ಶರಣರಿಗೆ ವ್ಯಕ್ತಿಗಿಂತ ವ್ಯಕ್ತಿತ್ವ ನಿರ್ಮಾಣ ಮುಖ್ಯವಾಗಿತ್ತು: ಸತ್ಯಂಪೇಟೆ

ಕಲಬುರಗಿ: ಸಮಾಜದಲ್ಲಿನ ಎಲ್ಲ ರೀತಿಯ ಅಜ್ಞಾನ, ಅಂಧಕಾರ, ಮೌಢ್ಯ ಸೋಮಾರಿತನ, ದುಶ್ಚಟ, ಅನಾಗರಿಕತೆ ಇಂಥವುಗಳನ್ನು ಹೋಗಲಾಡಿಸಿದ ಬಸವಾದಿ ಶರಣರು ಸ್ವಚ್ಛ, ಸುಂದರ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಿದ್ದರು ಎಂದು ರಾಜಾಪುರ ರಾಷ್ಟ್ರೀಯ ಬಸವ ದಳ ಅಧ್ಯಕ್ಷ ರಾಜಶೇಖರ ಪಾಟೀಲ ಅಭಿಪ್ರಾಯಪಟ್ಟರು.

ನಗರದ ಶಹಾಬಾದ್ ರಸ್ತೆಯಲ್ಲಿರುವ ನೃಪತುಂಗ ಕಾಲನಿಯ ಎಚ್.ಬಿ. ತೀರ್ಥೆ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ಮನೆ ಮನೆಯಲ್ಲಿ ಬಸವಜ್ಯೋತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾಗತಿಕ ಸಮಸ್ಯೆಗಳಿಗೆ ವಚನ ಸಾಹಿತ್ಯದಲ್ಲಿ ಪರಿಹಾರವಿದೆ ಎಂದು ತಿಳಿಸಿದರು.

ಅನುಭಾವಿಗಳಾಗಿ ಆಗಮಿಸಿದ್ದ ಪತ್ರಕರ್ತ, ಸಾಹಿತಿ ಶಿವರಂಜನ್ ಸತ್ಯಂಪೇಟೆ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲಿ ೧೨ನೇ ಶತಮಾನದ ಶರಣರು ಬಾಳಿ ಬದುಕಿದ ಕಾಲ ಸುವರ್ಣಯುಗ. ಸಮಾಜದಲ್ಲಿ ಅದುವರೆಗೂ ಮನೆ ಮಾಡಿದ್ದ ಮತ-ಮೌಢ್ಯ, ಮೇಲು-ಕೀಳು, ಕಂದಾಚಾರ, ಗೊಡ್ಡು ಸಂಪ್ರದಾಯಗಳನ್ನು ಕಿತ್ತು ಹಾಕಿದ ಶರಣರು ಸಮಾಜದಲ್ಲಿ ಸಮಾನತೆ ತರಲು ಅಹರ್ನಿಷಿ ಪ್ರಯತ್ನಿಸಿದರು. ಎಂದು ಹೇಳಿದರು.

ಶರಣರಿಗೆ ವ್ಯಕ್ತಿಗಿಂತ ವ್ಯಕ್ತಿತ್ವ ನಿರ್ಮಾಣ ಮಾಡುವುದು ಮುಖ್ಯವಾಗಿತ್ತು. ಅವರಿಗೆ ಕೆಲಸ ಕಾಯಕವಾಗಿತ್ತು, ನರ ಹರನಾಗಿದ್ದ, ಜೀವ ಶಿವನಾಗಿದ್ದ, ಮಾನವ ಮಹಾದೇವನಾಗಿದ್ದ, ಮಾತು ಮಂತ್ರವಾಗಿತ್ತು, ಅನ್ನ-ಪ್ರಸಾದವಾಗಿತ್ತು. ವಿದ್ಯೆಯೊಂದೇ ದೇವನೊಲಿಸುವ ಸಾಧನೆ ಎಂದು ಹೇಳುವ ಈ ದೇಶದಲ್ಲಿ ಉದ್ಯೋಗ ಕೂಡ ದೇವನೊಲಿಸುವ ಸಾಧನೆ ಎಂದು ಹೇಳಿದವರು ಶಿವಶರಣರು ಎಂದು ವಿವರಿಸಿದರು.

ಪರ್ವತಯ್ಯ ಸ್ವಾಮಿ ಸಂಕ್ಷಿಪ್ತ ಬಸವ ಚರಿತ್ರೆ ಪಠಣ ಮಾಡಿದರು. ಸೋಮಶೇಖರ ಮಹಾಗಾಂವ ಬಸವ ಪ್ರಾರ್ಥನೆ ಕಾರ್ಯಕ್ರಮ ನಡೆಸಿಕೊಟ್ಟರು. ಕಲಾವತಿ ಎಚ್. ತೀರ್ಥೆ ಹಾಗೂ ಶ್ರುತಿ ಎಸ್. ತೀರ್ಥೆ ಬಸವಜ್ಯೋತಿ ಬೆಳಗಿಸಿದರು. ರಾಜಾಪುರ ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷ ಬಸವರಾಜ ಮಹಾಂತಗೋಳ್, ವಿಜಯಕುಮಾರ ಮೇಳಕುಂದಿ, ಸಂಗಮ್ಮ ಅಮಾತೆಪ್ಪಗೋಳ್, ಅನ್ನಪೂರ್ಣ, ಸೋಮಶೇಖರ ನಂದಿಧ್ವಜ ಮತ್ತಿತರರು ಬಸವ ಜ್ಯೋತಿ ಕಾರ್ಯಕ್ರಮ ನಡೆಸಿಕೊಟ್ಟರು.

“ಬಸವ ಆಶ್ರಯ”ದ ಎಚ್.ಬಿ. ತೀರ್ಥೆ ನಿರೂಪಿಸಿ ವಂದಿಸಿದರು. ಬಸವರಾಜ ಆವಂಟಿ, ಡಿ.ಎಸ್. ಸಂಗಮದ, ಶಿವರಾಜ ಹಡಪದ, ಮಹೇಂದ್ರ ಇಂಗಳಗಿ, ಭೀಮರಾವ ಪಾಟೀಲ ಕೆಸರಟಗಿ, ಆರ್.ಎ. ಮಹೇಂದ್ರಕರ್, ತುಕಾರಾಮ ಬಗಾಡೆ, ಲಕ್ಷ್ಮಣ ಬಾಲಗೊಂಡ, ಲಲಿತಾ ಬಿ. ವಾಲಿ, ಸಾಕ್ಷಿ ಸತ್ಯಂಪೇಟೆ, ಲಕ್ಷ್ಮೀ ನಾಶಿ, ರತ್ನಕಲಾ ಹೋತಪೇಟ, ಶಾಂತಾ ಬಿ. ಕಮರಡಗಿ, ಪರುಶುರಾಮ, ಸಾಯಬಣ್ಣ ಇತರರು ಪಾಲ್ಗೊಂಡಿದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

6 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

8 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

8 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

8 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

8 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

8 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420