ಬಿಸಿ ಬಿಸಿ ಸುದ್ದಿ

ಹೈಟೆಕ್ ವೇಶಾವಾಟಿಕೆ ಭೇಧಿಸಿದ ಪೋಲಿಸರು, ನಾಲ್ವರು ಆರೋಪಿಗಳು ಸೇರಿ 98 ಸಾವಿರ ರೂ ವಶಕ್ಕೆ

ಶಹಾಪುರ: ನಗರದ ತನ್ನ ಸ್ವಂತ ಮನೆಯಲ್ಲೇ ವೇಶಾವಾಟೀಕೆ ಏಜೆಂಟ್ ದಂದೆಯಲ್ಲಿ ತೊಡಗಿಕೊಂಡು ನೂರಾರು ಜನರಿಗೆ ವಂಚಿಸಕೊಂಡು ಹಣ ಕುದಿರುಸುತ್ತಿದ್ದ ಹೈಟೆಕ್ ವೇಶಾವಾಟಿಕೆ ಅಡ್ಡೆಯ ಮೇಲೆ ಶಹಾಪುರ ಪೋಲಿಸರು ದಾಳಿ ಮಾಡಿ ನಾಲ್ವರು ಆರೋಪಿ ಸೇರಿದಂತೆ 98 ಸಾವಿರ ರೂಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಶಹಾಪುರ ನಗರದ ಹಾಲಬಾವಿ ರಸ್ತೆಯಲಿರುವ ಕನಕ ನಗರದಲ್ಲಿ ನೆಡೆದಿದೆ.

ಘಟನೆ-ಕಳೆದ ಹತ್ತಾರು ವರ್ಷಗಳಿಂದ ನಗರದ ಬಾಡಿಗೆ ಮನೆಗಳಲ್ಲಿ ವಾಸ ಮಾಡಿಕೊಂಡು ಮುಗ್ದ ಹುಡುಗಿಯರಿಗೆ ಹಣ ಮತ್ತು ಇತರೆ ಆಮೀಸೆ ಒಡ್ಡಿ ವೇಶಾವಾಟಿಕೆಗೆ ತಳ್ಳುತ್ತಿದ್ದ ಮಂಜುಳಾ ರಾಠೋಡ್ ಎನ್ನವ ಮಹಿಳೆಯೊರ್ವಳು ತನ್ನಲ್ಲಿಗೆ ಬರುವ ಆರ್ಥಿಕ ಸ್ಥಿತಿವಂತರನ್ನು ಕರೆ ತಂದು ಅವರೊಂದಿಗೆ ಲೈಂಗೀಕ ಚಟುವಟಿಕೆಗಳಲ್ಲಿ ತೊಡಗಿಸುವದೆ ಮಂಜುಳಾ ಎನ್ನವ ಏಜಂಟ್‌ಳು ದಂದೆಯಾಗಿತ್ತು,  ಮೋಬೈಲ್ ಬಳಸಿಕೊಂಡು ವಿಡಿಯೋ ಮಾಡಿಕೊಂಡು ಅವರಿಗೆ ಹಣದ ಬ್ಲಾಕ್ ಮೇಲ್ ಮಾಡಿಕೊಂಡು  ಲಕ್ಷಾಂತರ ರೂಗಳನ್ನು ವಶೂಲಿ ಮಾಡುವದೆ ಇವರ ದಂದೆಯಾಗಿತ್ತು ಎಂದು ತಿಳಿದು ಬಂದಿದೆ.

ನಗರದಲ್ಲಿ ವೇಶಾವಾಟಿಕೆ ದಂದೆಯಲ್ಲಿ ಬ್ಲಾಕ್ ಮೇಲ್ ಮಾಡುವ ವ್ಯಕ್ತಿಗಳ ಬಗ್ಗೆ ತಿಳಿದು ಬಂದಲ್ಲಿ ಅವರಿಂದ ಹಣದ ಅಮೀಷಕ್ಕೆಒಳಗಾಗಿ ಮಾನಸಿಕ ಹಿಂಸೆ ಅನುಭವಿಸುವ ನೊಂದವರು ಮತ್ತು ವೇಶಾವಾಟಿಕೆ ದಂದೆ ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅಥವಾ ದೂರು ಸಲ್ಲಿಸಿದಲ್ಲಿ ಕಠಿಣ ಕ್ರಮ ಕೈಗೊಂಡು ಅವ್ಯಕ್ತ ದಂದೆಗಳಿಗೆ ಕಡಿವಾಣ ಹಾಕಲಾಗುತ್ತದೆ, ಸಾರ್ವಜನಿಕರು ಸಹಕಾರ ನೀಡಿದಲ್ಲಿ ಈ ಅನಾಮೀಕ ಅವ್ಯವಹಾರಗಳು ಕಡಿಮೆ ಮಾಡಲು ಸಾಧ್ಯವಾಗುತ್ತದೆ.                                                                                                                – ಶಿವನಗೌಡ ಪಾಟೀಲ್,  ಡಿವೈಎಸ್ಪಿ

