ಕಲಬುರಗಿ: ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎನ್ನುವ ಸಚಿವ ಪ್ರಿಯಾಂಕ್ ಖರ್ಗೆಯವರ ಮಾತಿನ ಅರ್ಥದ ಹಿಂದೆ ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಬೆದರಿಸುವ ತಂತ್ರ ಅಡಗಿದೆ. ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ನಿಯಂತ್ರಿಸಲು ಅಲ್ಲಿನ ಆಡಳಿತ ಮಂಡಳಿ ಇದೆ ಆದರೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಉದ್ದೇಶಪೂರ್ವಕವಾಗಿ ಅಲ್ಲಿ ರಾಜಕೀಯ ಬೆರಸಿ ವಿದ್ಯಾರ್ಥಿಗಳ ಮಧ್ಯೆ ಸಂಘರ್ಷ ಏರ್ಪಡುವಂತೆ ಪ್ರಚೋದಿಸುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಹಾಗೂ ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಆರೋಪಿಸಿದ್ದಾರೆ.
ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರು ಮಾತು ಮಾತಿಗೆ ಒದ್ದು ಒಳಗೆ ಹಾಕಬೇಕು ಎನ್ನುತ್ತಾರೆ ಆದರೆ ಸ್ವಾಮಿ ವಿವೇಕಾನಂದರನ್ನು ಅಪಮಾನಗೊಳಿಸಿದವರನ್ನು ಒದ್ದು ಒಳಗೆ ಹಾಕಿ ಎಂದು ಏಕೆ ಹೇಳುತ್ತಿಲ್ಲ?. ಇದು ನಿಮ್ಮ ತುಷ್ಠಿಕರಣ ನೀತಿಯಲ್ಲವೇ?. ತಪ್ಪು ಮಾಡಿದವರನ್ನು ಪ್ರಶ್ನಿಸುವ ಮತ್ತು ಮೇರು ವ್ಯಕ್ತಿತ್ವದ ಮಹಾತ್ಮರನ್ನು ಅಪಮಾನಗೊಳಿಸಿದವರ ವಿರುದ್ಧ ಮಾತನಾಡಲು ಧೈರ್ಯ ಬೇಕು ಆದರೆ ಆ ಧೈರ್ಯ ನಿಮ್ಮಲ್ಲಿಲ್ಲ ಹೀಗಾಗಿ ನೀವು ತುಷ್ಠೀಕರಣ ಮಾಡುವುದರಲ್ಲೇ ನಿಮ್ಮ ರಾಜಕಾರಣ ನಡೆಯುತ್ತಿದೆ. ವಿಶ್ವವಿದ್ಯಾಲಯದಲ್ಲಿ ಹೋಗಿ ನಿಮ್ಮ ರಾಜಕಾರಣ ಮತ್ತು ಸಿದ್ಧಾಂತವನ್ನು ಹೇರಬೇಡಿ. ಅಲ್ಲಿನ ಶೈಕ್ಷಣಿಕ ಚಟುವಟಿಕೆಗಳು ಮುಕ್ತವಾಗಿ ನಡೆಯಲು ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಿದ್ದಾರೆ.
ಪೋಲಿಸರು ಅಪಮಾನಗೊಳಿಸಿದ ವಿದ್ಯಾರ್ಥಿಯ ಮೇಲೆ ಕ್ರಮಕೈಗೊಳ್ಳಲು ಎಫ್‍ಎಸ್‍ಎಲ್ ವರದಿ ಬರುವವರೆಗೆ ಕಾಯಿರಿ ಎಂದು ಹೇಳಿ ಮೀನಮೇಷ ಎಣಿಸುತ್ತಿದ್ದಾರೆ. ವಿಶ್ವವಿದ್ಯಾಲಯದಿಂದ ಅಮಾನತ್ತಾದ ವಿದ್ಯಾರ್ಥಿ ಬಹಿರಂಗವಾಗಿ ವಿಶ್ವವಿದ್ಯಾಲಯದಲ್ಲಿ ಇತರೆ ವಿದ್ಯಾರ್ಥಿಗಳನ್ನು ಹೆದರಿಸಿ ಓಡಾಡುತ್ತಿದ್ದಾನೆ. ಆದರೆ ಆ ವಿದ್ಯಾರ್ಥಿ ನೀಡಿರುವ ಆಧಾರ ರಹಿತ ತಪ್ಪು ದೂರುನ್ನು ಸ್ವೀಕರಿಸಿ, ರಾಜಕಾರಣ ಮತ್ತು ಕಾಂಗ್ರೆಸ್ ಮುಖಂಡರ ಒತ್ತಡಕ್ಕೆ ಮಣಿದು ಎಫ್‍ಐಆರ್ ದಾಖಲಿಸಲಾಗಿದೆ ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಈ ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥನ ಮೇಲೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸ್ವಾಮಿ ವಿವೇಕಾನಂದರನ್ನು ಈಡೀ ಜಗತ್ತು ಒಪ್ಪಿಕೊಂಡಿದೆ ಅವರಿಗೆ ಅವಮಾನ ಆಗುವ ರೀತಿಯಲ್ಲಿ ಅಲ್ಲಿನ ಯುವಕ ನಡೆದುಕೊಂಡಿದ್ದಾನೆ ಇದನ್ನು ಖಂಡಿಸುವುದನ್ನು ಬಿಟ್ಟು ಅಲ್ಲಿ ಆರ್‍ಎಸ್‍ಎಸ್ ಶಾಖೆ ನಡೆಯುತ್ತಿದೆ ಎಂದು ಹೇಳಿ ವಿಷಯವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ. ಸ್ವಾಮಿ ವಿವೇಕಾನಂದರ ವಿಷಯದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್ ಪಕ್ಷ ಹೊಂದಿರುವ ನಿಲುವನ್ನು ಮೊದಲು ಸ್ಪಷ್ಟಪಡಿಸಬೇಕು ನಂತರ ಬೇಕಾದರೆ ವಿಶ್ವವಿದ್ಯಾಲಯದ ಪರಿಶೀಲನೆ ನಡೆಸಲಿ ಎಂದು ಹೇಳಿದ್ದಾರೆ.
ಕಾಂಗ್ರೆಸ್‍ನವರೇ ಆಗಿದ್ದ ಮಾಜಿ ಪ್ರಧಾನಿ ದಿ. ರಾಜೀವ ಗಾಂಧಿಯವರು ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನಾಚರಣೆಯನ್ನಾಗಿ ಆಚರಿಸಲು ಕರೆ ನೀಡಿದ್ದು ತಮಗೆ ತಿಳಿಯದ ವಿಷಯವೇ? ಅಥವಾ ಉದ್ದೇಶಪೂರ್ವಕವಾಗಿ ಅದನ್ನು ಮುಚ್ಚಿಟ್ಟು ಉನ್ನತ ಶಿಕ್ಷಣದ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಮಧ್ಯೆ ಸಂಘರ್ಷ ಏರ್ಪಡಿಸುವುದು ನಿಮ್ಮ ಹುನ್ನಾರವೇ?. ವಿಶ್ವವಿದ್ಯಾಲಯಗಳು ಸ್ವಾಯತ್ತ ಸಂಸ್ಥೆಗಳು ಎನ್ನುವುದನ್ನು ಮರೆತು ತಾವು ಅಲ್ಲಿನ ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ?. ಸ್ವಾಮಿ ವಿವೇಕಾನಂದರನ್ನು ಅಪಮಾನಗೊಳಿಸಿದವರ ವಿರುದ್ಧ ಕ್ರಮಕೈಗೊಳ್ಳುವುದನ್ನು ಬಿಟ್ಟು ಅವರ ಸಮರ್ಥನೆಗೆ ನಿಂತಿದ್ದಿರಲ್ಲ ಇದು ನಿಮಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದ್ದಾರೆ.
ಜಾಯಿನ್ ಎಬಿವಿಪಿ ಅನ್ನೋ ಟ್ಯಾಗಲೈನ್ ಜೊತೆಗೆ ವಿವೇಕಾನಂದ ಭಾವಚಿತ್ರ ಇರುವ ಫೆÇೀಸ್ಟರ್‍ಗಳನ್ನು ಎಬಿವಿಪಿ ಕಾರ್ಯಕರ್ತರು ವಿವಿಯ ಹಲವೆಡೆ ಅಂಟಿಸಿದ್ದರು. ಇದೇ ವಿವಿಯಲ್ಲಿ ಒ.Sಅ ಉeogಡಿಚಿಠಿhಥಿ 3ನೇ ಸೆಮ್‍ನಲ್ಲಿ ಓದುತ್ತಿರುವ ವಿದ್ಯಾರ್ಥಿ ಆದರ್ಶ ಎನ್ನುವಾತ ಹಾಸ್ಟೆಲ್‍ನ ತನ್ನ ಕೋಣೆಯಲ್ಲಿನ ಕಸದ ಬುಟ್ಟಿಗೆ ಸ್ವಾಮಿ ವಿವೇಕಾನಂದರ ಭಾವಚಿತ್ರ ಇರುವ ಎಬಿವಿಪಿಯ ಸ್ಟಿಕ್ಕರ್ ಅಂಟಿಸಿದ್ದ. ಅμÉ್ಟೀ ಅಲ್ಲದೇ ಆ ಡಸ್ಟ್ ಬಿನ್ ಫೆÇೀಟೋ ತೆಗದು ಇನ್ಸಸ್ಟಾಗ್ರಾಮ್‍ನಲ್ಲಿ ಪೆÇೀಸ್ಟ್ ಮಾಡಿ ಞಟಿoತಿ ಥಿouಡಿ ಠಿಟಚಿಛಿe ಅಂತ ಬರೆದುಕೊಂಡಿದ್ದ. ಇದು ವಿವೇಕಾನಂದರಿಗೆ ಮಾಡಿದ ಅಪಮಾನವಲ್ಲವೇ?. ಎಂದು ಪ್ರಶ್ನಿಸಿದ್ದಾರೆ.
ಕೇರಳ ಮೂಲದ ವಿದ್ಯಾರ್ಥಿ ಆದರ್ಶ ಡಸ್ಟ್ ಬಿನ್‍ಗೆ ಸ್ವಾಮಿ ವಿವೇಕಾನಂದರ ಫೆÇೀಟೋ ಅಂಟಿಸಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟ ವಿಚಾರ ವಿವಿ ಆಡಳಿತ ಮಂಡಳಿ ಗಮನಕ್ಕೂ ಬಂದಿದೆ. ಇದಾದ ನಂತರ ಸ್ವಾಮಿ ವಿವೇಕಾನಂದರಿಗೆ ಅಪಮಾನ ಮಾಡಿರೋ ಹಿನ್ನೆಲೆ ವಿದ್ಯಾರ್ಥಿ ಆದರ್ಶಗೆ ವಿವಿ ಆಡಳಿತ ಮಂಡಳಿ ಎರಡು ತಿಂಗಳವರೆಗೆ ಸಸ್ಪೆಂಡ್ ಮಾಡಿರುವುದು ನಿಮ್ಮ ಗಮನಕ್ಕಿಲ್ಲವೇ?. ಎಂದು ಪ್ರಶ್ನೆ ಹಾಕಿದ್ದಾರೆ.
ಈ ಭಾಗದ ಅನೇಕ ರೈತರು ತಮ್ಮ ಬೆಲೆ ಬಾಳುವ ಜಮೀನುಗಳನ್ನು ನೀಡಿ ಕೇಂದ್ರೀಯ ವಿಶ್ವವಿದ್ಯಾಲಯ ಆರಂಭವಾಗಲು ಕಾರಣರಾಗಿದ್ದಾರೆ ಆದರೆ ಇತ್ತೀಚಿಗೆ ಕೆಲವರು ವಿಶ್ವವಿದ್ಯಾಲಯವನ್ನು ಗುತ್ತಿಗೆ ತೆಗೆದುಕೊಂಡವರ ಹಾಗೇ ವರ್ತಿಸುತ್ತಿದ್ದಾರೆ ಈ ಪ್ರವೃತ್ತಿ ನಿಲ್ಲಬೇಕು.
ಕೇಂದ್ರಿಯ ವಿಶ್ವವಿದ್ಯಾಲಯದ ಉಪಕುಲಪತಿಗಳು ಪ್ರಾಮಾಣಿಕರಾಗಿದ್ದು ತಮ್ಮ ವಿವೇಚನೆ ಮತ್ತು ಅಧಿಕಾರವನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಅಲ್ಲದೇ ವಿದ್ಯಾರ್ಥಿಗಳ ಮಧ್ಯೆ ಯಾವುದೇ ವೈಚಾರಿಕ ಸಂಘರ್ಷ ಏರ್ಪಡದಂತೆ ಆಡಳಿತ ನಡೆಸುತ್ತಿದ್ದಾರೆ ಆದರೆ ಕೆಲವರು ವಿಶ್ವವಿದ್ಯಾಲಯಕ್ಕೆ ಮತ್ತು ಉಪಕುಲಪತಿಗಳ ಹೆಸರಿಗೆ ಮಸಿ ಬಳಿಯಲು ಉದ್ದೇಶಪೂರ್ವಕವಾಗಿ ನಿರಂತರವಾಗಿ ಒಂದಲ್ಲ ಒಂದು ವಿವಾದ ಮಾಡಿ ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಇದನ್ನು ಖಂಡಿಸುವುದನ್ನು ಬಿಟ್ಟು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದನ್ನು ಬಿಟ್ಟು ಸಚಿವರು ಅವರ ರಕ್ಷಣೆಗೆ ಮುಂದಾಗಿರುವುದು ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…