ಆನೇಕಲ್: ಅಪಘಾತವೊಂದರಲ್ಲಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದ ಯುವಕನನ್ನು ಸನ್ ರೇ ಆಸ್ಪತ್ರೆಯ ವೈದ್ಯರ ತಂಡ ಸೂಕ್ತ ಶಸ್ತ್ರಚಿಕಿತ್ಸೆ ನಡೆಸಿ ಪ್ರಾಣಾಪಾಯದಿಂದ ರಕ್ಷಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ಕಳೆದ ಒಂದು ತಿಂಗಳ ಹಿಂದೆ ಮಧ್ಯರಾತ್ರಿ ೨ಗಂಟೆ ಸುಮಾರಿಗೆ ಅತ್ತಿಬೆಲೆ ಮೇಲ್ಸೇತುವೆ ಬಳಿ ನಡೆದ ಅಪಘಾತದಲ್ಲಿ ತಮಿಳುನಾಡು ಮೂಲದ ಧರ್ಮರಾಜನ್ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿರುತ್ತಾನೆ. ಹೊಟ್ಟೆಯ ಕರುಳಿನ ಭಾಗ ಸಂಪೂರ್ಣವಾಗಿ ಹೊರಬಂದ ಸ್ಥಿತಿಯಲ್ಲಿ ಸನ್‌ರೇ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾನೆ.
ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಯುವಕ ಧರ್ಮರಾಜ್‌ನನ್ನು ಉಳಿಸಲು ಪಣತೊಟ್ಟು ನಿಂತ ಸನ್ ರೇ ವೈದ್ಯರ ತಂಡ, ಸತತವಾಗಿ ಐದೂವರೆ ಗಂಟೆಗಲ ಕಾಲ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಗಾಯಾಳುವನ್ನು ಪ್ರಾಣಾಪಾಯದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವೇಳೆ ಸನ್ ರೇ ಆಸ್ಪತ್ರೆಯ ತಜ್ಞ ವೈದ್ಯ ಡಾ.ಹಿತೇಶ್ ರೆಡ್ಡಿ ಮಾತನಾಡಿ, ಸುಮಾರು ಒಂದು ತಿಂಗಳ ಹಿಂದೆ ಧರ್ಮರಾಜನ್ ಎಂಬ ಯುವಕ ಅತ್ತಿಬೆಲೆಯ ಮೇಲ್ಸೇತುವೆ ಬಳಿ ಬೈಕ್‌ನಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿರುತ್ತಾನೆ. ಕಿಬ್ಬೊಟ್ಟೆ, ಕರಳಿಗೆ ಗಂಭೀರವಾಗಿ ಗಾಯವಾಗಿರುತ್ತದೆ. ಇದರ ಜೊತೆಗೆ ರಕ್ತಸ್ರಾವದಿಂದಾಗಿ ನಿಸ್ತೇಜ ಸ್ಥಿತಿಗೆ ತಲುಪಿರುತ್ತಾನೆ. ಇಂತಹ ರೋಗಿಯನ್ನು ಸನ್ ರೇ ಆಸ್ಪತ್ರೆಯ ನುರಿತ ವೈದ್ಯರ ತಂಡ ಸವಾಲಾಗಿ ಸ್ವೀಕರಿಸಿ ಧರ್ಮರಾಜನ್ ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಒಂದು ದೊಡ್ಡ ಶಸ್ತ್ರ ಚಿಕಿತ್ಸೆಯ ನಂತರವು ಧರ್ಮರಾಜನ್ ಅವರನ್ನು ಉಳಿಸಿಕೊಳ್ಳುವಲ್ಲಿ, ಇತರೆ ಹಲವು ಸಣ್ಣ ಪ್ರಮಾಣದ ಚಿಕಿತ್ಸೆಯನ್ನು ನಡೆಸಬೇಕಾಯಿತು. ಆತನ ಕಿಬ್ಬೊಟ್ಟೆಯ ಗೋಡೆ ಸಂಪೂರ್ಣವಾಗಿ ಹಾಳಾಗಿದ್ದರಿಂದ ಆತನ ದೇಹದ ಬೇರೆ ಭಾಗದ ಚರ್ಮವನ್ನು ತೆಗೆದು ಕಿಬ್ಬೊಟ್ಟೆಯ ಗೋಡೆಗೆ ಅಂಟಿಸಲಾಯಿತು. ಹಾಗೆಯೇ ಎದೆ ಭಾಗದ ಮೂಳೆಗಳು ಮುರಿದು ಕೊಳೆಯಲು ಪ್ರಾರಂಭವಾಗಿತ್ತು. ಒಂದೂವರೆಯಿಂದ ಎರಡು ತಿಂಗಳವರೆಗೆ ಸತತ ಆರೈಕೆಯ ಪರಿಣಾಮ ಧರ್ಮರಾಜನ್ ಗುಣಮುಖರಾಗಿದ್ದಾರೆಂದು ಅವರು ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆಯ ಮೂಲಕ ಚೇರಿಸಿಕೊಂಡಿರುವ ಗಾಯಾಳು ಯುವಕ ಧರ್ಮರಾಜನ್ ಮಾತನಾಡಿ, ಇವತ್ತು ನಾನು ಜೀವಂತವಾಗಿ ಉಸಿರಾಡುತ್ತಿದ್ದೇನೆಂದರೆ ಅದಕ್ಕೆ ಸನ್ ರೇ ಆಸ್ಪತ್ರೆಯ ವೈದ್ಯರ ಕಾಳಜಿಯೇ ಮುಖ್ಯ ಕಾರಣ. ಅವರ ಅವಿರತ ಪರಿಶ್ರಮದ ಪರಿಣಾಮ ಗುಣಮುಖನಾಗಿದ್ದೇನೆ. ನನ್ನ ಬದುಕು ಇರುವವರೆಗೂ ಸನ್ ರೇ ಆಸ್ಪತ್ರೆಯ ವೈದ್ಯರ ತಂಡವನ್ನು ಮರೆಯುವುದಿಲ್ಲ ಎಂದು ಧನ್ಯವಾದ ಅರ್ಪಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಡಾ.ಪೂರ್ಣಲಿಂಗA, ಡಾ.ಪಿ.ಮಹೇಶ್, ಡಾ.ಮುತ್ತಮಿಲ್‌ಸೆಲ್ವಂ, ಡಾ.ರೇಖಾ ಮಹೇಶ್, ದೇವರಾಜ್ ನಾಯ್ಕ್ ಮತ್ತು ಆಸ್ಪತ್ರೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…