ಬಿಸಿ ಬಿಸಿ ಸುದ್ದಿ

ನನ್ನ ಮಣ್ಣು ನನ್ನ ದೇಶ ಅಭಿಮಾನ ಸರ್ವರಿಗೂ ಸಲ್ಲಬೇಕು

ಶಹಾಬಾದ: ದೆಹಲಿಯ ಕರ್ತವ್ಯ ಪಥದಲ್ಲಿ ಹುತಾತ್ಮರ ಗೌರವಾರ್ಥ ನಿರ್ಮಾಣವಾಗಲಿರುವ ಅಮೃತ ಉದ್ಯಾನವನ ಸ್ಥಳಕ್ಕೆ ನನ್ನ ಮಣ್ಣು ನನ್ನ ದೇಶ ಅಭಿಯಾನದ ಮೂಲಕ ಭಾರತದ ಪ್ರತಿ ಹಳ್ಳಿಯಿಂದ ಮಣ್ಣನ್ನು ಸಂಗ್ರಹಿಸಿ ಉದ್ಯಾನವನ ನಿರ್ಮಾಣ ಮಾಡಲಾಗುತ್ತಿದೆ. ನನ್ನ ಮಣ್ಣು ನನ್ನ ದೇಶ ಎಂಬ ಅಭಿಮಾನ ಸರ್ವರಿಗೂ ಸಲ್ಲಬೇಕು ಎಂದು ನಗರಸಭೆಯ ಪೌರಾಯುಕ್ತೆ ಪಂಕಜಾ ರಾವೂರ ಹೇಳಿದರು.

ಅವರು ಗುರುವಾರ ನಗರಸಭೆಯ ಮುಂಭಾಗದಲ್ಲಿ ಆಯೋಜಿಸಲಾದ ನನ್ನ ಮಣ್ಣು ನನ್ನ ದೇಶ ಅಭಿಯಾನದ ಅಮೃತ ಕಳಸಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಊರಿನ ಮಣ್ಣು ರಾಷ್ಟ್ರದ ರಾಜಧಾನಿಯಲ್ಲಿ ನಿರ್ಮಾಣಗೊಳ್ಳಲಿರುವ ಅಮೃತ ಉದ್ಯಾನವನ ಸ್ಥಳಕ್ಕೆ ಹೋಗುತ್ತಿರುವುದು ನಮ್ಮ ಊರಿನ ಎಲ್ಲರಿಗೂ ಸಂತಷದ ವಿಷಯವಾಗಿದೆ ಎಂದರು.

ನಗರಸಭೆಯ ಪರಿಸರ ಅಭಿಯಂತರ ಅಭಯಕುಮಾರ ಮಾತನಾಡಿ, ನನ್ನ ಮಣ್ಣು ನನ್ನ ದೇಶ’ ಅಭಿಯಾನವನ್ನು ದೇಶದ ಅಮೃತ ಮಹೋತ್ಸವದ ಅಂಗವಾಗಿ ವರ್ಷ ಪೂರ್ತಿ ಹಲವಾರು ಕಾರ್ಯಕ್ರಮಗಳ ಜೊತೆ ನನ್ನ ಮಣ್ಣು ನನ್ನ ದೇಶ ಅಭಿಯಾನದ ಅಂಗವಾಗಿ ಮಣ್ಣನ್ನು ಸಂಗ್ರಹಿಸಿ, ದೇಶದ ಏಕತೆಯನ್ನು ಸಾರುವ ಅಮೃತ ಉದ್ಯಾನದ ನಿರ್ಮಾಣಕ್ಕೆ ಬಳಕೆಗೆ ಮಾಡಲಾಗುತ್ತಿರುವುದು ನಮಗೆಲ್ಲರಿಗೂ ಸಂತಸದ ವಿಷಯ.ಇದರಿಂದ ಭಾವನಾತ್ಮಕವಾಗಿ ದೇಶದ ಬಗ್ಗೆ ಇರುವ ಭಕ್ತಿ ಗಟ್ಟಿಗೊಳ್ಳುತ್ತದೆ ಎಂದರು.

ನಗರಸಭೆಯ ಸದಸ್ಯ ಡಾ.ಅಹ್ಮದ್ ಪಟೇಲ್ ಮಾತನಾಡಿ, ಅಮೃತ್ ಮಹೋತ್ಸವ ಈ ಹೊತ್ತಿನಲ್ಲಿ ದೇಶದ ಸರ್ವತೋಮುಖ ಬೆಳವಣಿಗೆಗೆ ನಾವೆಲ್ಲರೂ ಟೊಂಕಕಟ್ಟಿ ಕೆಲಸ ಮಾಡಬೇಕು. ಅದೇ ರೀತಿ ದೇಶದ ಸುರಕ್ಷತೆಗೆ ಹೆಚ್ಚು ಒತ್ತು ನೀಡುವ ಕಾರ್ಯ ಆಗಬೇಕು.ಗಡಿ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡ ಸೈನಿಕರ ಮೇಲೆ ಗೌರವ ಭಾವನೆ ಮೂಡಬೇಕು. ಈ ದಿಸೆಯಲ್ಲಿ ಎಲ್ಲರ ಸಹಕಾರ ಅಗತ್ಯವಿದೆ ಎಂದರು.

ತಾಪಂ ಇಓ ಮಲ್ಲಿನಾಥ ರಾವೂರ, ಡಾ.ರಶೀದ್ ಮರ್ಚಂಟ್,ನಗರಸಭೆಯ ಸದಸ್ಯರಾದ ಮಲ್ಲಿಕಾರ್ಜುನ ವಾಲಿ,ಸಾಬೇರಾಬೇಗಂ,ಶರಣು ಪಗಲಾಪೂರ, ಸಿದ್ರಾಮ ಕುಸಾಳೆ, ವ್ಯವಸ್ಥಾಪಕ ಶರಣಗೌಡ ಪಾಟೀಲ, ಜೆಇಗಳಾದ ರಬ್ಬಾನಿ, ಸಿದ್ದಪ್ಪ ಸೋಮಪೂರೆ, ಕಂದಾಯ ನಿರೀಕ್ಷಕ ಸುರೇಶ, ಸಮುದಾಯ ಸಂಘಟನಾಧಿಕಾರಿ ರಘುನಾಥ ನರಸಾಳೆ, ನಾರಾಯಣ ರೆಡ್ಡಿ, ಆರೋಗ್ಯ ನಿರಕ್ಷಕರಾದ ಶಿವರಾಜ ಕುಮಾರ,ಮಹ್ಮದ್ ಮೈಹಿನೋದ್ದಿನ್, ಶಿವಾನಂದ ದ್ಯಾಮಗೊಂಡ, ಕರ ವಸೂಲಿಗಾರರು ಸೇರಿದಂತೆ ಪೌರಕಾರ್ಮಿಕರು ಹಾಜರಿದ್ದರು.

ಕಳಸಾ ಯಾತ್ರೆಯ ನಿಮಿತ್ತ ಕಳಸದಲ್ಲಿ ಮಣ್ಣ ಮತ್ತು ಅಕ್ಕಿಯನ್ನು ಹಾಕಲಾಯಿತು.ನಂತರ ನಗರದ ಮುಖ್ಯ ರಸ್ತೆಗಳಲ್ಲಿ ಜಾಥಾ ಕೈಗೊಳ್ಳಲಾಯಿತು. ಈ ನೆಲದ ಸಂಸ್ಕೃತಿಯ ಪಸರಿಸುವ ನಿಟ್ಟಿನಲ್ಲಿ ನಗರಸಭೆಯ ಎಲ್ಲಾ ಸಿಬ್ಬಂದಿ ವರ್ಗದವರು ಗ್ರಾಮೀಣ ಖಾದಿ ಉಡುಗೆ ತೊಡಿಗೆಗಳನ್ನು ಧರಿಸಿಕೊಂಡರೆ, ಮಹಿಳಾ ಪೌರಕಾರ್ಮಿಕರು ಇಲ್‍ಕಲ್ ಸೀರೆ ಧರಿಸಿದ್ದು ವಿಶೇಷವಾಗಿತ್ತು.

