ಬಿಸಿ ಬಿಸಿ ಸುದ್ದಿ

ಆಹಾರವೂ ಔಷಧ ಅರಿತು ತಿನ್ನಿ: ಸಿಆರ್‍ಪಿ

ವಾಡಿ: ನಾವು ತಿನ್ನುವ ಪ್ರತಿಯೊಂದು ತರಕಾರಿ ಮತ್ತು ಆಹಾರ ದಾನ್ಯ ಪದಾರ್ಥಗಳು ಔಷಧ ಗುಣವನ್ನೇ ಹೊಂದಿವೆ. ಆದರೆ ಯಾವುದನ್ನು ಎಷ್ಟು ತಿನ್ನಬೇಕು ಎಂಬ ಅರಿವು ಮಾತ್ರ ನಮಗಿರಬೇಕು. ಆಹಾರ ಆಯ್ಕೆಯ ಅರಿವಿನ ಕೊರತೆಯಿಂದಾಗಿಯೇ ಹಲವರು ಅಪೌಷ್ಠಿಕತೆಯಿಂದ ಬಳಲುವಂತಾಗಿದೆ ಎಂದು ಶಿಕ್ಷಣ ಇಲಾಖೆಯ ವಾಡಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಸೂರ್ಯಕಾಂತ ದಿಗ್ಗಾಂವ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಕನ್ಯಾ ಪ್ರೌಢ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ತರಕಾರಿ, ಹಣ್ಣು ಹಾಗೂ ಸಿರಿದಾನ್ಯಗಳು ಔಷಧೀಯ ಗುಣ ಹೊಂದಿವೆ. ಮಕ್ಕಳಲ್ಲಿ ಕಂಡುಬರುವ ಅಪೌಷ್ಠಿಕತೆ ನಿವಾರಿಸಲು ಈ ಪದಾರ್ಥಗಳ ಸೇವನೆ ಅತ್ಯಗತ್ಯವಾಗಿದೆ. ರಕ್ತ ಹೀನತೆ ನಿವಾರಣೆಗೆ ಉತ್ತಮ ಆಹಾರವನ್ನು ಆಯ್ಕೆ ಮಾಡಿಕೊಂಡಲ್ಲಿ ಆರೋಗ್ಯ ಸಂರಕ್ಷಣೆಯಾಗುತ್ತದೆ. ನಮ್ಮ ಊಟದಲ್ಲಿ ತರಕಾರಿ ಬಹುಪಾಲು ಪಡೆದಿರಬೇಕು. ಇದರಿಂದ ದೇಹಕ್ಕೆ ಶಕ್ತಿ ನೀಡುತ್ತದೆ. ಊಟದ ಬಗ್ಗೆ ನಿರ್ಲಕ್ಷ್ಯ ಭಾವ ಹೊಂದಬಾರದು. ಹಸಿವಾದಾಗ ಊಟ ಮಾಡಲೇಬೇಕು. ಮನೆ ಪಾಠದ ಅಭ್ಯಾಸದ ಕಾರಣಕ್ಕೆ ಮಕ್ಕಳು ಹಸಿವಿನಿಂದ ಬಳಲುಬಾರದು. ಊಟದಿಂದ ದೇಹಕ್ಕೆ ಚೈತನ್ಯ ಲಭಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಶಿಕ್ಷಕ ಬಸವರಾಜ ಹೊಸಮನಿ, ಬೆಳೆಯುವ ಮಕ್ಕಳಲ್ಲಿ ಅಪೌಷ್ಠಿಕತೆ ಕಾಣಿಸಿಕೊಳ್ಳಬಾರದು ಎಂಬ ಕಾರಣಕ್ಕೆ ಸರಕಾರ ಪೌಷ್ಠಿಕಾಂಶಯುಕ್ತ ಬಿಸಿಯೂಟ ನೀಡುತ್ತಿದೆ. ತರಕಾರಿ ಮತ್ತು ಕಾಳು ಇಲ್ಲದ ಊಟ ಊಟವೇ ಅಲ್ಲ. ನಮ್ಮ ಶಾಲೆಯ ಮಕ್ಕಳಿಗೆ ಪ್ರತಿದಿನವೂ ಉತ್ತಮ ಗುಣಮಟ್ಟದ ರುಚಿಕರ ಊಟವನ್ನೇ ನೀಡುತ್ತಿದ್ದೇವೆ ಎಂಬ ಹೆಮ್ಮೆ ನಮಗಿದೆ ಎಂದರು.

ಪತ್ರಕರ್ತ ರಾಯಪ್ಪ ಕೊಟಗಾರ ಅತಿಥಿಯಾಗಿದ್ದರು. ಶಿಕ್ಷಕರಾದ ವತ್ಸಲಾ ಕುಲಕರ್ಣಿ, ಸುಧಾ, ವೀರಣ್ಣ, ಮಲ್ಲಿನಾಥ ಸಿಂಗೆ, ಶೈಲಾ ಹಳ್ಳಿ, ಲೋಕಪ್ಪ ಹೊಸಮನಿ ಸೇರಿದಂತೆ ನೂರಾರು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ವಿದ್ಯಾರ್ಥಿನಿ ಕವಿತಾ ಪ್ರಾರ್ಥಿಸಿದಳು. ಶಿಕ್ಷಕಿ ಆಶಾಲತಾ ನಿರೂಪಿಸಿದರು. ಶಿಕ್ಷಕ ಚಿದಾನಂದ ಮಠಪತಿ ವಂದಿಸಿದರು.

emedialine

Recent Posts

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 hour ago

ಬಡವರಿಗೆ ಹಣ್ಣು-ಹಂಪಲು ವಿತರಣೆ

ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ  ಜೈ ಕನ್ನಡಿಗರ…

1 hour ago

ಕಾರಾಗೃಹದ ಬಂದಿಗಳಿಗೆ ಮನಃ ಪರಿವರ್ತನೆಗೊಳ್ಳುವ ಚಲನ ಚಿತ್ರ ಸ್ಕ್ರೀನ್

ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…

1 hour ago

ಕನ್ನಡ ದೀಪೋತ್ಸವ: ವಿಜಯೀಭವ ಕೃತಿ ಜನಾರ್ಪಣೆ 24 ರಂದು

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…

1 hour ago

ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದಿಂದ ವಿಭಾಗಿಯ ಮಟ್ಟಕ್ಕೆ ಆಯ್ಕೆ

ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…

1 hour ago

ಅಭಿವೃದ್ಧಿ ಪರ ಚಿಂತನೆಯಳ್ಳ ಪ್ರಬುದ್ದ ರಾಜಕಾರಣಿ ಪ್ರಿಯಾಂಕ್ ಖರ್ಗೆ

ಶಹಾಬಾದ: ನಗರದ ಶಿವಯೋಗಿಸ್ವಾಮಿ ಪ್ರೌಢಶಾಲೆಯಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಜನ್ಮ…

1 hour ago