ಕಲಬುರಗಿ: ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2023-24 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಈ ವರ್ಷದ ವಿಷಯ “ವಿದ್ಯಾರ್ಥಿ ಯುವ ಜನರ ದೃಷ್ಟಿ ಗ್ರಾಮ ಭಾರತದಲ್ಲಿ ಸರ್ವೋದಯದ ಸೃಷ್ಟಿ” ಶಿರ್ಷಿಕೆಯಡಿಯಲಿ ಹಮ್ಮಿಕೊಳ್ಳಲಾಗಿದೆ, ಕಲಬುರಗಿ ಜಿಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿ ಪೂರ್ವ ಶಿಕ್ಷಣ) ಉಪ ನಿರ್ದೇಶಕರಾದ ಶಿವಶರಣಪ್ಪಾ ಮೂಳೆಗಾಂವ ಉದ್ಘಾಟಿಸಿ ಮಾತನಾಡುತ್ತಾ ಒಬ್ಬೊಬ್ಬರ ದೃಷ್ಟಿಕೊನ ಬೇರೆ ಬೇರೆಯಾಗಿರುತ್ತದೆ.
ಒಂದು ವಿಷಯದ ಸತ್ಯವನ್ನು ಅರಿತುಕೊಳ್ಳಬೇಕಾದರೆ ವಿದ್ಯಾರ್ಥಿಗಳು ಸೇವಾ ಮನೋಭಾವನೆಯ ಜೊತೆಗೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು, ಅನ್ಯಾಯದ ವಿರುದ್ಧ ಪ್ರತಿಭಟಿಸುವ ಮನೋಭಾವ ಬೇಳಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಡಾ. ಶರಣಗೌಡ ಪಾಟೀಲ ಸರ್ ಅವರು ಮಾತನಾಡುತ್ತಾ ಏಳು ದಿವಸಗಳ ಈ ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕು, ಹಲವಾರು ಹೊಸ ವಿಷಯಗಳು ನಿಮ್ಮ ಸಂಗಡಿಗರೊಂದಿಗೆ ಕಲಿತುಕೊಳ್ಳುವ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಈ ಶಿಬಿರ ನಿಮಗೆ ಅವಕಾಶಮಾಡಿಕೊಡುತ್ತದೆ ಎಂದು ಹೇಳಿದರು.
ಎನ್.ಎನ್.ಎಸ್. ಯೋಜನಾಧಿಕಾರಿಗಳಾದ ಶ್ರೀದೇವಿ ಬಾವಿದೊಡ್ಡಿ, ಶಿಬಿರದ ಗುರಿ-ಉದ್ದೇಶಗಳನ್ನು ತಿಳಿಸುತ್ತಾ ಈ ಶಿಬಿರಕ್ಕೆ ಆಯ್ಕೆಯಾದ ನೀವುಗಳು ಅದೃಷ್ಟವಂತರಾಗಿರಿ, ಈ ಏಳು ದಿವಸಗಳ ಶಿಬಿರದಲ್ಲಿ ನನ್ನ ಜೊತೆಗೆ ಸಹಕರಿಸಿ, ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಹಿರಿಯ ಉಪನ್ಯಾಸಕರಾದ ಗುರುರಾಜ ಕುಲಕರ್ಣಿ ಎನ್.ಎಸ್.ಎಸ್. ಗೀತೆಯನ್ನು ಹಾಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಕಾಲೇಜಿನ ಪ್ರಾಚಾರ್ಯರಾದ ದೇವನಗಗೌಡ ಪಾಟೀಲ್ ಅವರು ಮಾನ್ಯ ಉಪನಿರ್ದೇಶಕರ ಹೇಳಿದ ವೈಚಾರಿಕತೆಯನ್ನು ರೂಡಿಸಿಕೊಂಡು, ಈ ವಿಶೇಷ ಶಿಬಿರದಲ್ಲಿ, ಶ್ರಮದಾನದ ಜೊತೆಗೆ ಜೀವನ ಪಾಠಗಳನ್ನು ಕಲಿತುಕೊಳ್ಳಬೇಕು, ನಿಮ್ಮ ಜೀವನದಲ್ಲಿ ಈ ವಿಶೇಷ ಶಿಬಿರದ ದಿನಗಳು ನೆನಪಿಟ್ಟುಕೊಳ್ಳುವಂತೆ ತಾವೇಲಾ ಭಾಗವಹಿಸಬೇಕು ಎಂದರು.
ವೇದಿಕೆಯ ಮೇಲೆ ಹಿರಿಯ ಉಪನ್ಯಾಸಕರಾದ ಸೂರ್ಯವಂಶಿ, ಎನ್. ಆರ್. ಕುಲಕರ್ಣಿ, ಸಹ ಸಂಯೋಜಕರಾದ ಜಯಶ್ರೀ ಬಿರಾದಾರ ಉಪಸ್ಥಿತರಿದರು. ನಾಗರತ್ನಾ ಇಂಡೆ ಕಾರ್ಯಕ್ರಮವನ್ನು ನಿರೂಪಿಸಿದರು, ರವೀಂದ್ರ ಸಜ್ಜಿ ಉಪನ್ಯಾಸಕರು ವಂದಿಸಿದರು. ದದ್ದಾಪೂರ ಬಡಾವಣೆಯ ನಾಗರಿಕರು, ವಿಶೇಷ ಶಿಬಿರಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರು ಹಾಜರಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…