ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ ಪರಿವರ್ತನೆಗಾಗಿ ಪ್ರೋಜೆಕ್ಟ್‍ರ ಮೂಲಕ ಸ್ಕ್ರೀನ್ ಮೇಲೆ ಹಳೆಯ ಹಿಂದಿ ಚಲನ ಚಿತ್ರವಾದ ದೋ ಆಂಖೆ ಬಾರಹ್‍ತ ಸಿನಿಮಾವನ್ನು ತೋರಿಸಲಾಯಿತು.
ಈ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಡಾ. ಅನಿತಾ ಆರ್.ರವರು ಚಲನ ಚಿತ್ರಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಬಂದಿಗಳ ಮನಃ ಪರಿವರ್ತನೆಗಾಗಿ ಹಲವು ಕಾರ್ಯಕ್ರಮಗಳಲ್ಲಿ ಚಲನ ಚಿತ್ರವು ವೀಕ್ಷಣೆಯು ಒಂದು ಭಾಗ ಹಾಗಾಗಿ ಉತ್ತಮವಾದ ಮನಃ ಪರಿವರ್ತನೆಗೊಳ್ಳುವಂತಹ ಚಲನ ಚಿತ್ರಗಳನ್ನು ತೋರಿಸುವುದರ ಮುಖಾಂತರ ಅವರಲ್ಲಿ ಆತ್ಮ ವಿಶ್ವಾಸವನ್ನು ತುಂಬುವುದರ ಜೊತೆಗೆ ತಾವು ಮಾಡಿದ ತಪ್ಪಿಗೆ ಪಶ್ವಾತಾಪ ಪಟ್ಟು ಇಲ್ಲಿಂದ ಬಿಡುಗಡೆಗೊಳ್ಳುವ ಸಮಯದಲ್ಲಿ ಸಮಾಜಕ್ಕೆ ಬೇಕಾಗುವ ಸಮಾಜ ಮುಖಿಯಾಗಿ ಕಾರ್ಯವನ್ನು ಮಾಡುವ ಒಳ್ಳೆಯ ಪ್ರವೃತ್ತಿಗಳಿಂದ ಇಲ್ಲಿಂದ ಕಲೆತುಕೊಂಡು ಹೋಗುವಂತೆ ಹೇಳಿದರು.
ಅಲ್ಲದೇ ತಾವು ವೀಕ್ಷಿಸಿದ ಈ ಚಲನ ಚಿತ್ರದಲ್ಲಿರುವ ಒಳ್ಳೆತನವನ್ನು ಇನ್ನೊಬ್ಬರ ಹಂಚಿಕೊಂಡು ಅವರ ಮನಃ ಪರಿವರ್ತನೆಗಾಗಿ ಕೈ ಜೋಡಿಸಬೇಕಾಗಿ ತಿಳಿ ಹೇಳಿದರು.
ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಮನಃ ಪರಿವರ್ತನೆಗೊಳ್ಳುವಂತಹ ಚಿತ್ರಗಳನ್ನು ವೀಕ್ಷಿಸಲು ಅನುಕೂಲ ಮಾಡಿ ಕೊಡಲಾಗುವುದು. ಈ ಕಾರಾಗೃಹದಲ್ಲಿ ಪ್ರಭಾರಿ ಅಧೀಕ್ಷಕರಾದ ಬಿ.ಸುರೇಶ, ಸಹಾಯಕ ಆಡಳಿತಾಧಿಕಾರಿಯಾದ ಭೀಮಾಶಂಕರ ಡಾಂಗೆ, ಜೈಲರ್ ಶ್ರೀಮತಿ ಸುನಂದ ವಿ., ಶಿಕ್ಷಕರಾದ ನಾಗರಾಜ ಮೂಲಗೆ, ಅದಾನಿ ಸಂಸ್ಥೆಯ ಹರಿಶ್ ಗೌಳಿ ಇತ್ಯಾದಿಯವರು ಭಾಗವಹಿಸಿ ಚಲನ ಚಿತ್ರಗಳನ್ನು ವೀಕ್ಷಿಸಿದರು.
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…
ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…
ಶಹಾಬಾದ: ನಗರದ ಶಿವಯೋಗಿಸ್ವಾಮಿ ಪ್ರೌಢಶಾಲೆಯಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಜನ್ಮ…
ಶಹಾಬಾದ: ತಾಲೂಕಿನ ರಾವೂರ ಗ್ರಾಮದ ಮೋರಾಜಿ ದೇಸಾಯಿ ವಸತಿ ನಿಲಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಎಂ ಖರ್ಗೆಜಿಯವರ 46ನೇ…