ಬಿಸಿ ಬಿಸಿ ಸುದ್ದಿ

ವಿಧವೆಯರಿಂದ ಮನೆ ಉದ್ಘಾಟಿಸಿದ ಶಿಕ್ಷಕ ದಂಪತಿ

ಶಹಾಬಾದ: ಗೃಹ ಪ್ರವೇಶ ಎಂದರೆ ಹೊಸ್ತಿಲ ಕೋಣೆಯಲ್ಲಿ ಅಲಂಕೃತ ದೇವರ ಸ್ಥಾಪನೆ, ಹೋಮ ಹವÀನ,ಗಂಟೆಯ ಶಬ್ಧ, ಮಂತ್ರ ಹರ್ಷೋದ್ಘಾರ, ಆಕಳ ಪ್ರವೇಶ, ಗೋವಿನ ಗಂಜಲ ಸಿಂಪರಣೆ,ಬಟ್ಟೆ ಮಾಡುವುದು ಹೀಗೆ ಹಲವು ರೀತಿಯ ಸಾಂಪ್ರದಾಯಿಕ ಆಚರಣೆಗಳನ್ನು ಅಲ್ಲಿ ಕಾಣುತ್ತೇವೆ. ಆದರೆ ಇಲ್ಲೊಬ್ಬ ಶಿಕ್ಷಕ ದಂಪತಿಗಳು ದೇವರ ಗದ್ದುಗೆ ಜಾಗದಲ್ಲಿ ಭಗತ್‍ಸಿಂಗ್ ಮತ್ತು ನೇತಾಜಿ ಶುಭಾಶ್ಚಂದ್ರ ಬೋಸ್ ಅವರ ಭಾವಚಿತ್ರಗಳನ್ನಿಟ್ಟು ಗಮನ ಸೆಳೆದಿದ್ದಾರೆ. ವಿಧವೆ ಮಹಿಳೆಯರಿಂದ ಮನೆ ಉದ್ಘಾಟಿಸಿದ್ದಾರೆ. ಆ ಮೂಲಕ ಮಡಿ ಮೌಢ್ಯಗಳನ್ನು ಧಿಕ್ಕರಿಸಿ ವೈಚಾರಿಕತೆ ಮನೋಭಾವನೆಯನ್ನು ಮೆರೆದಿದ್ದಾರೆ.

ಶಹಾಬಾದ ಪಟ್ಟಣದ ಹನುಮಾನ ನಗರದ ನಿವಾಸಿಗಳು, ದೇವದುರ್ಗದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ದಂಪತಿಗಳಾದ ಸತೀಶ ಗುರುಜಾಲಕರ ಮತ್ತು ರೇವಮ್ಮ ಸತೀಶ ಗುರುಜಾಲಕರ ಅವರ ನೂತನ ಗೃಹ ಪ್ರವೇಶ ಕಾರ್ಯಕ್ರಮ ಇತ್ತೀಚೆಗೆ ವಿಶಿಷ್ಟ ಹಾಗೂ ವಿಭಿನ್ನವಾಗಿ ನಡೆಯಿತು. ಮನೆ ತಳಪಾಯ ನಿರ್ಮಿಸುವಾಗ ಭೂಮಿ ಪೂಜೆ ಮಾಡಲಿಲ್ಲ್ಲ. ಬೋರ್ವೆಲ್ ಕೊರೆಸಿ ನೀರು ಚಿಮ್ಮಿದಾಗಲೂ ಪೂಜೆ ನಡೆಸಲಿಲ್ಲ. ಸಿದ್ಧಗೊಂಡ ಸುಂದರ ಮನೆಗೆ ಬೆದರು ಬೊಂಬೆ ತೂಗಿಸಲಿಲ್ಲ. ಮನೆಯ ಹೊಸ್ತಿಲ ಕೋಣೆಯಲ್ಲಿ ಸಹಜವಾಗಿ ಕಾಣುತ್ತಿದ್ದ ದೇವಿಯ ಮೂರ್ತಿ ಸ್ಥಾಪಿಸುವ ಜಾಗದಲ್ಲಿ ಈ ದಂಪತಿಗಳು ಕ್ರಾಂತಿಕಾರಿಗಳಾದ ಶಹೀದ್ ಭಗತ್‍ಸಿಂಗ್ ಹಾಗೂ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಭಾವಚಿತ್ರಗಳನ್ನು ಇಟ್ಟು ಬಂದ ಅತಿಥಿಗಳಿಂದ ಪುಷ್ಪಾರ್ಚನೆ ಮಾಡಿಸಿದರು.

ಇನ್ನೂ ವಿಶೇಷತೆ ಏನೆಂದರೆ ಈ ಮನೆಯನ್ನು ವಿಧವೆ ತಾಯಿ ಮತ್ತು ವಿಧವೆ ಅತ್ತೆಯ ಹಸ್ತಗಳಿಂದ ಉದ್ಘಾಟನೆಗೊಂಡಿದ್ದು, ಕ್ರಾಂತಿಕಾರಕ ಬದಲಾವಣೆ ಎನ್ನಬಹುದು. ಮಡಿವಂತಿಕೆ ಪಾಲಿಸುವ ಸನಾತನದ ಮಂದಿ, ವಿಧವೆಯರು ಎಂದರೆ ಅಪವಿತ್ರ ಮತ್ತು ಅಪಶಕುನ ಎಂದೇ ಭಾವಿಸಿ ಅವರನ್ನು ಶುಭಕಾರ್ಯಗಳಿಂದ ದೂರವೇ ಇಡುತ್ತಾರೆ. ಆದರೆ ಶಿಕ್ಷಕ ಸತೀಶ ಗುರುಜಾಲಕರ್ ಅವರು ವಿಧವೆಯರ ಪಾದಾರ್ಪಣೆ ಮೂಲಕವೇ ಮನೆ ಪ್ರವೇಶ ಮಾಡಿದ್ದು ಕ್ರಾಂತಿಕಾರಕ ಬದಲಾವಣೆ ಎನ್ನಬಹುದು. ಅಲ್ಲದೆ ಶುಭಕೋರಲು ಮನೆಗೆ ಬಂದ ಹಿತೈಷಿಗಳಿಂದ ಉಡುಗೊರೆ ಸ್ವೀಕರಿಸದೆ, ಪ್ರತಿಯೊಬ್ಬರಿಗೂ ಭಗತ್ ಸಿಂಗ್ ಭಾವಚಿತ್ರಗಳನ್ನು ನೆನಪಿನ ಕಾಣಿಕೆಯಾಗಿ ನೀಡಿದರು. ಶಿಕ್ಷಕ ದಂಪತಿಗಳ ಈ ಪ್ರಗತಿದಾಯಕ ಕಾರ್ಯಕ್ಕೆ ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ನಿವೃತ್ತ ಎಎಸ್‍ಐ ದೇವಿಂದ್ರಪ್ಪ, ಪ್ರಾಧ್ಯಾಪಕ ಡಿ.ಬಿ.ಅಂಗಡಿ, ಪ್ರಗತಿಪರ ಚಿಂತಕರಾದ ಎಚ್.ವಿ.ದಿವಾಕರ, ಡಾ.ರಮೇಶ ಲಂಡನಕರ, ವೀರಭದ್ರಪ್ಪ ಆರ್.ಕೆ, ಮಹೇಶ ಎಸ್.ಜಿ, ವಿ.ಜಿ.ದೇಸಾಯಿ, ಬಿ.ಭಗವಾನರೆಡ್ಡಿ ವಿಜಯಪುರ, ಡಾ.ಚಂದ್ರಗಿರೀಶ, ಶರಣಪ್ಪ ಉದ್ಬಾಳ ರಾಯಚೂರ, ಲಲಿತಾ ಬಿಜ್ಜರಗಿ, ರಾಮಣ್ಣ ಇಂಬ್ರಾಹಿಂಪುರ, ಗಣಪತರಾವ ಮಾನೆ, ಗುಂಡಮ್ಮ ಮಡಿವಾಳ, ಮನೋಹರ ಗುರುಜಾಲಕರ, ಮಡಿವಾಳಪ್ಪ ಹೇರೂರ, ಸಿದ್ದರಾಜ ಮಲಕಂಡಿ, ಹಣಮಂತ ಎಸ್.ಎಚ್, ಈರಣ್ಣ ಯರಗಟ್ಟಿ, ರಾಕೇಶ ಬೆಳಗಲ್, ಸಿದ್ದು ಸೋಂಪುರ, ನಾಗೇಶ ವಿ.ಕೆ, ಹಣಮಂತರಾಯ ಶ್ಯಾಖಿ ಸೇರಿದಂತೆ ಪತ್ರಕರ್ತರು, ಹೋರಾಟಗಾರರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮನೆ ಉದ್ಘಾಟನೆಯಲ್ಲಿ ಪಾಲ್ಗೊಂಡು ಪ್ರಗತಿಪರ ಬದಲಾವಣೆಗೆ ಸಾಕ್ಷಿಯಾದರು.

“ಇಂದಿನ ವೈಚಾರಿಕ ಯುಗದಲ್ಲೂ ಮೌಡ್ಯ, ಕಂದಾಚಾರಗಳಂತಹ ಅವೈಜ್ಞಾನಿಕ ಚಿಂತನೆಗಳನ್ನು ಉಳಿಸಿಕೊಂಡು ಹೋಗುವುದರಲ್ಲಿ ಅರ್ಥವಿಲ್ಲ. ಸಮಾಜವನ್ನು ವೈಚಾರಿಕವಾಗಿ ಮುನ್ನಡೆಸುವುದು ಇಂದಿನ ಅವಶ್ಯಕತೆಯಾಗಿದೆ. ಬುದ್ಧ, ಬಸವ, ಅಂಬೇಡ್ಕರ್, ರಾಜಾರಾಮ ಮೋಹನರಾಯ, ಈಶ್ವರಚಂದ್ರ ವಿದ್ಯಾಸಾಗರ, ಸ್ವಾಮಿ ವಿವೇಕಾನಂದ, ಸಾವಿತ್ರಿಬಾಯಿ ಫುಲೆ, ಭಗತ್‍ಸಿಂಗ್, ನೇತಾಜಿ, ಕುವೆಂಪು ಅವರಂತಹ ಮಹಾನ್ ವ್ಯಕ್ತಿಗಳು ನಮಗಾಗಿ ಉದಾತ್ತ ಚಿಂತನೆಗಳನ್ನು ಬಿಟ್ಟು ಹೋಗಿದ್ದಾರೆ. ಅವರ ಕನಸುಗಳ ಸಾಕಾರಕ್ಕೆ ನಮ್ಮದೊಂದು ಅಳಿಲು ಸೇವೆ ಅಷ್ಟೆ.” -ಸತೀಶ ಗುರುಜಾಲಕರ. ಶಿಕ್ಷಕರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

10 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

20 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

20 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

20 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago