ಶಹಾಬಾದ: ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ 1 9 ತಿಂಗಳ ಬಾಕಿ ಬಾಡಿಗೆ ಬಿಲ್ ಪಾವತಿ ಮತ್ತು ತರಕಾರಿ ಬಿಲ್ ಹಾಗೂ ಸಿಲಿಂಡರ್ ವಿತರಣೆ ಮಾಡುವಂತೆ ಹಾಗೂ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಕೂಡಲೇ ಆದೇಶ ಪ್ರತಿ ನೀಡಬೇಕು ಎಂದು ಒತ್ತಾಯಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಹಾಬಾದ್ ಕಚೇರಿ ಎದುರು ಕರ್ನಾಟಕ ಅಂಗನವಾಡಿ ನೌಕರರ ಸಂಘದ ವತಿಯಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಡಾ.ಸಾಯಬಣ್ಣಾ ಗುಡುಬಾ ಮಾತನಾಡಿ, ಸುಮಾರು 88 ಅಂಗನವಾಡಿ ಕೇಂದ್ರಗಳು ಬಾಡಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿವೆ. ಆದರೆ ಸುಮಾರು 19 ತಿಂಗಳಿಂದ ಅಂಗನವಾಡಿ ಕೇಂದ್ರಗಳ ಬಾಡಿಗೆ ಮೊತ್ತ ಪಾವುತಿಸಿಲ್ಲ. ಪರಿಣಾಮ ಕೇಂದ್ರಗಳು ನಡೆಸುವುದಕ್ಕೆ ಮನೆ ಮಾಲೀಕರು ಅಡ್ಡಿಪಡಿಸುತ್ತಿದ್ದಾರೆ. ಮಕ್ಕಳನ್ನು ಹೊರಗೆ ದಬ್ಬಿ, ಕೇಂದ್ರ ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ. ಇದು ದಿನಾಲು ಮನೆ ಮಾಲೀಕರಿಂದ ನಡೆಯುತ್ತಿರುವ ಕಿರುಕುಳವಾಗಿದೆ. ಕಾರ್ಯಕರ್ತೆಯರು ಭಯದ ವಾತಾವರಣದಲ್ಲೇ ಕೇಂದ್ರ ನಡೆಸುವಂತಾಗಿದೆ. ಎಂದು ಅಧಿಕಾರಿಗಳು ಕೂಡಲೇ ಬಾಡಿಗೆ ಬಿಲ್ ಪಾವತಿಸಬೇಕು ಎಂದು ಗುಡುಬಾ ಆಗ್ರಹಿಸಿದರು.
ಹೊಸ ಅಂಗನವಾಡಿ ಕೇಂದ್ರಗಳಿಗೆ 4 ವರ್ಷದಿಂದ ಇಲ್ಲಿಯವರೆಗೆ ಸಿಲಿಂಡರ್ ವಿತರಣೆ ಮಾಡಿಲ್ಲ. ಹಾಗೆ ಪ್ರತಿ ಅಂಗನವಾಡಿ ಕೇಂದ್ರಗಳಿಗೆ 4 ಸಿಲಿಂಡರ್ ವಿತರಣೆ ಮಾಡಬೇಕಾಗಿದೆ. ಹೀಗಾಗಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಮಾಡುವುದಕ್ಕೆ ತುಂಬಾ ಕಷ್ಟವಾಗುತ್ತಿದೆ. ಶಹಾಬಾದ್ ನಗರದ ವಿಠ್ಠಲ ಮಂದಿರ ಮತ್ತು ರಾಮಣಬಾಯಿ ಟೆಂಪಲ್ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಲಾಗಿದೆ. ಇದರಿಂದ ಪುನಾ ಅರ್ಜಿ ಕರೆಯಬಾರದು. ಸಲ್ಲಿಸಿದ ಅರ್ಜಿಗಳೇ ಅಂತಿಮಗೊಳಿಸಬೇಕು. ಶಹಾಬಾದ್ ವಲಯದ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಕರೆದ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ಸಲ್ಲಿಸಿದ ಫಲಾನುಭವಿಗಳಿಗೆ ಕೂಡಲೇ ಆದೇಶ ಪ್ರತಿ ನೀಡಬೇಕು. ಇಲ್ಲದಿದ್ದರೆ ಜಿಲ್ಲಾ ಕಚೇರಿ ಎದುರು ಪ್ರತಿಭಟನೆ ರೂಪಿಸಬೇಕಾಗುತ್ತದೆ ಎಂದು ಕರ್ನಾಟಕ ಅಂಗನವಾಡಿ ನೌಕರರ ಸಂಘದ ಶಹಾಬಾದ್ ತಾಲೂಕು ಅಧ್ಯಕ್ಷೆ ಸಾಬಮ್ಮ ಎಮ್ ಕಾಳಗಿ ಎಚ್ಚರಿಕೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭೀಮರಾವ ಹೊಸಮನಿ ಮಾತನಾಡಿ, ಇಲಾಖೆಗೆ ಕಡಿಮೆ ಅನುದಾನ ಬಂದಿದೆ. ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆರಂಭದಲ್ಲಿ ನಾಲ್ಕು ತಿಂಗಳ ಬಾಡಿಗೆ ಬಿಲ್, ತರಕಾರಿ ಬಿಲ್ ಹಾಗೂ ಪ್ರತಿ ಅಂಗನವಾಡಿ ಕೇಂದ್ರಗಳಿಗೆ 3 ಗ್ಯಾಸ್ ಸಿಲಿಂಡರ್ ಒಂದು ವಾರದಲ್ಲಿ ವಿತರಣೆ ಮಾಡುತ್ತೇವೆ. ಹಾಗೆ ವಿಠ್ಠಲ ಮಂದಿರ ಮತ್ತು ರಾಮಣಬಾಯಿ ಟೆಂಪಲ್ ಅಂಗನವಾಡಿ ಕೇಂದ್ರಕ್ಕೆ ಸಹಾಯಕಿ ಹುದ್ದೆಗೆ ಸಲ್ಲಿಸಿದ ಫಲಾನುಭವಿಗಳ ಅರ್ಜಿಗಳನ್ನು ಕೂಡ ಜಿಲ್ಲಾಧಿಕಾರಿಗಳು ಇತ್ಯರ್ಥ ಮಾಡುತ್ತೇವೆ ಎಂದು ತಿಳಿಸಿದ್ದಾರೆ ಎಂದು ಪ್ರತಿಭಟನಕಾರರಿಗೆ ತಿಳಿಸಿದ ಬಳಿಕ ಧರಣಿ ಸತ್ಯಾಗ್ರಹ ಹಿಂಪಡೆಯಲಾಯಿತು.
ಹಿರಿಯ ಮೇಲ್ವಿಚಾರಕಿ ಮೀನಾಕ್ಷಿ, ಮೈತ್ರಾಬಾಯಿ ತಳವಾರ(ನಗರ ಅಧ್ಯಕ್ಷೆ), ತಾಲ್ಲೂಕು ಅಧ್ಯಕ್ಷೆ ಸಾಬಮ್ಮ ಎಮ್ ಕಾಳಗಿ, ಅಂಬುಜಾ ಎಮ್ ಅಂತಪಳ್ಳಿ, ಸುಜಾತಾ ಬಸಪಟ್ಟಣ, ಲಕ್ಷ್ಮೀ ಜಾಧವ, ಕೆ.ಪಿಆರ್,ಎಸ್ ತಾಲೂಕು ಅಧ್ಯಕ್ಷ ರಾಯಪ್ಪ ಹುರುಮುಂಜಿ, ಲಕ್ಷ್ಮೀ ರಾಡಿಪಟ್ಟಿ, ಲಕ್ಷ್ಮೀ ಆರ್ ಪ್ರತಿಭಟನೆಯಲ್ಲಿ ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…