ಬಿಸಿ ಬಿಸಿ ಸುದ್ದಿ

ಜಗತ್ತಿಗೆ ಕಾಯಕ-ದಾಸೋಹ ತತ್ವ ಕಲಿಸಿದವರು ಬಸವಣ್ಣನವರು

ಶಹಾಬಾದ: ಜಗತ್ತಿಗೆ ಕಾಯಕ-ದಾಸೋಹ-ಸಮಾನತೆ ತತ್ವ ಕಲಿಸಿದವರು ವಿಶ್ವಗುರು ಬಸವಣ್ಣನವರು ಎಂದು ಉಪನ್ಯಾಸಕಿ ಡಾ.ಚನ್ನಮ್ಮ ನಾಗೇಶ ಅಲ್ಬಾ ಹೇಳಿದರು.

ಅವರು ತಲೂಕಿನ ಭಂಕೂರ ಗ್ರಾಮದ ಶಾಂತನಗರದ ಬಸವ ಸಮಿತಿಯಲ್ಲಿ ಆಯೋಜಿಸಲಾದ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.

ನಡೆಯನ್ನೇ ನುಡಿಯಾಗಿಸಿದ ಪುಣ್ಯ ಪುರುಷರಲ್ಲಿ ಜಗಜ್ಯೋತಿ ಬಸವಣ್ಣನವರು ಅಗ್ರಗಣ್ಯರು. ತಮ್ಮ ನಡೆ, ನುಡಿಗಳನ್ನು ಸ್ಫಟಿಕದ ಸಲಾಕೆಯಂತೆ ನೇರ ಹಾಗೂ ಪಾರದರ್ಶಕವಾಗಿಸಿಕೊಂಡು, ಸಮಾಜಕ್ಕೆ ಚೈತನ್ಯ ತುಂಬಿದ ಬಸವಣ್ಣನವರು ಅಂತರಂಗ ಹಾಗೂ ಬಹಿರಂಗಗಳೆರೆಡನ್ನು ಪರಿಶುದ್ಧವಾಗಿಸಿಕೊಂಡು, ಮಾನವರ ಬದುಕಿಗೆ ಜ್ಯೋತಿಯಾದವರು. ಬಸವಾದಿ ಶರಣರು ವಿಶ್ವಕ್ಕೆ ಕಾಯಕ ಮತ್ತು ದಾಸೋಹ ಪರಿಚಯಿಸುವ ಮೂಲಕ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಮನುಷ್ಯ ತಾನು ಕಾಯಕಮಾಡಿ ಉಳಿದಿದ್ದರಲ್ಲಿ ಪರರಿಗೆ ಹಂಚಬೇಕು ಅತಿಯಾದ ಗಳಿಸುವ ಬಯಕೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದರು.

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ದುಡಿಯದೆ ಸಮಾಜ ಮತ್ತು ಸಮಾಜದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ ಒದಗಿಸಬೇಕು. ಅಂದಾಗ ಮಾತ್ರ ಆ ಸ್ಥಾನಕ್ಕೆ ಗೌರವ ಬರುತ್ತದೆ ಎಂದರು. ಮನುಷ್ಯ ಸ್ವಾರ್ಥ ಮತ್ತು ಹಣದ ಹಿಂದೆ ಬಿದ್ದು ಸಂಬಂಧಗಳು ಮೌಲ್ಯಗಳಿಗೆ ಬೆಲೆ ಕೊಡುತ್ತಿಲ್ಲ ಎಂದರು. ಇಂದಿನ ಈ ವಾಸ್ತವಿಕ ಬದುಕಿನಲ್ಲಿ ಬಸವಾದಿ ಶರಣರ ಮೌಲ್ಯಗಳು ಎಂದಿಗಿಂತಲೂ ಇಂದು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.

ಗದುಗಿನ ಪ್ರವಚನಕಾರರಾದ ಗಿರಿಜಕ್ಕ ಧರ್ಮರೆಡ್ಡಿ ಮಾತನಾಡಿ, ಕಾಯಕ ಮತ್ತು ದಾಸೋಹ ಸಿದ್ಧಾಂತಗಳು ಬಸವಾದಿ ಶರಣರು ಈ ನಾಡಿಗೆ ನೀಡಿದ ಶ್ರೇಷ್ಠ ಕೊಡುಗೆಗಳಾಗಿವೆ.ಶರಣರು ಸತ್ಯ-ಶುದ್ಧ ಕಾಯಕದಿಂದ ಸಂಪಾದಿಸಿದುದನ್ನು ತಮ್ಮ ಬದುಕಿಗೆ ಮಾತ್ರವಲ್ಲದೆ ಸಮಾಜದ ಒಳಿತಿಗಾಗಿಯೂ ವಿನಿಯೋಗಿಸಿದರು. ಆದರೆ ಇಂದು ಅತಿಯಾದ ದುರಾಸೆಗಳಿಂದ, ಭೋಗಲಾಲಸೆಗೆ ತುತ್ತಾದ ಜನ ಹಣವಂತರಾದರೂ ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಳ್ಳುವಂತಾಗಿದೆ ಎಂದು ವಿμÁದಿಸಿದರು.ಹಣ ಗಳಿಕೆಯೊಂದೆ ಬದುಕಿನ ಸಾಧನೆಯಲ್ಲ. ಸುಖ ನೆಮ್ಮದಿಗೆ ಶ್ರೀಮಂತಿಕೆಯೊಂದೆ ಮಾನದಂಡವಲ್ಲ. ಸುಂದರವಾದ ಮನೆಗಳನ್ನು ನಿರ್ಮಿಸುವುದರ ಜತೆಗೆ, ಬಾಂಧವ್ಯವನ್ನೂ ಅμÉ್ಟೀ ಸುಂದರವಾಗಿ ಕಟ್ಟಿಕೊಳ್ಳಬೇಕಾದ ಅಗತ್ಯವಿದೆ. ಬಸವಾದಿ ಶರಣರು ಪ್ರತಿಪಾದಿಸಿದ ಜೀವನ ಮೌಲ್ಯಗಳು, ನೆಮ್ಮದಿ ಬದುಕಿಗೆ ಸೋಪಾನಗಳಾಗಿವೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಬಸವ ಸಮಿತಿ ಅಧ್ಯಕ್ಷ ನೀಲಕಂಠ ಮುದೋಳಕರ್,ಮಾಜಿ ಅಧ್ಯಕ್ಷರಾದ ಅಮೃತ ಮಾನಕರ್, ರೇವಣಸಿದ್ದಪ್ಪ ಮುಸ್ತಾರಿ,ಚಂದ್ರಕಾಂತ ಅಲಮಾ,ಅಮರಪ್ಪ ಹೀರಾಳ ಸೇರಿದಂತೆ ಅನೇಕರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago