ವಾಡಿ; ಹಳಕರ್ಟಿ ಗ್ರಾಮದಲ್ಲಿನ ಬಸವೇಶ್ವರ ಭಾವಚಿತ್ರಕ್ಕೆ ಆದ ಅಪಮಾನದ ವಿರುದ್ಧದ ಪ್ರತಿಭಟನೆಗೆ ರಾಜಕೀಯ ರೂಪ ಕೊಡುತ್ತಿರುವುದು ನಮಗೆ ಮತ್ತಿಷ್ಟು ನೊವುಂಟಾಗಿದೆ ಎಂದು ವೀರಶೈವ ಸಮಾಜದ ಯುವ ಮುಖಂಡ ಹಾಗೂ ಬಿಜೆಪಿ ತಾಲ್ಲೂಕು ಉಪಾಧ್ಯಕ್ಷ ವೀರಣ್ಣ ಯಾರಿ ಬೇಸರ ವ್ಯಕ್ತಪಡಿಸಿದರು.
ಸಂತರ ಶರಣರ ಘನತೆಗೆ ಹಾಗೂ ದೇಶದ ಐಕ್ಯತೆಗೆ, ಸಂವಿಧಾನದಕ್ಕೆ ದಕ್ಕೆ ತರುವಂತಹ ಯಾವುದೇ ವಿಷಯ ಬಂದರೇ ಅದನ್ನು ಹತ್ತಿಕ್ಕುವ ಹೋರಾಟದ ಮುಂಚೂಣಿಯಲ್ಲಿ ನಾವಿರುತ್ತೇವೆ. ಹಳಕರ್ಟಿಯ ಬಸವೇಶ್ವರ ಭಾವಚಿತ್ರಕ್ಕೆ ಆದ ಅಪಮಾನ ಇಡೀ ಮನುಕುಲಕ್ಕೆ ಅವಮಾನ ಎಸೆಗಿದಂತ್ತಾಗಿದೆ.
ಬಸವಣ್ಣನವರು ಜಾತ್ಯತೀತವಾದ ಸುಂದರ ಸಮಾನತೆಯ ವಿಶ್ವಭ್ರಾತೃತ್ವ ಸಮಾಜದ ನಿರ್ಮಾಣಕ್ಕೆ ಪಣ ತೊಟ್ಟವರು, ಜಾತಿ ಜಾತಿಗಳ ಧರ್ಮ ಧರ್ಮಗಳ ಹೆಸರಿನಲ್ಲಿ ನಡೆಯುತ್ತಿದ್ದ ಮಾನವ ಸಂಘರ್ಷದ ವಿರುದ್ಧ ಸಿಡಿದೆದ್ದ ಅವರು ಎಲ್ಲರೂ ನಮ್ಮವರೆ ಎಂಬ ಸಂದೇಶ ವಚನಗಳ ಮೂಲಕ ಇಡೀ ವಿಶ್ವಕ್ಕೆ ನೀಡಿದವರು.
ಅವರು ಪ್ರತಿಪಾದಿಸಿದ ಆದರ್ಶಗಳು ನಮಗೆ ಸದಾಕಾಲ ವಿಶ್ವಭ್ರಾತೃತ್ವಕ್ಕೆ ಬುನಾದಿ ಆಗವೆ. ಅಂತಹ ಸಾಮಾಜಿಕ ಹರಿಕಾರನಿಗೆ ಈ ರೀತಿ ಪದೇ ಪದೇ ಅಪಮಾನ ಅವರು ನಡೆದಾಡಿದ ನಾಡಿನಲ್ಲಿ ಆಗುತ್ತಿರುವುದು ವಿಷಾದನೀಯ. ಇಲ್ಲಿ ಪಕ್ಷಾತೀತವಾಗಿ,ಧರ್ಮಾತೀತವಾಗಿ ಇಡೀ ಮಾನವ ಸಮಾಜ ಇದನ್ನು ಖಂಡಿಸಿ,ಸಮಾಜದಲ್ಲಿ ಕೋಮು ಸೌಹಾರ್ದತೆ ಕೃತ್ಯ ಎಸೆಗುತ್ತಿರುವ ಕಿಡಿಗೇಡಿಗಳಿಗೆ ಶಿಕ್ಷೆ ವಿಧಿಸಲು ಬದ್ಧರಾಗಿ,ಇಂತಹ ಘಟನೆ ಮುಂದೆ ಯಾರು ಕನಸಲ್ಲೂ ಸಹ ಮಾಡದಂತೆ ಸಾರ್ವಜನಿಕವಾಗಿ ಶಿಕ್ಷೆಗೆ ಗುರಿಪಡಿಸಬೇಕು.
ಆದರೆ ಇಲ್ಲಿ ಕೇಲವರು ಇಂತಹ ಹೋರಾಟ ಹಮ್ಮಿಕೊಂಡಾಗ, ಹೋರಾಟದ ತೀವ್ರತೆಯನ್ನು ಕುಗ್ಗಿಸಲು, ಇದಕ್ಕೆ ರಾಜಕೀಯ ಬಣ್ಣ ಬಡಿದು ಅನ್ಯಾಯದ ವಿರುದ್ಧದ ಧ್ವನಿಯನ್ನು ದಮನ ಮಾಡಲು ನಿರತರಾಗಿದ್ದಾರೆ. ಇಲ್ಲಿ ಸ್ವಾರ್ಥಕ್ಕಾಗಿ ಯಾರು ಏನು ಬೇಕಾದರೂ ಮಾಡಿಕೊಳ್ಳಲಿ ನಾವು ತಲೆ ಕೆಡಿಸಿಕೊಳ್ಳುವುದಿಲ್ಲಾ, ಇಲ್ಲಿನ ಜನ ಪ್ರಬುದ್ಧರು ಅವರು ಸದಾ ನ್ಯಾಯದ ಪರ ಇರುವುದರಿಂದ ನಮ್ಮ ಅನ್ಯಾಯ ವಿರುದ್ಧದ ಹೋರಾಟ ನಿಲ್ಲುವುದಿಲ್ಲ ಎಂದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…