ಶಹಾಬಾದ :ಮನಸ್ಸಿನ ಕಲ್ಮಶಗಳನ್ನು ದೂರಮಾಡುವ ಏಕೈಕ ಮಾಸವೇ ಶ್ರಾವಣ ಮಾಸ ಎಂದು ಚಿತ್ತಾಪೂರಿನ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ಹೇಳಿದರು.
ಅವರು ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮದ ಅಲ್ಲಮಪ್ರಭು ಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಆಯೋಜಿಸಲಾದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಮನುಷ್ಯನು ಯಾಂತ್ರಿಕ ಜೀವನದಲ್ಲಿ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ.ಇದರಿಂದ ಸಮಾಜದಲ್ಲಿ ಅಶಾಂತಿ ಮೂಡುತ್ತಿದೆ.ಅಲ್ಲದೇ ತಾವು ಮಾಡುವ ಕೆಲಸದಲ್ಲೂ ಪರಿಪೂರ್ಣತೆ ಇಲ್ಲದನ್ನು ಕಾಣುತ್ತಿದ್ದೆವೆ.ಇದರಿಂದ ಹೊರಬರಬೇಕಾದರೆ ಧಾರ್ಮಿಕ ಕಾರ್ಯಕ್ರಮಗಳ ಕಡೆಗೆ ಮುಖ ಮಾಡುವ ಅಗತ್ಯತೆಯಿದೆ. ಧಾರ್ಮಿಕ ಆಚರಣೆಗಳು ಸುಖ, ಶಾಂತಿ, ನೆಮ್ಮದಿ ಒದಗಿಸುತ್ತವೆ. ಪುರಾಣ, ಪ್ರವಚನಗಳು ಮೌಲ್ಯಗಳನ್ನು ಬಿತ್ತುತ್ತವೆ.ಅಂತಹ ಕಾರ್ಯಕ್ರಮಗಳನ್ನು ವರ್ಷಪೂರ್ತಿ ನಿರಂತರ ಕಾರ್ಯಕ್ರಮಗಳನ್ನು ಅಲ್ಲಮ ಪ್ರಭು ಸಂಸ್ಥಾನ ಮಠ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರಲ್ಲದೇ, ಪೂಜ್ಯರಿಗೆಗ್ಲೋಬಲ್ ವುಮೆನ್ ಫೀಸ್ ಯುನಿವರ್ಸಿಟಿ ಅಮೇರಿಕದಿಂದ ಡಾಕ್ಟರೇಟ್ ಲಭಿಸಿರುವುದಕ್ಕೆ ಶುಭವನ್ನು ಕೋರಿದರು.
ಮಲ್ಲಣಪ್ಪ ಮಹಾಸ್ವಾಮಿಗಳು ಮಾತನಾಡಿ, ಕಳೆದ ಒಂದು ತಿಂಗಳಿಂದ ಭಕ್ತರ ಸಹಕಾರದಿಂದ ಮಠದಲ್ಲಿ ನಿರಂತರ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಮಠಕ್ಕೆ ಭಕ್ತರೇ ಅಡಿಪಾಯ.ಆದ್ದರಿಂದಲೇ ಅಲ್ಲಮ ಪ್ರಭು ಸಂಸ್ಥಾನ ಮಠ ಇಷ್ಟೊಂದು ಅಭಿವೃದ್ಧಿ ಹೊಂದಲು ಕಾರಣ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗ್ಲೋಬಲ್ ವುಮೆನ್ ಫೀಸ್ ಯುನಿವರ್ಸಿಟಿ ಅಮೇರಿಕದ ವತಿಯಿಂದ ಮಲ್ಲಣಪ್ಪ ಮಹಾಸ್ವಾಮಿಗಳಿಗೆ ಗೌರವ ಡಾಕ್ಟರೇಟ್ ಲಭಿಸಿದಕ್ಕೆ ಭಕ್ತ ವೃಂದದಿಂದ ಸನ್ಮಾನಿಸಿಲಾಯಿತು.
ಅಥಿತಿಗಳಾಗಿ ಲಚ್ಚಪ್ಪ ಜಮಾದಾರ, ಗುರುನಾಥ ಹೇರೂರ್, ಶಿವು ಧನಿ, ಶಂಕರ ತಳವಾರ, ಶಿವಶರಣಪ್ಪ ಜಮಾದಾರ, ರಾಜಶೇಖರ ತಲಾರಿ, ಚಂದ್ರಶೇಖರ ಕೋಟಾರಗಸ್ತಿ, ದೇವಿಂದ್ರ ಕಾರೋಳಿ, ಜಯಶ್ರೀ ಕಟ್ಟಿಮನಿ, ಮಲ್ಲಪ್ಪ ಕೊಡದೂರ, ನಿಂಗಣ್ಣಗೌಡ ಮಾಲೀಪಾಟೀಲ, ಮಹಾದೇವ ಬಂದಳ್ಳಿ, ಮಹಾಲಿಂಗ ಮದ್ದರಕಿ, ಬಸವರಾಜ ಜಿ ಗೋಳೇದ್, ಬೆಳ್ಳೆಪ್ಪ ಖಣದಾಳ, ಪ್ರಕಾಶ ಹಿರೇಮಠ ಇತರರು ಇದ್ದರು. ಅಶೋಕ ನಾಟೀಕಾರ ನಿರೂಪಿಸಿದರು, ಪ್ರಭು ಮಂಗಳೂರು ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…