಾರ್ಯಾಲಯದಲ್ಲಿ ಮನವಿ ಸಲ್ಲಿಸಿದ ಸಿಐಟಿಯುನ ಹಟ್ಟಿ ಘಟಕದ ಪ್ರಮುಖ ಕಾರ್ಯಕರ್ತರು ಕಾರ್ಮಿಕರ ವೇತನ ಒಪ್ಪಂದ ಪ್ರಾರಂಭಗೊಂಡು ಸುಮಾರು ತಿಂಗಳು ಕಳೆದರೂ ಇನ್ನು ವೇತನ ಒಪ್ಪಂದದ ವಿಚಾರವೇ ಇಲ್ಲ. ಕಾರ್ಮಿಕರು ಪ್ರಕೃತಿಯ ವಿರುದ್ಧ ಕಾರ್ಯನಿರ್ವಹಿಸುವ ಕಾರ್ಮಿಕರು ವಯಸ್ಸು ಆಗಿತ್ತಿದ್ದಂತೆ ಹಲವಾರು ರೋಗಗಳಿಗೆ ಒಳಗಾಗುತ್ತಾರೆ ಬಿ.ಪಿ, ಶುಗರ್, ಪ್ಯಾರಲಿಸಿಸ್, ಹೃದಯ ಸಂಬಂಧಿತ ಇನ್ನು ಮುಂತಾದ ರೋಗಗಳು ಕಾರ್ಮಿಕರನ್ನು ಕಾಡುತ್ತದೆ. ಇಂತಹ ಕಾರ್ಮಿಕರಿಗೆ ಅನುಕಂಪದ ಆಧಾರದಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿ ಅನರ್ಹಗೊಂಡ ಕಾರ್ಮಿಕರಿಗೆ ಅವರ ಕುಟುಂಬದ ಒಬ್ಬ ಸದಸ್ಯರಿಗೆ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕೆಂದು ಸಿಐಟಿಯು ಆಗ್ರಹಿಸಿದೆ.

ಸುಮಾರು 8 – 9 ವರ್ಷಗಳಿಂದ ಅನುಕಂಪದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಗಣಿ ಕಂಪನಿ ನೌಕರರಿಗೆ ವಿದ್ಯಾರ್ಹತೆ ಮೇಲೆ ಅರ್ಹತೆಗೆ ತಕ್ಕಂತೆ ದರ್ಜೆ ನೀಡಬೇಕು. ಉಲ್ಲೇಖ ಸಂಖ್ಯೆ ಸಿಆಸುಇ105.ಸೇಅನೇ 2017,ಪ್ರಕಾರ ವಿಧ್ಯಾಭ್ಯಾಸ ಹೊಂದಿದ ಕಾರ್ಮಿಕರುಗಳಾದ ಡಿಪ್ಲೊಮಾ, ಬಿಇ ಮೈನಿಂಗ್, ಮೆಕಾನಿಕಲ್, ಎಲೆಕ್ಟ್ರಾನಿಕ್ಸ್, ಎಲೆಕ್ಟಿಕಲ್, ಐ.ಟಿ.ಐ ಇನ್ನಿತರ ಕೋರ್ಸ್ಗಳನ್ನು ಹೊಂದಿದ ಕಾರ್ಮಿಕರು ಜಿ-12 ದರ್ಜೆಯಲ್ಲಿಯೇ ಸಾಮಾನ್ಯ ಕೆಲಸಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೇಗನೆ ಡಿಪಿಸಿ ಸಭೆ ನಡೆಸಿ ಮುಂಬಡ್ತಿ ನೀಡಬೇಕು ಎಂದು ಆಗ್ರಹಿಸಿದರು.

ಎರಡು ವರ್ಷದ 2020, 2021ರ ಹಾಗೂ 2021, 2022ರ ಉತ್ಪಾದನ ಪ್ರೋತ್ಸಾಹ ಧನ ಪಿ.ಎಲ್.ಐ.ಬಿ ಕೊಟ್ಟಿರುವುದಿಲ್ಲ. ಪ್ರತಿ ತಿಂಗಳು ಬರುವ ವೇತನ ತನ್ನ ವೈಯಕ್ತಿಕ ಸಾಲಗಳಿಗೆ ಮನೆ ನಿರ್ವಾಹಣೆಗೆ ಸರಿದೂಗಲು ಸಾಲುವುದಿಲ್ಲ. ಆಸ್ಪತ್ರೆಯಲ್ಲಿ ಔಷಧಗಳ ಕೊರತೆ ಎದ್ದು ಕಾಣುತ್ತಿದೆ. ವೈದ್ಯರು ರೋಗಿಗಳಿಗೆ ಸರಿಯಾಗಿ ತಪಾಸಣೆ ಮಾಡುತ್ತಿದ್ದಾರೆ. ಆದರೆ ವೈದ್ಯರ ತಕ್ಕಂತೆ ಔಷಧಗಳು ಸಿಗುತ್ತಿಲ್ಲಾ. ಒಂದು ಔಷಧಿ ಸಿಕ್ಕರೆ ಇನ್ನೊಂದು ಔಷಧಗಳು ಹೊರಗಡೆ ಖಾಸಗಿ ಔಷಧ ಅಂಗಡಿಯಲ್ಲಿ ಕೊಳ್ಳಬೇಕು. ಯಾವ ರೋಗಿಯು ಹೊರಗಡೆ ಔಷಧಿ ಪಡೆಯದಂತೆ ಆಸ್ಪತ್ರೆಯಲ್ಲಿ ಎಲ್ಲಾ ಔಷಧಗಳು ದೊರೆಯಬೇಕು. ಆಸ್ಪತ್ರೆಯಲ್ಲಿ ರೋಗಿಗಳಿಗೆ ಮಲಗಿಸಿ ಅಥವಾ ಕುರಿಸಿ ಕರೆದೊಯ್ಯಲು ಚಕ್ರ ಕುರ್ಚಿ (ಎಲ್ ಚೇರ್, ವಿಲ್ ಸ್ಟಚ್ಚರ್), ಕುಡಿಯುವ ನೀರು, ರಸ್ತೆ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.ಈಗಿರುವ ಇಸಿಜಿ ತಂತ್ರಜ್ಞಾನ ಅತ್ಯಂತ ಹಳೆಯದಾಗಿದ್ದು, ಹೊಸದನ್ನು ಖರೀದಿಸಬೇಕು. ಅದನ್ನು ಬಳಸಲು ಸರಿಯಾದ ಸಿಬ್ಬಂದಿ ನೇಮಕಮಾಡಬೇಕು ಎಂದು ಆಗ್ರಹಿಸಿದರು.

ನಮ್ಮ ಕಂಪನಿಯ ಹಲವಾರು ವಿಭಾಗಗಳನ್ನು ಹೊರಗುತ್ತಿಗೆ ನೀಡಲಾಗುತ್ತಿದೆ. ಈಗಾಗಲೇ ಹೊರ ಗುತ್ತಿಗೆ ಪಡೆದ ಸಿ.ಐ.ಎಸ್.ಬಿ ಕಂಪೆನಿಯವರು 10 ಕೋಟಿ ರೂಪಾಯಿವರೆಗೆ ಗುತ್ತಿಗೆ ಪಡೆದು ಸಿ.ಐ.ಎಸ್.ಬಿ ಯಾವುದೇ ರೀತಿಯ ಕೆಲಸಗಳು ಸರಿಯಾಗಿ ಮಾಡಿಲ್ಲ. ಪರಿಣಾಮ ಕಂಪನಿಗೆ ನಷ್ಟವಾಗಿದೆ. ಹೊರಗುತ್ತಿಗೆ ನೀಡದೆ ಕಂಪನಿಯಿಂದಲೆ ನೇರವಾಗಿ ನಮ್ಮ ಕಂಪನಿ ಗುತ್ತಿಗೆ ಕಾರ್ಮಿಕರನ್ನು ತೆಗೆದುಕೊಂಡು ಕಂಪನಿಗೆ ಯಾವ ಜಾಗದಲ್ಲಿ ಕಾರ್ಮಿಕರು ಅವಶ್ಯಕತೆ ಇದೆಯೋ ಆ ಜಾಗಲದಲ್ಲಿ ನೇಮಕ ಮಾಡಿಕೊಳ್ಳಬೇಕು. ಇದರಿಂದ ಈ ಭಾಗದ ರೈತರು, ಕೂಲಿ ಕಾರ್ಮಿಕರ ಮಕ್ಕಳಿಗೆ ನಿರುದ್ಯೋಗದ ಸಮಸ್ಯೆಗೆ ಪರಿಹಾರ ನೀಡಿದಂತಾಗುತ್ತದೆ.

ನೀಡುವ ಆಹಾರ ಪೊಟ್ಟಣದಲ್ಲಿ ಅಕ್ಕಿ, ಬೇಳೆ, ಸಕ್ಕರೆ, ಎಣ್ಣೆ ಇವುಗಳ ಗುಣಮಟ್ಟ ಕಾಪಾಡಬೇಕು. ಕಾರ್ಮಿಕರು ವಾಸಿಸುವ ವಸತಿ ಪ್ರದೇಶದ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ. ಚರಂಡಿ ವ್ಯವಸ್ಥೆ ಇಲ್ಲ. ಇದರಿಂದ ವಸತಿ ಪ್ರದೇಶಗಳು ದುರಂತದಿಂದ ಕೂಡಿವೆ. ಆಡಳಿತ ಕಾರ್ಮಿಕರನ್ನು ಮನುಷ್ಯರೆಂದು ಭವಿಸಿದಿಯೋ ಇಲ್ಲವೋ. ಇಂತಹ ವಾತಾವರಣದಲ್ಲಿ ಕಾರ್ಮಿಕರು ಮತ್ತು ಅವರ ಕುಟುಂಬ ಜೀವಿಸುವುದಾದರೂ ಹೇಗೆ. ಇತ್ತೀಚೆಗೆ ಕೆಲ ಕಡೆಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳು ಸಂಪೂರ್ಣವಾಗಿ ಕಳಪೆ ಮಟ್ಟದ್ದಾಗಿದ್ದು, ಅಧಿಕಾರಿಗಳು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಇದರಿಂದ ಅಧಿಕಾರಿಗಳೂ ಸಹ ಗುತ್ತಿಗೆದಾರರೊಂದಿಗೆ ಶಾಮೀಲಾಗಿದ್ದಾರೆ ಯೇ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಸಿಐಟಿಯು ಗೌರವಾಧ್ಯಕ್ಷ ಅಮರೇಶ ಗುರಿಕಾರ, ಅಧ್ಯಕ್ಷ ಅಸನತ್ ಅಲಿ ಜಮೆದಾರ್, ಕಾರ್ಯದರ್ಶಿ ಬಾಬು ಸಾಗರ್, ಜಿಲ್ಲಾ ಸಹ ಕಾರ್ಯದರ್ಶಿ ಮಹ್ಮದ್ ಹನೀಫ್, ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಮುಖಂಡರಾದ ಫಕ್ರುದ್ದೀನ್, ಅಲ್ಲಾಭಕ್ಷ ಗಿರಿಣಿ, ಭೀಮಣ್ಣ ಉಪ್ಪೇರಿ, ದಾವೂದ್, ಮೇಘನಾಥ್, ಮಲ್ಲಿಕಾರ್ಜುನ್, ದೇವು, ಆದಪ್ಪ ಕೋಟಾ, ಯಮನಪ್ಪ ಸೇರಿದಂತೆ ಗಣಿಯ ಕಾರ್ಮಿಕರು ಉಪಸ್ಥಿತರಿದ್ದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

5 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

5 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

7 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

7 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

7 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

7 hours ago