ಶಹಾಬಾದ: ಮಾದಿಗ ಸಮಾಜದ ಯುವ ನಾಯಕ ಪ್ರಮೋದ ಮಲ್ಹಾರ ಅವರನ್ನು ನಗರ ಸಭೆಗೆ ನಾಮನಿರ್ದೇಶನ ಮಾಡಬೇಕೆಂದು ಮಾದಿಗ ಸಮಾಜದ ತಾಲೂಕಾ ಸಮಿತಿ ಅಧ್ಯಕ್ಷ ಡಿ. ಡಿ. ಓಣಿ ಮತ್ತು ಉಪಾಧ್ಯಕ್ಷ ಶರಣು ಬಿ. ಪಗಲಾಪೂರ ನೇತೃತ್ವದ ನಿಯೋಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಎಮ್. ಎ. ರಶೀದ ಮನವಿ ಪತ್ರ ಸಲ್ಲಿಸಿದರು.
ಪ್ರಮೋದ ಲಕ್ಷ್ಮಣ ಮಲ್ಹಾರÀ ಪರಿಶಿಷ್ಟ ಜಾತಿಯ “ಮಾದಿಗ ಸಮುದಾಯ”ದ ಯುವ ನಾಯಕನಾಗಿ ಕಾಂಗ್ರೆಸ್ ಪಕ್ಷದಲ್ಲಿ ಯುವ ಘಟಕದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾನೆ. ಕಾರ್ಯಕಾರಿಣಿ ಸದಸ್ಯನಾಗಿ ಸುಮಾರು ವರ್ಷಗಳಿಂದ ಪಕ್ಷದ ಸಂಘಟನೆಗಾಗಿ ಹಗಲಿರುಳು ಶ್ರಮಿಸಿದ್ದಾನೆ.
ಲೋಕ ಸಭೆ, ವಿಧಾನ ಸಭೆ ಮತ್ತು ನಗರ ಸಭೆ ಸ್ಥಳೀಯ ಮಟ್ಟದ ಎಲ್ಲಾ ಚುನಾವಣೆಯಲ್ಲಿ ಪಕ್ಷದಉಮೇದುವಾರರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪಕ್ಷದಲ್ಲಿ ನಿμÁ್ಠವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿರುತ್ತಾನೆ. ಈ ಭಾಗದಲ್ಲಿ ಮಾದಿಗ ಸಮುದಾಯ ನಾಯಕರಿಗೆ ಪಕ್ಷದ ರಾಜಕೀಯದಲ್ಲಾಗಲಿ ಸರಕಾರದ ನಿಗಮಗಳಿಗೆ ನೇಮಕಾತಿಯಲ್ಲಿ ಕಡೆಗಣಿಸಲಾಗುತ್ತಿದೆ, ಬ್ಲಾಕ್ ಕಾಂಗ್ರೆಸ್ ಪಕ್ಷ ನಮ್ಮ ಸಮುದಾಯದ ಹಿತ ಕಾಯಲು ಪ್ರಮೋದ ಲಕ್ಷ್ಮಣ ಮಲ್ಹಾರ ಅವರನ್ನು ಶಹಾಬಾದ ನಗರ ಸಭೆಗೆ ನಾಮನಿರ್ದೇಶನ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾದಿಗ ಸಮಾಜದ ಹಿರಿಯರಾದ ಹಾಜಪ್ಪ ಬಳಿಚಕ್ರ, ಭೀಮರಾಯ ಕನಕನಳ್ಳಿ, ಈಶ್ವರಾಜ ಪಗಲಾಪೂರ,ಶ್ರೀಧರ ಕೊಲ್ಲೂರ, ಮಂಜುನಾಥ ಕೊಡಲಿಕರ, ಗಣೇಶ ಕಾಂಬಳೆ, ಪರಶುರಾಮ ಮಲ್ದಾರ, ಕಾಶಿನಾಥ ಜಿನಕೇರಿ, ಅಜಯ ವನ್ನೇರ್, ಸಂತೋಷ ಕೊಡಲಿಕರ ಇನ್ನಿತರರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…