ಕಲಬುರಗಿ: ಇತ್ತೀಚಿಗೆ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯ ಪಧಾದಿಕಾರಿಗಳು ಆಗಮಿಸಿ ಜಿಲ್ಲಾ ಘಟಕಕ್ಕೆ ನೂತನ ಅಧ್ಯಕ್ಷರಾಗಿ ಪ್ರದೀಪ್ ಸಂಗಾ ಹಾಗೂ ಉಪಾಧ್ಯಕ್ಷರನ್ನಾಗಿ ನಾರಾಯಣರಾವ್ ಸಿಂಘಾಡೆ ಯವರನ್ನು ಬಹಿರಂಗ ಅಧಿವೇಶನದಲ್ಲಿ ಆಯ್ಕೆ ಮಾಡಿ ಹರ್ಷ ಉಂಟುಮಾಡಿದ್ದಾರೆ ಎಂದು ಸಪ್ತ ನೇಕಾರ ಸೇವಾ ಸಂಘದ ಕಚೇರಿಯಲ್ಲಿ ಶಾಲು ಹೊದಿಸಿ, ನೂಲಿನ ಹಾರ ಹಾಕಿ ಸನ್ಮಾನಿಸಲಾಯಿತು .
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ಸಂಘದ ಕಾರ್ಯಕಾರಿ ಸದಸ್ಯರು ಜಿಲ್ಲಾ ಮಟ್ಟದ ಒಕ್ಕೂಟಕ್ಕೆ ಅಧ್ಯಕ್ಷರಾಗಿ ಆಯ್ಕೆ ಗೊಂಡಿದ್ದು ತುಂಬಾ ಹರ್ಷಉಂಟಾಗಿದೆ ಎಂದರು. ಮೊದಲಿಗೆ, ಸರದಾರ ವಲ್ಲಬಾಯಿ ಪಟೇಲ ವೃತದಲ್ಲಿ ಸ್ಥಾಪನೆ ಗೊಂಡ ನೇಕಾರ ಸೇವಾ ಕೇಂದ್ರದ ಕಾರ್ಯಾಲಯಕ್ಕೆ ಪ್ರಪ್ರಥಮ ಬಾರಿಗೆ ಅಗಮಸಿದ ಪ್ರದೀಪ್ ಸಂಗಾ ರವರನ್ನು ಸೇವಾ ಸಂಘದ ಕಾರ್ಯಕಾರಿ ಸದಸ್ಯ ಡಾ. ಬಸವರಾಜ ಚನ್ನಾ ಸ್ವಾಗತಿಸಿದರು.
ಸಂಘದ ಉಪಾ ಅಧ್ಯಕ್ಷ ನಿವಾಸ ಬಲಪೂರ್ ಪ್ರಾಸ್ತಾವಿಕವಾಗಿ ಮಾತನಾಡಿ, ಯುವಕರು ಹಾಗೂ ಖ್ಯಾತ ಉದ್ದಮಿಗಳು ಅದ ಪ್ರದೀಪ್ ಸಂಗಾ ಅವರ ಆಯ್ಕೆಯಿಂದ ನೇಕಾರರ ಅಭೂಧ್ಯಯಕ್ಕೆ ಮುನ್ನಡಿ ಇಟ್ಟಂತಾಗಿದೆ ಎಂದರು. ಮಹಿಳಾ ಸದಸ್ಸೇ ಗೀತಾಂಜಲಿ ಮೈನಾಳೆ ಮಾತನಾಡಿ, ಪಾರಂಪರಿಕ ಸಾಮಾಜಗಳನ್ನು ಒಂದೇ ಅಡಿಯಲ್ಲಿ ತಂದು ಸಂಘಟಿಸಿದರೆ ಅಭಿವೃದ್ಧಿ ಹೊಂದಲು ಸಾಧ್ಯ ವಾಗುತದೆ ಅದನ್ನು ತಾವು ಗಂಭೀರವಾಗಿ ಪರಿಗಣಿಸಿ ಸಮಾಜ ಸೇವೆ ಮಾಡಲು ಕೋರುತೇನೆ ಎಂದರು.
ಕೊನೆಯಲ್ಲಿ ನ್ಯಾಯವಾದಿ ಜೇ. ವಿನೋದಕುಮಾರ ಮಾತನಾಡುತ್ತಾ, ಜಿಲ್ಲೆಯಲ್ಲಿ ಸಪ್ತ ನೇಕಾರ ಸಮಾಜಗಳು ಸಂಘಟಿತರಾಗಿ, ಆರ್ಥಿಕ ಮತ್ತು ರಾಜಕೀಯದಲ್ಲಿ ಛಾಪು ಮೂಡಿಸುತ್ತೀರಿ ಎಂದು ನಿಮ್ಮನ್ನು ಪೂರಕವಾಗಿ ಸಹಕರಿಸುತ್ತೆವೆ ಎಂದು ತಿಳಿಸುತ್ತಾ, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ವಂದಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ವಕೀಲರಾದ ರಾಜಗೋಪಾಲ ಭಂಡಾರಿ, ಸಂತೋಷ್ ಗುರುಮೀಟಕಲ, 2023 ರ. ದೇ.ದಾಸಿಮಯ್ಯ ಜಯಂತೋತ್ಸವ ಸಮಿತಿ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ರೇವಣಸಿದ್ದಪ್ಪ ಗಡ್ಡದ ಹಾಗೂ ಲಕ್ಷಿಕಾಂತ್ ಜೋಳದ ಇತರರು ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…