ಬಿಸಿ ಬಿಸಿ ಸುದ್ದಿ

ಪಾಲಿಕೆ ಆಯುಕ್ತರು ಸೇರಿದಂತೆ ಅಧಿಕಾರಿಗಳೊಂದಿಗೆ ಶಾಸಕ ಅಲ್ಲಂಪ್ರಭು ಪಾಟೀಲ್‌ ಸಭೆ

ಕಲಬುರಗಿ: ಮಹಾ ನಗರದ ಬೀದಿ ದೀಪ ಜಾಲಕ್ಕೆ ಹೊಸರೂಪ ನೀಡಬೇಕು, ಬಹಮನಿ ಕೋಟೆ ಸುತ್ತಲಿರುವ ನೀರಿನ ಹೊಂಡ (ಮೋಟ್‌) ನಲ್ಲಿ ದೋಣಿ ವಿಹಾರಕ್ಕೆ ವ್ಯವಸ್ಥೆ ಮಾಡಬೇಕೆಂದು ಕಲಬುರಗಿ ದಕ್ಷಿಣ ಶಾಸಕ ಲ್ಲಂಪ್ರಭು ಪಾಟೀಲ್‌ ಪಾಲಿಕೆ ಅಧಿಕಾರಗಳಿಗೆ ಸೂಚಿಸಿದ್ದಾರೆ.

ಪಾಲಿಕೆಯ ಸಭಾಂಗಣದಲ್ಲಿ ಆಯುಕ್ತ ಭುವನೇಶ ಪಾಟೀಲ್‌ ಹಾಗೂ ಅಧಿಕಾರಿಗಳೊಂದಿಗೆ ಸುದೀರ್ಘ 5 ಗಂಟೆಗಳ ಕಾಲ ಸಭೆ ನಡೆಸಿ ನಗರದ ಅಭಿವೃದ್ಧಿ ವಿಚಾರಗಳನ್ನಲ್ಲ ಪ್ರಸ್ತಾಪಿಸುತ್ತ ಮಹತ್ವದ ಸಲಹ- ಸೂಚನೆ ನೀಡಿದರು, ಅನೇಕ ವಿಚಾರಗಳಲ್ಲಿ ಮಾಹಿತಿ ಪಡೆದುಕೊಂಡರು.

ಕಲಬುರಗಿ ನಗರ ಬೀದಿ ದೀಪ ವ್ಯವಸ್ಥೆಗೆ ಹೊಸರೂಪ ನೀಡಲಾಗುತ್ತಿದೆ. ಇದಕ್ಕಾಗಿ ಕಳೆದ ವರುಷ 51 ಕೋಟಿ ರು ವೆಚ್ಚದ ಟಂಡರ್‌ ಕರೆದು ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಸಿಸಿಎಂಎಸ್‌ ಯೋಜನೆಯಡಿಯಲ್ಲಿ ಪಾಲಿಕೆಗೆ ವಾರ್ಷಿಕ 9 ಕೋಿ ರು ಉಳಿತಾಯವಾಗಲಿದೆ. ಜೊತೆಗೇ ಇಂಧನ ಬಳಕೆಯೂ 1 ಕೋಟಿ ಕಿಲೋ ವಾಟ್‌ನಷ್ಟು ತಗ್ಗಲಿದೆ ಎಂದು ಪಲಿಕ ವಿದ್ಯತ್‌ ವಿಭಾಗದ ಇಂಜಿನಿಯರ್‌ ಶಿವನಗೌಡ ಪಾಟೀಲ್‌ ಸಭಯಲ್ಲಿ ವಿವರಿಸಿದರು.

ತಮ್ಮ ವಿಭಾಗದ ಕಾಮಗಾರಿಗಳನ್ನು ವಿವರಿಸಿದ ಅವರು ನಗರದಲ್ಲಿ 36, 515 ದೀಪ ಸಹಿತ ಕಂಬಗಳಿವೆ. ಇನ್ನು 4, 983 ದೀಪ ರಹಿತ ಕಂಬಗಳಿವೆ. ದೀಪ ಸಹಿತ ಕಂಬಗಳಲ್ಲಿ ಈಗಾಗಲೇ 30 ಸಾವಿರ ಕಂಬಗಳಿಗೆ ಎಲ್‌ಇಡಿ ಬಲ್ಬ್‌ ಅಳ‍ಡಿಸಲಾಗಿದೆ. ಇನ್ನು 2 ತಿಂಗಳಲ್ಲಿ ಉಳಿದೆಲ್ಲ ಕಂಬಗಿಗೆ ಎಲ್‌ಇಡಿ ಬಲ್ಬ್‌ ಅಳವಡಿಸಲಾಗುತ್ತಿದೆ. ಇದಕ್ಕಾಗಿ ಮುಂಬೈ ಮೂಲದ ಇ ಸ್ಮಾರ್ಟ್‌ ಏಜನ್ಸಿಗೆ ಗುತ್ತಿಗೆ ದೊರಕಿದೆ. ಇದರಿಂದ ಪಾಲಿಕೆಗೆ ಹಣ, ಇಂಧನ ಎರಡೂ ಉಳಿತಾಯಾಗುತ್ತಿದೆ ಎಂದು ವಿವರಿಸಿದರು.

ನಗರ ಬೀದಿ ದೀಪಗಳ ನಿರ್ವಹಣೆಗೆಂದೇ 1, 653 ಸಿಸಿಎಎಸ್‌ ಪ್ಯಾನೆಲ್‌ ಮಾಡಲಾಗುತ್ತದೆ. ಇವುಗಳನ್ನು ಆಯಾ ಬೀದಿ ದೀಪಗಳ ಜಾಲಗಳಿಗೆ ಅಳವಡಿಸುವ ಮೂಲಕ ಬಹುತೇಕ ಎಲ್ಲಾ ಸಿಸಿಎಂಎಸ್‌ ಬೀದಿ ದಿಪಗಳ ಜಾಲದ ನಿರ್ವಹಣೆಯನ್ನು ಸ್ವಯಂಚಾಲಿತಗೊಳಿಸಲಾಗುತ್ತದೆ. ಈಗಾಗಲೇ ಗುತ್ತಿಗೆದಾಗ 1, 063 ಪ್ಯಾನೆಲ್‌ ಅಳ‍ಡಿಸಿದ್ದಾರೆ. ಉಳಿದೆಲ್ಲ ಪ್ಯಾನೆಲ್‌ ಕಾಮಗಾರಿ ಮುಗಿದಾಕ್ಷಣ ನಗರ ದೀಪದ ನಿಯಂತ್ರಣ ವ್ಯವಸ್ಥೆ ಒದು ಶಿಸ್ತಿನಲ್ಲ ನಡೆಯಲಿದೆ ಎಂದರು.

ಶಾಸಕ ಅಲ್ಲಂಪ್ರಭು ಪಾಟೀಲರು ನಗರ ದೀಪದ ಸವಲತ್ತಿನ ವಿಚಾರದಲ್ಲಿ ಕೈಗೆತ್ತಿಕೊಳಲ್ಳಲಾದ ಕ್ರಮಗಳ ಬಗ್ಗೆ ತಮ್ ಮೆಚ್ಚುಗೆ ಸೂಚಿಸುತ್ತ ಹೆಚ್ಚಿನ ದೀಪಗಳನ್ನು ಳವಡಿಸಿರಿ, ಜನರಿಗೆ ತೊಂದರೆ ಆಗದಂತೆ ಕ್ರಮಕ್ಕೆ ಮುಂದಾಗುವಂತೆ ಸೂಚಿಸಿದರು. ನಗರದಲ್ಲಿರುವ 5 ಸಾವಿರದಷ್ಟು ದೀಪ ರಹಿತ ಕಂಬಗಳಿಗೂ ದೀಪದ ಸವಲತ್ತಿಗಾಗಿ ಕೋರಿ ಪ್ರಸ್ತಾವನೆ ಸರಕಾರದ ಹಂತದಲ್ಲಿದ್ದು ಶೀಘ್ರ ಅನುಮೋದನೆ ದೊರಕಲಿದೆ ಎಂಬ ವಿಶ್ವಾಸ ಅವರು ವ್ಯಕ್ತಪಡಿಸಿದ್ದಾರೆ.

ಇದಲ್ಲದೆ ಸಭೆಯಲ್ಲಿ ಪಾಲಿಕೆ ವ್ಯಾಪ್ತಿಯ ಕರ ವಸೂಲಿ ನಿದಾನವಾಗಿರೋದು ಗಂಭೀರವಾಗಿ ಚರ್ಚೆಗೆ ಬಂತು. ಶೇ. 45 ರಷ್ಟೇ ಕರ ವಸೂಲಿಯಾಗಿದರುವ ಬಗ್ಗೆ ಶಾಸಕ ಅಲ್ಲಂಪ್ರಭು ಪಾಟೀಲ್‌ ಅಸಮಾಧಾನ ಹೊರಹಾಕಿದರು. ನಗರದ ನಾಲ್ಕೂ ವಲಯ ಕಚೇರಿಗಳಂದ 20 ಲಕ್ಷದಂತೆ ಕರ ವಸೂಲಿಯಾಗಬೇಕು. ಇದರಿಂದ ನಗರ ಅಭಿವೃದ್ಧಿಗೆ ಅನುಕೂಲವಗಲಿದೆ. ಕರ ವಸೂಲಿಗೆ ಹೆಚ್ಚಿನ ಲಕ್ಷ ವಹಿಸದೆ ಹೋದಲ್ಲಿ ಕ್ರಮ ನಿಶ್ಚಿತ ಎಂದು ಅಾಧಕಾರಿಗಳಿಗೆ ತಿಳಿಸಿದರು.

ಇದಲ್ಲದೆ ಪಾಲಿಕೆಯವರು ನೀಡುವ ಕಟ್ಟಡ ಪರವಾನಿಗೆ ಇತ್ಯಾದಿಗಾಗಿ ಸಿಬ್ಬಂದಿ ಲಂಚ ಕೇಳುವ ವಿಚಾರವಾಗಿಯೂ ಸಭೆಯಲ್ಲಿ ಗಮನ ಸೆಳೆದ ಶಾಸಕರು ಇವೆಲ್ಲ ನಡೆಯದಿಲ್ಲ. ಕಲಸ ಮಾಡಬೇಕು. ಇ್ಲದೆ ಹೋದಲ್ಲಿ ಬೇರೆಡ ಹೋಗುವಂತೆ ಸೂಚಿಸಿದರು.

ಕಲಬುರಗಿ ಬಹಮನಿ ಕೋಟೆ ಸುತ್ತಮುತ್ತ ದೊಡ್ಡ ಗಾತ್ರದ ನೀರಿನ ಹೊಡವಿದೆ. ಇಲ್ಲಿ ನೀರನ್ನು ಬಳಸಿ ಹೊಲಸು ಮಾಲಾಗುತ್ತಿದೆ. ಈ ಹೊಂಡಕ್ಕೆ ಬರುವ ನೀರನ್ನು ಶುದ್ದೀಕರಿಸಿ ಇಲ್ಲೇ ದೋಣಿ ವಿಹಾರ ಯಾಕೆ ಮಾಡಬಾರದು? ಈ ಬಗ್ಗೆ ಪಾಲಿಕೆ ಪ್ರಸ್ತಾವನೆ ಸಿದ್ಧಪಡಿಸಲಿ, ತಾವು ಸರಕಾರದ ಹಂತದಲ್ಲಿ ಹೆಚ್ಚಿನ ಅನುದಾನ ತಂದು ಕೋಟೆ ಸೌಂದರೀಕರಣಕ್ಕೆ ಶ್ರಮಿಸೋದಾಗಿಯೂ ಸಭೆಯಲ್ಲಿ ಶಾಸಕರು ವಿವರಿಸಿದರು.

ಪಾಲಿಕೆಯ ವ್ಯಾಪ್ತಗೆ ಭೀಮಳ್ಳಿ, ಉದನೂರು ಸೇರಿದಂತೆ ಸುತ್ತಲಿನ ಗ್ರಾಮಗಳ ಸೇರ್ಪಡೆ ಬಗ್ಗೆಯೂ ಪಾಲಿಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಠರಾವು ಮಾಡಿ ಸರಕಾರಕ್ಕೆ ಕಳುಹಿಸಬೇಕು. ತಾವುಸರಕಾರದ ಹಂತದಲ್ಲಿ ಇದನ್ನು ಗಮನಿಸಿ ಸೂಕ್ತ ಕ್ರಮಗಳಿಗೆ ನೆರವು ನೀಡೋದಾಗಿಯೂ ಶಾಸಕ ಪಾಟೀಲ್‌ ಹೇಳಿದ್ದಾರೆ.

ಸಭೆಯಲ್ಲಿ ನಗರ ಪ್ರಗತಿಗಾಗಿ ಹೆಚ್ಚಿನ ಅನುದಾನ ತರಲು ತಾವು ಸಿದ್ಧವೆಂದು ಹೆಚ್ಚಿನ ಯೋಜನೆ, ನವೀನ ಯೋಜನೆ ರೂಪಿಸಿ ತಮಗೆ ಸಲ್ಲಿಸಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಪಾಲಿಕೆಯ ಅಧಿಕಾರಿಗಳಾದ ಆರ್‌ಪಿ ಜಾಧವ್‌, ಶಿವನಗೌಡ ಪಾಟೀಲ್‌, ವಲಯ ಆಯುಕ್ತರು, ಸಹಾಯಕ ಆಯುಕ್ತರು ಸೇರಿದಂತೆ ಪಾಲಿಕೆಯ ಎಲ್ಲಾ ಸಿಬ್ಬಂದಿ ಸಭೆಯಲ್ಲಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

6 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

6 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

6 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

22 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago