ಬಿಸಿ ಬಿಸಿ ಸುದ್ದಿ

Good Morning 365 ನುಡಿಮುತ್ತುಗಳ ಚಿಂತನ-ಮಂಥನ ಕಾರ್ಯಕ್ರಮ

ಕಲಬುರಗಿ: ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರ ಮುಂಜಾವಿಗೊಂದು ನುಡಿಕಿರಣ Good Morning 365 ನುಡಿಮುತ್ತುಗಳ ಚಿಂತನ-ಮಂಥನ ಕಾರ್ಯಕ್ರಮ ಜರುಗಿತು.

ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾದ ಕು. ರಾಜೇಶ್ವರಿ ಗೌರವಾನ್ವಿತ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರ ಜೀವನ ಕುರಿತು ಮಾತನಾಡುತ್ತ, ಹೈದ್ರಾಬಾದ್ ಕರ್ನಾಟಕದ ರಾಯಚೂರು ಜಿಲ್ಲೆಯ ಮಸರಕಲ್ಲ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿ ಎರಡು ವರ್ಷದವರಿದ್ದಾಗಲೇ ತಾಯಿಯನ್ನು ಕಳೆದುಕೊಂಡು ಕಷ್ಟದಲ್ಲಿಯೇ ಜೀವನವನ್ನು ನಡೆಸಿದವರು.

ತಾಯಿಯ ಫೋಟೋ ಕೂಡ ಅವರಲ್ಲಿ ಇರಲಿಲ್ಲ. ಓದ ಬೇಕೆಂಬ ಆಸೆ ಅವರ ಮನಸ್ಸಿನಲ್ಲಿ ದೃಢವಾಗಿತ್ತು. ಅವರ ಪ್ರತಿದಿನ ಮಸರಕಲ್ಲ್‍ದಿಂದ ರಾಯಚೂರಿನಲ್ಲಿನ ತಾರಾನಾಥ ಶಿಕ್ಷಣ ಸಂಸ್ಥೆಯ ಹಮ್‍ದರ್ದ್ ಶಾಲೆಗೆ ಹೋಗುತ್ತಿದ್ದರು. ಸರಕಾರಿ ಬಸ್ಸು ಕೇವಲ ಬೆಳಿಗ್ಗೆ ಬಂದರೆ ಮತ್ತೆ ಸಾಯಂಕಾಲವೇ ಬರುತ್ತಿತ್ತು. ಒಂದು ದಿನ ಬಸ್ಸು ತಪ್ಪಿ ಹೋದಾಗ ಹತ್ತಿ ತುಂಬಿಕೊಂಡು ಹೋಗುವ ಎತ್ತಿನ ಬಂಡಿಯಲ್ಲಿ ಕುಳಿತು ಹೋದರು. ಕಲಿಯಬೇಕೆಂಬ ಛಲ ಅವರಲ್ಲಿ ಇತ್ತು. ನೋಬಲ್ ಪ್ರಶಸ್ತಿ ಪಡೆದ ಮೇರಿಕ್ಯೂರಿಯಂತೆ ಅವರ ಸಾಧನೆಯಾಗಿದೆ. ಅವರಿಗೆ ಯಾವ ಪ್ರಶಸ್ತಿ ನೀಡಿದರೂ ಕಡಿಮೆಯೇ. ಅವರು ಬರೆದ ಮುಂಜಾವಿಗೊಂದು ನುಡಿಕಿರಣ ಉooಜ ಒoಡಿಟಿiಟಿg 365 ನುಡಿಮುತ್ತುಗಳು ಬದುಕಿಗೆ ದಾರಿತೋರುವ ದಾರಿದೀಪವಾಗಿವೆ. ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿವೆ. ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಮಾರ್ಗದರ್ಶನವಾಗಿದೆ. ಕಠಿಣ ಪರಿಶ್ರಮದಿಂದ ಜೀವನದಲ್ಲಿ ಉನ್ನತ ಸ್ಥಾನ ಪಡೆದವರು ಅವರು. ಬಡತನ ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದನ್ನೂ ಸಾಧಿಸಿ ತೋರಿಸಿದ್ದಾರೆ. ಸಾಧಕನಿಗೆ ತನ್ನ ವೇಷ ಭೂಷಣಕ್ಕಿಂತ ಅವರ ಶ್ರೇಷ್ಠ ವಿಚಾರಗಳು, ಅವರ ಸಾಧನೆಗಳೇ ಅವರಿಗೆ ಭೂಷಣವಾಗಿವೆ. ನಾವು ಅವರ ಮಾರ್ಗದರ್ಶನದಂತೆ ನಡೆದು ಬದುಕು ರೂಪಿಸಿಕೊಳ್ಳೋಣ ಎಂದು ಕು. ರಾಜೇಶ್ವರಿ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರ ಬದುಕನ್ನು ಕುರಿತು ಮಾತನಾಡಿದರು.

ಡಾ. ವಿದ್ಯಾವತಿ ಪಾಟೀಲ ಉಪನ್ಯಾಸಕಿ ಅವರು ಮಾತನಾಡುತ್ತ, “ಸರಿಯಾದ ಸಮಯಕ್ಕೆ ಮಾಡಿದ ಸಣ್ಣ ಕೆಲಸ ಮುಂಬರುವ ದಿನಗಳಲ್ಲಿ ಮಹತ್ತರವಾದ ಬದಲಾವಣೆಯನ್ನು ತರಬಲ್ಲದು” ಎಂಬ ಗೌರವಾನ್ವಿತ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರ ನುಡಿಮುತ್ತು ವಿದ್ಯಾರ್ಥಿಗಳ ಬದುಕಿನ ದಿಕ್ಕನ್ನು ಬದಲಾಯಿಸಿ ಅವರನ್ನು ಜ್ಞಾನದ ಬೆಳಕಿನಡೆಗೆ ಕರೆದೊಯ್ಯುತ್ತದೆ. ವಿದ್ಯಾರ್ಥಿಗಳು ಪಿಯುಸಿಯಲ್ಲಿ 2 ವರ್ಷಗಳ ಕಾಲ ಕಷ್ಟಪಟ್ಟು ನಿರಂತರವಾಗಿ ಅಭ್ಯಾಸ ಮಾಡಿ ಉತ್ತಮ ಅಂಕ ಗಳಿಸಿದರೆ ಅವರ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ. ಸಮಯವನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ, ಸಿಕ್ಕ ಸಮಯದ ಸದುಪಯೋಗ ಪಡೆದುಕೊಳ್ಳಬೇಕು. ಸಕಾರಾತ್ಮಕ ಮನೋಭಾವನೆ ಹೊಂದಿದ್ದು ವಿನಯತೆ, ವಿಧೇಯತೆ, ಎತ್ತರವಾದ ನಿಲುವು, ಉನ್ನತವಾದ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಯ ಮತ್ತು ಕಾಲ ಬದುಕಿನ ಪಾಠ ಕಲಿಸುವ ಬಹುದೊಡ್ಡ ಶಿಕ್ಷಕರು. ಸಮಯ ವ್ಯರ್ಥಮಾಡದೆ ಅಧ್ಯಯನಶೀಲರಾಗಬೇಕು. ಹಣತೆ ತಾನು ಉರಿದು ಜಗತ್ತಿಗೆ ಬೆಳಕು ನೀಡುವಂತೆ ವಿದ್ಯಾರ್ಥಿಗಳು ತಾವು ಸಾಧನೆಮಾಡಿ ಸಮಾಜಕ್ಕೆ ದಾರಿದೀಪವಾಗಬೇಕು. ಅಂತಹ ಆತ್ಮವಿಶ್ವಾಸ ಹೊಂದಿರಬೇಕು. ಸಾವಿರ ಕಷ್ಟಗಳಿದ್ದರೂ ಸಾಧನೆಯತ್ತ ಸಾಗಿದಾಗ ಸಾಮಾನ್ಯ ವ್ಯಕ್ತಿ ಸಾಧಕನಾಗಿ ಹೊರಹೊಮ್ಮುತ್ತಾರೆ. ಆ  ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯ ಪ್ರವೃತ್ತರಾಗಬೇಕೆಂದು ತಿಳಿಸಿದರು.

ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲ ಅವರು ಮಾತನಾಡುತ್ತ, “ಗೌರವಾನ್ವಿತ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರ ನುಡಿಮುತ್ತುಗಳನ್ನು ಓದಿದಾಗ, ಕೇಳಿದಾಗ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ. ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಸುಸಂಸ್ಕøತ ನಾಗರಿಕನಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿದಾಗ ಮಾತ್ರ ಬದುಕಿನಲ್ಲಿ ಬರುವ ಕಷ್ಟಗಳನ್ನು ಎದುರಿಸುವ ಶಕ್ತಿ ಬರುತ್ತದೆ. ಯುವಕರು ಯಾವದೇ ದುಶ್ಚಟಕ್ಕೆ ಬಲಿಯಾಗದೆ ಸತ್ಪ್ರಜೆಯಾಗಿ ಬಾಳುವಂತಾಗುತ್ತದೆ. ಒಳ್ಳೆಯ ಆಚಾರ-ವಿಚಾರ, ನಡೆ-ನುಡಿ, ಸಂಸ್ಕøತಿ-ಸಂಸ್ಕಾರ ಪಡೆದು ಪಾಲಕರನ್ನು, ಶಿಕ್ಷಕರನ್ನು ಗೌರವಿಸಬೇಕು. ಗುರುಗಳಿಗಿಂತ ಎತ್ತರವಾಗಿ ಬೆಳೆದು ಅವರಲ್ಲಿ ಅಭಿಮಾನ ಮೂಡುವಂತೆ ಮಾಡಬೇಕು. ಜೀವನದಲ್ಲಿ ಬರುವ ಕಷ್ಟಗಳನ್ನು ತನ್ನ ಸಾಧನೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಬೇಕು. ಕಷ್ಟವನ್ನು ಎದುರಿಸಿ ಬೆಳೆದವನೇ ದೊಡ್ಡ ವ್ಯಕ್ತಿಗಳಾಗುತ್ತಾರೆ. ಗೌರವಾನ್ವಿತ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರ ಸಾಧನೆ ಅವರ ಉನ್ನತವಾದ ಶ್ರೇಷ್ಠವಾದ ವಿಚಾರಧಾರೆಗಳು ನುಡಿಮುತ್ತುಗಳು ನಮ್ಮ ಬದುಕಿಗೆ ದಾರಿದೀಪವಾಗಿವೆ, ಅಮೂಲ್ಯವಾದ ಜ್ಞಾನರತ್ನವಾಗಿವೆ, ಅನುಭವದ ಅಮೃತವಾಗಿವೆ, ಮಾನವೀಯ ಮೌಲ್ಯಗಳನ್ನು ಒಳಗೊಂಡ ಮಾಣಿಕ್ಯದ ದೀಪ್ತಿಗಳಾಗಿವೆ. ಅವುಗಳನ್ನು ಅರ್ಥಮಾಡಿಕೊಂಡು ಬದುಕಿದರೆ ಬದುಕು ಹಸನಾಗುತ್ತದೆ, ಸಮಾಜ ಸ್ವಸ್ಥವಾಗುತ್ತದೆ, ಎಲ್ಲೆಡೆ ನೆಮ್ಮದಿ ಇರುತ್ತದೆ ಎಂದು ಪ್ರೇರೇಪಿಸಿದರು.

ಕು. ರಾಜೇಶ್ವರಿ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರ ಜೀವನ, ಸಾಧನೆಯನ್ನು ಕುರಿತು ವಿವರವಾಗಿ ತಿಳಿಸಿದಳು. ಕಾರ್ಯಕ್ರಮದಲ್ಲಿ ಶ್ರೀ ಪ್ರಶಾಂತ ಕುಲಕರ್ಣಿ ಉಪಪ್ರಾಚಾರ್ಯರು, ಶ್ರೀ ಪ್ರಭುಗೌಡ ಸಿದ್ಧಾರೆಡ್ಡಿ ಪ್ರಾಚಾರ್ಯರು ಸರ್ವಜ್ಞ ಪದವಿ ಕಾಲೇಜು, ಶ್ರೀ ಕರುಣೇಶ್ ಹಿರೇಮಠ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕು. ಸೌಮ್ಯ, ರಾಧಿಕಾ ನಿರೂಪಿಸಿದರು. ಕು. ಅಮರ ಸ್ವಾಗತಿಸಿದರು. ಕು. ಶರಣಮ್ಮ ಪ್ರಾರ್ಥಿಸಿದರು. ಕು. ಸ್ವಾತಿ ವಂದಿಸಿದರು.

 

 

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

2 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

2 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

4 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

4 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

5 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

5 hours ago