ಕಲಬುರಗಿ: ನಿಜಾಮಅರಸ ಮೀರ್‍ಉಸ್ಮಾನ್ ಅಲಿಖಾನ್‍ಅವರಿಗೆದೆಹಲಿಯ ಕೆಂಪು ಕೋಟೆಯ ಮೇಲೆ ಧ್ವಜ ಹಾರಿಸುವ ಕನಸು ಬಿತ್ತಿದ್ದರಜಾಕಾರ ಪಡೆಯ ಮುಖ್ಯಸ್ಥ ಕಾಶಿಂ ರಜ್ವಿ ಹಾಗೂ ಅವನ ಸೈನಿಕರ ಉಪಟಳ, ಮತಾಂಧತೆಯಿಂದಾಗಿ ಉಂಟಾದ ಸಂಘರ್ಷವೇ ಹೈ.ಕ. ವಿಮೋಚನಾ ಹೋರಾಟ. ಈ ಹೋರಾಟಕ್ಕೆ ಶರಣಬಸವೇಶ್ವರ ಸಂಸ್ಥಾನದ ಪೂಜ್ಯದೊಡ್ಡಪ್ಪಅಪ್ಪಅವರು ಪ್ರೇರಣೆಯಾಗಿದ್ದರುಎಂದು ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಯಪಟ್ಟರು.
ಹೈದರಾಬಾದ್ ವಿಮೋಚನಾ ಸಪ್ತಾಹದ ಅಂಗವಾಗಿ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಸರ್ವಜ್ಞ ಶಿಕ್ಷಣ ಸಮೂಹ ಸಂಸ್ಥೆಯ ಜಸ್ಟಿಸ್ ಶಿವರಾಜ ಪಾಟೀಲ ಪಿಯುಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಿಮೋಚನಾ ಹೋರಾಟಗಾರರ ಹೋರಾಟದ ಹಾದಿ ಕುರಿತವಿಚಾರಗೋಷ್ಠಿಯಲ್ಲಿ ಪೂಜ್ಯದೊಡ್ಡಅಪ್ಪಅವರಕುರಿತು ಮಾತನಾಡಿದಅವರು, 1930ರಲ್ಲಿಯೇ ಶೈಕ್ಷಣಿಕಸಂಸ್ಥೆಯನ್ನು ಆರಂಭಿಸಿ ಮಹಿಳೆಯರಿಗಾಗಿ ಹೆಣ್ಣು ಮಕ್ಕಳ ಶಾಲೆ ತೆರೆದಿದ್ದರುಎಂದುಸ್ಮರಿಸಿದರು.
ರಜಾಕಾರ ಸೈನ್ಯದ ಕೆಲ ಕೋಮುವಾದಿಗಳು ಮಹಾದಾಸೋಹ ಪೀಠದ ಮೇಲೆ ದಾಳಿ ನಡೆಸಿ ಕಳಸ, ನಂದಿ ವಿಗ್ರಹ ಹಾಗೂ ಮೂಲ ವಿಗ್ರಹಕ್ಕೆಧಕ್ಕೆತಂದಾಗ, ಆಗಿ ಹೋಗಿರುವುದಕ್ಕೆ ಚಿಂತಿಸಿ ಫಲವಿಲ್ಲ. ಎಲ್ಲರ ಭಕ್ತಿಒಂದೇಎಂದು ನಿಜಾಮಅರಸನಿಗೆ ಸನ್ಮಾನಿಸಿ ಕಳುಹಿಸಿದ ದೊಡ್ಡಪ್ಪಅಪ್ಪಅವರು ನಿಜಕ್ಕೂ ಸೌಹಾರ್ದತೆ ಮರೆದಿದ್ದರುಎಂದು ತಿಳಿಸಿದರು.
ದಾಳಿ ಪ್ರಯುಕ್ತಉಂಟಾದ ಗಲಬೆ ನಿಯಂತ್ರಿಸಲು ಐಜಿಪಿ ಕ್ಲಾಪರ್ಡ್ ಹಾಗೂ ಡಿಐಜಿ ಕಾಶಿಂ ಅಲಿ ಬಂದಿದ್ದರು. ಕೈ ಬಾಂಬ್ ಸಿಡಿಸಿ ಡಿಐಜಿಯನ್ನುಕೊಂದರು ಮಾತ್ರವಲ್ಲ ಹಿಂದೂಗಳೇ ಗುಂಡು ಹಾರಿಸಿದ್ದಾರೆ ಎಂದು ಗುಲ್ಲೆಬ್ಬಿಸಿದ್ದರು ಎಂದು ವಿಮೋಚನಾ ಚಳವಳಿಯ ಸಂಘರ್ಷವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಅಧ್ಯಕ್ಷತೆ ವಹಿಸಿದ್ದ ಶಿಕ್ಷಣಪ್ರೇಮಿ ಪ್ರೊ.ಚನ್ನಾರೆಡ್ಡಿ ಪಾಟೀಲ ಮಾತನಾಡಿ, ಶೈಕ್ಷಣಿಕಕ್ರಾಂತಿಉಂಟು ಮಾಡಿದದೊಡ್ಡಪ್ಪಅಪ್ಪಅವರು ನಿಜಕ್ಕೂ ಸ್ಮರಣೀಯರಾಗಿದ್ದು, ಅಂಥವರ ಬದಕುಅನುಸರಿವುದು ಬಹಳ ಅಗತ್ಯಎಂದು ತಿಳಿಸಿದರು.ಮುಖ್ಯಅತಿಥಿಯಾಗಿದ್ದ ಸುರೇಶ ಬಡಿಗೇರ, ಬಸವರಾಜಯಡ್ರಾಮಿ ಮಾತನಾಡಿದರು.ಪ್ರಭುಗೌಡ ಪಾಟೀಲ, ಗೋಪಾಲ ನಾಟೀಕಾರ, ಮನೋಹರ ಬೀರನೂರ, ಆನಂದಕಪನೂರಇದ್ದರು.ಒಕ್ಕೂಟದಅಧ್ಯಕ್ಷ ಮಂಜುನಾಥ ನಾಲವಾರಕರಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಕೇವಲ ಸಿಕ್ಸ್ ಪ್ಯಾಕ್‍ಕಾಪಾಡಿಕೊಂಡು ಬರುವುದು, ಹೋರಾಟ ಮಾಡುವುದು ಮಾತ್ರಕೆಚ್ಚೆದೆಯಲ್ಲ. ನಿರ್ಧಿಷ್ಟಗುರಿ ಸಾಧನೆಗೆ ಪ್ರೇರಣೆ ನೀಡುವುದುಕೂಡಕೆಚ್ಚೆದೆ.ತ್ರಿಕಾಲ ಪೂಜಾನಿಷ್ಠರಾಗಿದ್ದದೊಡ್ಡಪ್ಪಅಪ್ಪಅವರುಜನಜೀವನಕ್ಕೆ ಪ್ರೇರಣೆಯಾಗಿದ್ದಾರೆ.- ಪ್ರೊ.ಚೆನ್ನಾರೆಡ್ಡಿ ಪಾಟೀಲ, ಅಧ್ಯಕ್ಷರು, ಸರ್ವಜ್ಞ ಶಿಕ್ಷಣ ಸಮೂಹ ಸಂಸ್ಥೆ, ಕಲಬುರಗಿ
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…