ಮಂಜುಳಾ ಎನ್ನವ ವೇಶಾವಾಟಿಕೆ ದಂದೆಯ ಏಜೆಂಟೆ ನಿತ್ಯದ ಹುಡುಗಿಯರನ್ನೇ ಕರೆ ತರುವದೆ ಕಾಯಕವಾಗಿತ್ತು ಎನ್ನಲಾಗಿದೆ, ಈ ಅವ್ಯವಸ್ಥೆಗಳಿಂದ ನೂರಾರು ಜನರು ನೊಂದು ಬೆಂದು ಹೊಗಿದ್ದಾರೆ ಎಂದು ಹೇಳಾಗುತ್ತಿದ್ದು, ಇತ್ತಿಚೆಗೆ ನೊಂದ ವ್ಯಕ್ತಿ ಯೊರ್ವರು ದೂರಿನ ಮೇರೆಗೆ ಯಾದಗಿರಿ ಎಸ್ಪಿ, ರೀಷೀಕೇಶ ಭಾಗವಾನ್ ಮತ್ತು ಡಿವೈಎಸ್ಪಿ ಶಿವನಗೌಡರವರ ಸೂಕ್ತ ಮಾರ್ಗಧರ್ಶನದಲ್ಲಿ ಶಹಾಪುರ ಪಿಐ ಹನುಮರಡ್ಡೆಪ್ಪನವರ ನೇತೃತ್ವದಲ್ಲಿ ಎ,ಎಸೈ, ವೆಂಕಣ್ಣ ಎಚ್,ಸಿ, ಮಲ್ಲಣ್ಣ ದೇಸಾಯಿ, ಹೊನ್ನಪ್ಪ ಬಜಂತ್ರಿ, ಬಾಬು ನಾಯ್ಕಲ್, ಮತ್ತು ಶಿವನಗೌಡ ಪಾಟೀಲ್, ಶಿವರಾಜ ಭಾಗಣ್ಣ ದೇವರಾಜ ವೆಂಕಟೇಶ ಭೀಮನಗೌಡ ರವರು ಖಚಿತ ಮಾಹಿತಿ ಮೇರೆಗೆ ವೇಶಾವಾಟಿಕೆ ದಂದೆಯಲ್ಲಿ ತೊಡಗಿಸಿಕೊಂಡು ಹಳೆ ತಹಿಸಲ್ದಾರ ಕಚೇರಿ ಸಮೀಪದಲ್ಲಿ ವಂಚನೆಯಿಂದ ಹಣ ಪಡೆದುಕೊಳ್ಳುತ್ತಿದ್ದಾಗ ಸಿದ್ದಣ್ಣಗೌಡ ಎನ್ನವ ವ್ಯಕ್ತಿ ಸಿಕ್ಕಬಿದ್ದಿದ್ದಾನೆ.

ನಂತರದಲ್ಲಿ ಹಾಲಬಾವಿ ರಸ್ತೆಯಲ್ಲಿರುವ ಮಂಜುಳಾ ರಾಠೋಡ್ ರವರ ಮನೆಯಲ್ಲಿ ಪೊಲೀಸ್ ರು ದಾಳಿ ಮಾಡಿದಾಗ ಏರಡು ಜನ ಮಹಿಳೆಯರು ಮತ್ತು ಮಂಜುಳಾ ಶಿಕ್ಷಕರಾಗಿ ಸೇವೆಯಲ್ಲಿದ್ದ ರಮೇಶ ರಾಠೋಡ್ ಮತ್ತು ಮೇಘಾ ಸುರುಪುರ ರವರನ್ನು ವಶಕ್ಕೆ ಪಡೆದರು. ವೇಶಾವಾಟಿಕೆ ದಂದೆ ರೂವರಿಯಾಗಿದ್ದು ಡೀಲ್ ಉಸ್ತುವಾರಿ ಸಿದ್ದಣಗೌಡ 3 ಲಕ್ಷ, ಡೀಲ ಹಣದಲ್ಲಿ 50 ಸಾವಿರ ತೆಗೆದುಕೊಳ್ಳುತ್ತಿದ್ದಾಗ ಬಂಧಿಸಿದರು.

ಪ್ರಕರಣ ದಾಖಲು ಮಾಡಿಕೊಂಡ ಪೊಲೀಸ್ ರು ಸೂಕ್ತ ತನಿಖೆ ನೆಡೆಸಿ ಆರೋಪಿತರಿಂದ ಎರಡು ಮೊಟಾರ ಬೈಕ್, ಮತ್ತು ಎರಡು ಮೋಬೈಲ್, ಹಾಗೂ 98 ಸಾವಿರ ರೂಗಳನ್ನು ದಸ್ತಗಿರಿ ಮಾಡಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

emedialine

View Comments

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

13 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

15 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

22 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

22 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

23 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago