ಕಲಬುರಗಿ: ಇಲ್ಲಿನ ಜಿ.ಎಸ್.ಜಿ. ಸಂಗಿನಿ ಫೆÇೀರಂ ವತಿಯಿಂದ ಅ. 8ರಂದು ದೀವಾಳಿ ಮೇಳ ಆಯೋಜಿಸಲಾಗಿದೆ ಎಂದು ಸಂಗಿನಿ ಫೆÇೀರಂ ಅಧ್ಯಕ್ಷೆ ಡಾ.ಪ್ರಣೋತಿ ಕಾವೇರಿ, ಕಾರ್ಯದರ್ಶಿ ಲೀನಾ ಶಹಾ ತಿಳಿಸಿದರು.
ಕಳೆದ ಹತ್ತು ವರ್ಷಗಳಿಂದ ದೀವಾಳಿ ಮೇಳ ಆಯೋಜಿಸಲಾಗುತ್ತಿದ್ದು, ಮಹಿಳೆಯರು ತಮ್ಮ ಪ್ರತಿಭೆ ಹೊರ ಹಾಕಲು, ಮಹಿಳೆಯರಲ್ಲಿ ಸ್ವಾವಲಂಬಿ ಜೀವನ, ಆತ್ಮವಿಶ್ವಾಸ ಮೂಡಿಸಲು ವೇದಿಕೆ ಒದಗಿಸುವುದು ನಮ್ಮ ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಂಗಿನಿ ದೀವಾಳಿ ಮೇಳದಲ್ಲಿ ಮಹಿಳೆಯರು ಡ್ರೆಸ್ ಸ್ಟಾಲ್ ಗಳು, ಆಭರಣ ಸ್ಟಾಲ್ ಗಳು, ಗೃಹಲಂಕಾರ ವಸ್ತುಗಳು, ಅಡಿಗೆ ವಸ್ತುಗಳು, ಕಾಸ್ಮಟಿಕ್, ಆಹಾರ ಮತ್ರು ಇನ್ನೂ ಹಲವು ಬಗೆಯ ಸ್ಟಾಲ್ ಗಳನ್ನು ಪ್ರದರ್ಶಿಸುವ ಮೂಲಕ ಅನೇಕ ಮಹಿಳೆಯರು ತಮ್ಮ ವ್ಯಾಪಾರ ಪ್ರಾರಂಭಿಸಿದ್ದಾರೆ. ಈಗ ಅವರು ತಮ್ಮ ವ್ಯವಹಾರದಲ್ಲಿ ಪ್ರವರ್ಧನಮಾನಕ್ಕೆ ಬಂದಿದ್ದಾರೆ ಎಂದು ತಿಳಿಸಿದರು.
ಪ್ರತಿ ವರ್ಷ 2000ಕ್ಕೂ ಹೆಚ್ಚು ಗ್ದಾಹಕರು ಈ ಮೇಳಕ್ಕೆ ಭೇಟಿ ನೀಡುತ್ತಾರೆ. ಈ ಮೇಳದಲ್ಲಿ ಕಲಬುರಗಿ ಮಹಿಳಾ ಪ್ರದರ್ಶನವಲ್ಲದೆ ಸೊಲ್ಲಾಪುರ, ರಾಯಚೂರು, ಸಾಂಗ್ಲಿ, ಹೈದರಾಬಾದ್ ಮುಂತಾದ ಸ್ಥಳಗಳಿಂದ ಮಹಿಳೆಯರು ತಮ್ಮ ವಿಶೇಷ ಉತ್ಪನ್ನಗಳನ್ನು ಪ್ರದರ್ಶಿಸುತ್ತಾರೆ. ಗ್ರಾಹಕರು ಇದರ ಉಪಯೋಗ ಪಡೆಯುತ್ತಿದ್ದಾರೆ ಎಂದರು.
ಈ ಬಾರಿ 60 ಸ್ಟಾಲ್ ಗಳಿರಲಿದ್ದು, ಮೇಳದ ಲಾಭ ಪಡೆಯುವಮತೆ ಅವರು ಮನವಿ ಮಾಡಿದರು. ದೀಪ್ತಿ ಮೆಹತಾ, ರಿಹಾ ಕುಲಕರ್ಣಿ, ಸಪ್ನ, ರೂಪ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…