emedialine

Recent Posts

ತೊಗರಿ ಮತ್ತು ಹತ್ತಿ ಬೆಳೆಗಳ ಸಸ್ಯ ಸಂರಕ್ಷಣಾ ತರಬೇತಿ 18ಕ್ಕೆ

ಕಲಬುರಗಿ; ಜಿಲ್ಲೆಯಲ್ಲಿ ಮುಂಗಾರು ಬೆಳೆಗಳಾದ ತೊಗರಿ, ಹತ್ತಿ, ಉದ್ದು, ಹೆಸರು ಮತ್ತು ಸೋಯಾಬಿನ್ ಬೆಳೆಯಲಾಗಿದ್ದು, ಇದರಲ್ಲಿ ಕಂಡು ಬರುವ ಹುಳು,…

16 mins ago

ಡೆಂಗ್ಯೂ ,ಝಿಕಾ, ಚಿಕನ್ ಗುನ್ಯಾ ತಡೆಗಟ್ಟಲು ಸರಕಾರಕ್ಕೆ ವೆಲ್ಫೇರ್ ಪಾರ್ಟಿ ಆಗ್ರಹ

  ಕಲಬುರಗಿ : "ಜಿಲ್ಲೆಯಲ್ಲಿ ಡೆಂಗಿ ಜ್ವರ ಹಾವಳಿ ದಿನೇ ದಿನೇ ವ್ಯಾಪಕವಾಗುತ್ತಿದೆ. ಝಿಕಾ ವೈರಾಣು ಸೋಂಕು, ಚಿಕನ್ ಗುನ್ಯಾ…

45 mins ago

ರಾಮ್ ರಾವ್ ಮಹಾರಾಜರ ಆದರ್ಶ ಮೈಗೂಡಿಸಿಕೊಳ್ಳಿ

ಚಿತ್ತಾಪುರ: ವಿಶ್ವ ರತ್ನ ನಡೆದಾಡುವ ಭಗವಂತ ಬಂಜಾರ ಸಮಾಜದ ಧರ್ಮಗುರುಗಳಾದ ಡಾ,ರಾಮ್ ರಾವ್ ಮಹಾರಾಜರು ಒಬ್ಬ ಮಹಾನ್ ಸರಳ ಸಜ್ಜನಿಕೆಯ…

50 mins ago

ಕಲಾವಿದ ಕಲ್ಪನೆಗಳ ಅಭಿವ್ಯಕ್ತಿಯೇ ಚಿತ್ರಕಲೆ: ಸಂತೋಷ್ ಹೆಗಡೆ

ಬೆಂಗಳೂರು:ಕಲಾವಿದನ ಕಲ್ಪನೆ ಮತ್ತು ಭಾವನೆಗಳ ಅಭಿವ್ಯಕ್ತಿಯೆ ಚಿತ್ರಕಲೆ,ಹಾಗೂ ಸಾಮಾನ್ಯವಾಗಿ ಒಬ್ಬ ಕಲಾವಿದ ಕಲೆಯಲ್ಲಿ ತೊಡಗಿಕೊಳ್ಳುವುದರಿಂದ ಅವರ ಯೋಚನೆ ಮತ್ತು ಭಾವನೆಗಳು…

3 hours ago

ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಿಸುವುದು ಶ್ಲಾಘನೀಯ

ಕಲಬುರಗಿ: ನಗರದ ಕಲಾಮಂಡಳದಲ್ಲಿ ಜಾÐನದೀಪ ನೃತ್ಯ ಕಲಾಸಂಸ್ಥೆ ರಿ ವತಿಯಿಂದ ಸಾಂಸ್ಕ್ರತಿಕ ಕಲಾಮಹೋತ್ಸ ಮತ್ತು ಎಸ್.ಎಸ್.ಎಲ್.ಸಿ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ…

4 hours ago

ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷರಾಗಿ ನಾಗರಾಜ ಭಂಕಲಗಿ ಅವಿರೋಧ ಆಯ್ಕೆ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ: ಪಟ್ಟಣದ ಶರಣ ಬಸವೇಶ್ವರರ ದೇವಸ್ಥಾನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಚಿತ್ತಾಪುರ ತಾಲೂಕು ಘಟಕದ…

5 hours ago