ಬಿಸಿ ಬಿಸಿ ಸುದ್ದಿ

ಪತ್ರಿಕೊದ್ಯಮ ವಿದ್ಯಾರ್ಥಿಗಳು ತಂತ್ರಜ್ಞಾನದ ಕೌಶಲ್ಯ ಅಳವಡಿಸಿಕೊಳ್ಳಿ: ಪ್ರೊ. ದಯಾನಂದ ಅಗಸರ್

ಕಲಬುರಗಿ: ಪತ್ರಿಕೋದ್ಯಮ ವಿದ್ಯಾರ್ಥಿಗಳು ತಾಂತ್ರಿಕ ಜಗತ್ತಿನಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ಅದರ ಪ್ರಾಯೋಗಿಕ ಅವಿಷ್ಕಾರ ಮತ್ತು ಸಾಧನೆಗಳು ಸಮಾಜದ ಜನರಿಗೆ ತಲುಪಿದಾಗ ಮಾತ್ರ ಹೆಚ್ಚು ಮಹತ್ವ ಮತ್ತು ಮೌಲ್ಯ ಸಿಗಲಿದೆ. ವೃತ್ತಿ ಕ್ಷೇತ್ರದ ಕೌಶಲಗಳ ಹೊಸತನ ರೂಢಿಸಿಕೊಂಡರೆ ಹೆಚ್ಚು ಸಾಧನೆ ಮಾಡಬಹುದು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಆಯೋಜಿಸಿದ ‘ವಿಶ್ವ ಛಾಯಾಗ್ರಹಣ ಹಾಗೂ ಶಿಕ್ಷಕರ ದಿನಾಚರಣೆ ಮತ್ತು ಮಲ್ಟಿಮೀಡಿಯಾ ಸೆಂಟರ್‌ನ ಯುಟ್ಯೂಬ್ ಚಾನೆಲ್ ಬಿಡುಗಡೆ’ ಕಾರ್ಯಕ್ರಮವನ್ನು ಸಾವಿತ್ರಿ ಬಾಯಿಪುಲೆ ಮತ್ತು ಸರ್ವಪಲ್ಲಿ ರಾಜಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಈ ಭಾಗದ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಬಂದಿದ್ದಾರೆ. ಅವರ ಪತ್ರಕರ್ತರಾಗುವ ಕನಸನ್ನು ಈಡೇರಿಸುವ ಜವಾಬ್ದಾರಿ ಪತ್ರಿಕೋದ್ಯಮ ವಿಭಾಗದ ಶಿಕ್ಷಕರ ಮೇಲಿದೆ. ಪತ್ರಿಕೋದ್ಯಮ ಕ್ಷೇತ್ರದ ಅವಿಭಾಜ್ಯ ಅಂಗವಾಗಿರುವ ಛಾಯಾಗ್ರಹಣ ಕಲೆ ವಿಭಿನ್ನ ವೃತ್ತಿಯಾಗಿದ್ದು ಛಾಯಾಗ್ರಾಹಕ ವೃತ್ತಿ ಕಲೆಯ ಅನುಭವ ಕೂಡ ಅಷ್ಟೇ ಅವಶ್ಯಕ. ಪತ್ರಕರ್ತರಾಗುವ ವಿದ್ಯಾರ್ಥಿಗಳು ಛಾಯಾಗ್ರಹಣ ಕಲೆ ಹಾಗೂ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಲಬುರಗಿ ಕನ್ನಡ ಪ್ರಭ ದಿನಪತ್ರಿಕೆ ವಿಶೇಷ ಪ್ರತಿನಿಧಿ ಶೇಷಮೂರ್ತಿ ಅವಧಾನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಮಾಧ್ಯಮ ವಿದ್ಯಾರ್ಥಿಗಳು ಪತ್ರಿಕೋದ್ಯಮವನ್ನು ಶಾಸ್ತ್ರಿಯವಾಗಿ ಅಧ್ಯಯನ ಮಾಡುವುದರ ಜೊತೆಗೆ ವೃತ್ತಿರಂಗದಲ್ಲಿನ ನಾವೀನ್ಯತೆ ಬೆಳವಣಿಗೆ, ಭಾಷಾ ಕೌಶಲ್ಯದ ಜೊತೆಗೆ ತಾಂತ್ರಿಕ ಅನುಭವಗಳನ್ನು ನಿರಂತರವಾಗಿ ಅಭ್ಯಾಸ ಮಾಡಿಕೊಂಡರೆ ಉತ್ತಮ ಅವಕಾಶಗಳನ್ನು ಪಡೆಯಬಹುದು ಎಂದ ಅವರು ಪತ್ರಿಕೊದ್ಯಮ ಕ್ಷೇತ್ರದಲ್ಲಿ ಅಪಾರ ಉದ್ಯೋಗಾವಕಾಶಗಳು ಸೃಷ್ಠಿಯಾಗಿವೆ. ಅದರಲ್ಲಿ ನೀವು ಯಶಸ್ವಿಯಾಗಬೇಕಾದರೆ ಕಲಿಕಾ ಆಸಕ್ತಿ ಜೊತೆಗೆ ವೃತ್ತಿ ಪ್ರಜ್ಞೆ ಮತ್ತು ವೃತ್ತಿ ಅನುಭವ ಪಡೆಯುವುದು ಅಗತ್ಯವಿದೆ ಎಂದರು.

ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ತಾಜುದ್ದೀನ್ ಆಜಾದ್ ಅವರು ವಿಶೇಷ ಉಪನ್ಯಾಸ ನೀಡುತ್ತಾ . ಪತ್ರಿಕಾ ಛಾಯಾಚಿತ್ರಗಳನ್ನು ಓದುಗರು ಹೆಚ್ಚು ವೀಕ್ಷಿಸುವುದರಿಂದ ಸುದ್ದಿ ಸುಲಭವಾಗಿ ಅರ್ಥವಾಗುತ್ತದೆ. ಒಬ್ಬ ಅತ್ಯುತ್ತಮ ಛಾಯಾಗ್ರಾಹಕ ಸೂಕ್ಷ್ಮ ಸಂವೇದನೆಯಿರುವ ಚಿತ್ರಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಲು ಸಾಧ್ಯವಿದೆ. ಛಾಯಾಗ್ರಾಹಕ ವೃತ್ತಿ ಒಂದು ಸವಾಲಿನ ವೃತ್ತಿಯಾಗಿದ್ದು ಸಮಯ ಪ್ರಜ್ಞೆ ಮತ್ತು ತಾಳ್ಮೆಯಿಂದ ನಿಭಾಯಿಸುವ ಲಕ್ಷಣಗಳು ಇರಬೇಕಾಗುತ್ತದೆ. ಸಮಕಾಲೀನ ಛಾಯಾಚಿತ್ರಗಳ ಮೂಲಕ ಸತ್ಯ ಸಂಗತಿ ಮತ್ತು ಸಮಸ್ಯೆಗಳನ್ನು ಸಮಾಜಕ್ಕೆ ತೋರಿಸುವುದರ ಜೊತೆಗೆ ಛಾಯಾಗ್ರಾಹಕರು ಹಲವಾರು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸುವರು ಎಂದರು.

ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಂ ಬೈರಪ್ಪ ಮಾತನಾಡಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಪತ್ರಿಕೆ ಮತ್ತು ಟೆಲಿವಿಷನ್ ಚಾನೆಲ್‌ಗಳ ಕೇಂದ್ರ ಸ್ಥಾನದ ಕಾರ್ಯಚಟುವಟಿಕೆಗಳ ಜ್ಞಾನ ಅತಿ ಅವಶ್ಯವಿದೆ. ಅಲ್ಲಿ ವೃತ್ತಿ ಸಂಬಂದಿಸಿದ ಪ್ರಾಯೋಗಿಕ ಜ್ಞಾನ ಪಡೆದುಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜನಾಧಿಕಾರಿ ಡಾ. ಸುರೇಶ್ ಜಂಗೆ ಅಧ್ಯಕ್ಷತೆ ವಹಿಸಿ ಮಾತನಾಡಿ ಪತ್ರಿಕೋದ್ಯಮ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ ವಿಶೇಷ ಉಪನ್ಯಾಸ ಹಾಗೂ ವೃತ್ತಿ ಕೌಶಲ್ಯ ಕಲಿಕೆಗೆ ಹೆಚ್ಚು ಒತ್ತು ನೀಡಲಾಗುವುದು. ವೃತ್ತಿ ತರಬೇತಿ ಮೂಲಕ ಪತ್ರಕರ್ತರಾಗಲು ವಿನೂತನ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಮಲ್ಟಿ ಮೀಡಿಯಾ ಸೆಂಟರ್‌ನ ಛಾಯಾಗ್ರಾಹಕ ಮತ್ತು ಕಲಾವಿದ ಗುರುಚೌವಾಣ, ವಿಡಿಯೋಗ್ರಾಫರ್ ಶರಣುನಾವಿ, ಆನ್‌ಲೈನ್ ಸಂಕಲನಕಾರ ಮಹೇಶ್ ಶ್ರೀಗಣಿ ಹಾಗೂ ವಿಭಾಗದ ಸಂಯೋಜನಾಧಿಕಾರಿ ಡಾ. ಸುರೇಶ್ ಜಂಗೆ, ಡಾ. ಕೆ. ಎಂ. ಕುಮಾರಸ್ವಾಮಿ, ಶ್ರೀಮತಿ. ರೀತು ತಳವಾರ, ಡಾ. ರಾಜಕುಮಾರ್ ದಣ್ಣೂರು, ಡಾ. ಅಶೋಕ್ ಶರಣಪ್ಪ, ಸಂಶೋಧನಾ ವಿದ್ಯಾರ್ಥಿ ಆನಂದ್ ಎಂ ಯಾತನೂರ್ ಹಾಗೂ ಶಿಕ್ಷಕೇತರ ಸಿಬ್ಬಂದಿ ಅಯ್ಯಣ್ಣ ಬಡಿಗೇರ್ ಇವರನ್ನು ಸನ್ಮಾನಿಸಲಾಯಿತು.

ಆರ್ಟಿಪಿಸಿಯಲ್ ಇಂಟಲಿಜನ್ಸ್ (ಕೃತಕ ಬುದ್ಧಿಮತ್ತೆ) ಅಧ್ಯಯನ ಕೈಗೊಂಡು ನಿರ್ಮಾಣ ಕಾರ್ಯ ನಿರ್ವಹಿಸಿದ ಶ್ರವಣಯೋಗಿ ಹಿರೇಮಠ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಪತ್ರಿಕೋದ್ಯಮ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು, ದೃಶ್ಯಕಲಾ ವಿಭಾಗ ಮತ್ತು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅತಿಥಿ ಉಪನ್ಯಾಸಕ ಡಾ. ಕೆ.ಎಂ. ಕುಮಾರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ. ಅಶೋಕ ಅತಿಥಿಗಳನ್ನು ಸ್ವಾಗತಿಸಿದರು. ಸಾಬಣ್ಣ ನಂದಿಹಳ್ಳಿ ಹಾಗೂ ಅರುಣ್ ಕುಮಾರ್ ಅತಿಥಿ ಪರಿಚಯಿಸಿದರು. ಬೌರಮ್ಮ ಪ್ರಾರ್ಥಿಸಿದರು. ಅರುಣ್‌ಕುಮಾರ್ ಹೆರೂರ ವಂದಿಸಿದರು. ಭೀಮಾಶಂಕರ್ ಜಳಕಿ ಕಾರ್ಯಕ್ರಮ ನಿರೂಪಿಸಿದರು.

ಪತ್ರಿಕೋದ್ಯಮ ವಿಭಾಗದ ಸಂಯೋಜನಾಧಿಕಾರಿ ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ರೂಪಿಸಿದ ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಭಾವನಾ ಹೆಸರಿನ ನಿರೂಪಕಿ ಅಚ್ಚ ಕನ್ನಡದಲ್ಲಿ ಸುದ್ದಿ ವಾಚಿಸಿರುವ ಪ್ರಯೋಗ ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಈ ಆವಿಷ್ಕಾರ ಮತ್ತು ಪ್ರಯೋಗ ಸಮಾಜಕ್ಕೆ ತಿಳಿಸುವ ಕೆಲಸವಾಗಬೇಕು ವಿಭಾಗದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅಭಿನಂದನೆ.- ಪ್ರೊ. ದಯಾನಂದ ಅಗಸರ್ ಕುಲಪತಿಗಳು ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

19 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

19 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

19 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago