ಕಲಬುರಗಿ: ಆಟೊಗಳು ಸಾರಿಗೆ ಸಂಚಾರ ವ್ಯವಸ್ಥೆಯ ಕೊನೆಯ ಭಾಗವಾದರೂ ಅವುಗಳು ಸಂಚಾರ, ಜನ ಹಾಗೂ ವಸ್ತು ಸಾಗಣೆಯಲ್ಲಿ ರಸ್ತೆಯಲ್ಲಿ ಯಾವಾಗಲೂ ಮೊದಲ ಹಾಗೂ ಹಿರೊ ಸ್ಥಾನವನ್ನು ಪಡೆದಿವೆ.
ವಿಶ್ವದ ಹಾಗೂ ದೇಶದ ಯಾವುದೇ ಮೂಲೆಗೆ ಹೋದರೂ ಆಟೊಗಳು ಸಾರಿಗೆ ಸಂಚಾರದಲ್ಲಿ ಪ್ರಾತಿನಿಧ್ಯ ಪಡೆದಿರುತ್ತವೆ ಎಂಬುದು ನಿಮಗೆ ಹಾಗೂ ನಮಗೂ ತಿಳಿದ ವಿಷಯವೇ ಸರಿ.
ಕಲ್ಯಾಣದ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಶ್ರೀಕಲ್ಯಾಣ್ ಬಜಾಜ್ ಸಂಸ್ಥೆ ರಾಮಮಂದಿರದ ಬಳಿ 13 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಕಲ್ಯಾಣದ ಕರ್ನಾಟಕದ ಬೀದರ್, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಬಜಾಜ್ ಸಂಸ್ಥೆಯ ಆಟೋಗಳನ್ನು ಹಾಗೂ ಅದರ ಬಿಡಿಭಾಗಗಳನ್ನು ಮಾರಾಟ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಪ್ರಾಧಾನ್ಯತೆ ಪಡೆದಿದ್ದೇವೆ. ಅದಕ್ಕೆ ಮೂರು ಜಿಲ್ಲೆಗಳ ಜನರಿಗೆ ನಾವು ಯಾವಾಗಲೂ ಆಭಾರಿಯಾಗಿರುತ್ತೇವೆ.
ಕಳೆದ 13 ವರ್ಷಗಳಲ್ಲಿ ಸಾವಿರಾರು ಆಟೋಗಳನ್ನು ನಾವು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ಅವೆಲ್ಲವೂ ಸಾರಿಗೆ ಸಂಚಾರ ವ್ಯವಸ್ಥೆಯ ಜತೆ ಮೂರು ಜಿಲ್ಲೆಗಳ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿ, ಮಾನಸಿಕ ಹಾಗೂ ಕೌಟುಂಬಿಕ ಬಲ ತುಂಬುವಲ್ಲಿ ಸಾಕಷ್ಟು ಶ್ರಮ ವಹಿಸಿದೆ. ಬಜಾಜ್ ಆಟೋಗಳು ಮಾರುಕಟ್ಟೆಯ ಲೀಡರ್ ಎಂದೇ ಹೆಸರು ಪಡೆದಿವೆ. ಕೇಂದ್ರ ಸರ್ಕಾರದ ಆತ್ಮನಿರ್ಬರ್ ಯೋಜೆನೆಗ ಅನುಗುಣವಾಗಿ ಬಜಾಜ್ ಸಂಸ್ಥೆ ಕೆಲಸ ಮಾಡುತ್ತಿದ್ದು, ಕಲಬುರಗಿ ಜನರ ಸಂಚಾರ ವ್ಯವಸ್ಥೆಯ ಆಶೋತ್ತರಗಳನ್ನು ಈಡೇರಿಸಲು ಶ್ರೀಕಲ್ಯಾಣ್ ಬಜಾಜ್ ಶ್ರಮಿಸುತ್ತಿದೆ. ಬಜಾಜ್ ಸಂಸ್ಥೆ ವಿಶ್ವದ 70 ದೇಶಗಳಲ್ಲಿ ತನ್ನ ಆಟೋ ಸೇವೆಗಳನ್ನು ಒದಗಿಸುತ್ತದೆ. ಇದು ಸಹ ಒಂದು ಹೆಗ್ಗಳಿಕೆ.
ಬಜಾಜ್ ಸಂಸ್ಥೆ ಎಲ್‍ಪಿಜಿ, ಪೆಟ್ರೋಲ್, ಡಿಸೇಲ್ ಹಾಗೂ ಸಿಎನ್‍ಜಿ ಆಟೋಗಳನ್ನು ಮಾರುಕಟ್ಟೆಗೆ ಈಗಾಗಲೇ ಬಿಡುಗಡೆ ಮಾಡಿದೆ. ಈ ಎಲ್ಲದರಲ್ಲೂ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬಂದಿದೆ. 1940ರಿಂದ ಬಜಾಜ್ ಸಂಸ್ಥೆ ಭಾರತದ ಅಭ್ಯುದಯಕ್ಕೆ ಕೆಲಸ ಮಾಡುತ್ತಿದ್ದು, ಆಯಾ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮುನ್ನುಗ್ಗುತ್ತಿದೆ.
ಈಗ ಕಲಬುರಗಿಯಲ್ಲಿ ಶ್ರೀಕಲ್ಯಾಣ್ ಬಜಾಜ್ ಮೂಲಕ ಹೊಸ ಕ್ರಾಂತಿಯನ್ನು ಮಾಡಲು ಸಜ್ಜಾಗುತ್ತಿದೆ. ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನದಲ್ಲಿ ಬಜಾಜ್ ಸಂಸ್ಥೆಯ ಶೂನ್ಯ ನಿರ್ವಹಣೆಯ ಎಲೆಕ್ಟ್ರಿಕ್ ಆಟೊಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಅದಕ್ಕೆ ನೀವೆಲ್ಲರೂ ಭಾಗಿಯಾಗಬೇಕು ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
ಏನಿದು ಶೂನ್ಯ ನಿರ್ವಹಣೆಯ ಆಟೊ: ಈಗ ಮಾರುಕಟ್ಟೆಯಲ್ಲಿರುವ ಆಟೋಗಳು ಸಂಪೂರ್ಣ ಪರಿಸರ ಮಾಲಿನ್ಯ ಮುಕ್ತವಾಗಿವೆ ಎಂದು ನಾವು ಹೇಳುವುದಿಲ್ಲ. ಆದರೆ, ಬಜಾಜ್ ಸಂಸ್ಥೆಯ ಆಟೋಗಳು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಪರಿಸರ ಮಾಲಿನ್ಯ ತಡೆಗೆ ಸಾಕಷ್ಟು ಕೆಲಸ ಮಾಡುತ್ತಿವೆ.
ಈಗ ಮಾರುಕಟ್ಟೆಗೆ ಬಿಡುಗಡೆ ಆಗುತ್ತಿರುವ ಆಟೋಗಳು ಸಂಪೂರ್ಣ ಪರಿಸರ ಮಾಲಿನ್ಯ ಮುಕ್ತವಾಗಿವೆ ಎಂದು ಘಂಟಾಘೋಷವಾಗಿ ಹೇಳಬಹುದು. ಬರೀ ಪರಿಸರ ಮಾಲಿನ್ಯ ತಡೆಯುವಲ್ಲಿ ಕೆಲಸ ಮಾಡುವುದಿಲ್ಲ. ಅವುಗಳು ಶೂನ್ಯ ನಿರ್ವಹಣೆಯ ಆಟೋಗಳು. ಒಬ್ಬರು ಆಟೊ ಚಾಲಕರು ದಿನಕ್ಕೆ ?100 ದುಡಿದರೆ ಗಾಡಿ ಖರ್ಚು ಸೇರಿ 40 ರೂಪಾಯಿ ವ್ಯಯವಾಗುತ್ತಿತ್ತು. ಆದರೆ, ಈಗ ಕಲ್ಯಾಣ ಕರ್ನಾಟಕಕ್ಕೆ ಕಾಲಿಡುತ್ತಿರುವ ಆಟೋಗಳು 100 ರೂಪಾಯಿಯಲ್ಲಿ 90 ರೂಪಾಯಿ ಮಾಲೀಕನಿಗೆ ಉಳಿಯುವಂತೆ ಮಾಡುತ್ತವೆ ಎಂಬುದರಲ್ಲಿ ಸಂಶಯವೇ ಇಲ್ಲ. ಇದು ಆರ್ಥಿಕ ಅಭಿವೃದ್ಧಿಗೆ ಬಜಾಜ್ ಕೊಡುತ್ತಿರುವ ಕೊಡುಗೆ.
ಯಾವುದು ಆಟೋ: ಅದೇ ಬಜಾಜ್ ಎಲೆಕ್ಟ್ರಿಕ ಆಟೋ ಅಥವಾ ಎಲೆಕ್ಟ್ರಿಕ್ ಇಟೆಕ್–9.0ಇವಿ ಆಟೋ. ಹೌದು ಕಲ್ಯಾಣದ ಕೇಂದ್ರ ರಸ್ತೆ ಮಾತ್ರವಲ್ಲದೇ ಬೀದರ್ ಹಾಗೂ ಯಾದಗಿರಿಗೆ ಬಜಾಜ್ ಆರ್‍ಇ ಆಟೋಗಳು ದಾಂಗುಡಿ ಇಡಲಿವೆ. ಇದು ಕಲ್ಯಾಣದ ಪರಿಸರವನ್ನು ಸ್ವಚ್ಛ ಮಾಡಲಿವೆ.
ಕೇವಲ 3 ಗಂಟೆ ಚಾರ್ಚ್ ಮಾಡಿದರೆ ಬರೋಬ್ಬರಿ 178 ಕಿ. ಮೀಟರ್ ಸಾಗುವ ಈ ಆಟೋಗಳಿಂದ ಕಲ್ಯಾಣ ಕರ್ನಾಟಕದಲ್ಲಿ ಆರ್ಥಿಕ ಉಳಿತಾಯ ಸಾಧ್ಯವಾಗುವುದಲ್ಲದೇ ಜನರ ಹಾಗೂ ಆಟೋ ಮಾಲೀಕರ ಜೀವನ ಮಟ್ಟ ಸುಧಾರಣೆಯಾಗುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಈ ಆಟೋಗಳು ಶೂನ್ಯ ನಿರ್ವಹಣೆಯಲ್ಲಿ ಕೆಲಸ ಮಾಡುತ್ತವೆ ಎಂಬುದಕ್ಕೆ ಬಜಾಜ್ ಸಂಸ್ಥೆಯೇ ಸಾಕ್ಷಿ ನೀಡುತ್ತದೆ.
ಬಜಾಜ್ ಎಲೆಕ್ಟ್ರಿಕ್ ಇಟೆಕ್–9.0ಇವಿ ಆಟೋ ಜನಪ್ರಿಯ ಬಜಾಜ್ ಆಟೋ ರಿಕ್ಷಾದ ಎಲೆಕ್ಟ್ರಿಕಲ್ ಆವೃತ್ತಿಯಾಗಿದೆ. ಇದು ಡಿಜಿಟಲ್ ಸಲಕರಣೆಗಳ ಕ್ಲಸ್ಟರ್ ಜೊತೆಗೆ ಸೊಗಸಾದ ವಿನ್ಯಾಸವನ್ನು ಹೊಂದಿದೆ. ಇದು 8.9 ಞW ಎಲೆಕ್ಟ್ರಿಕ್ ಮೋಟರ್ ಮತ್ತು 48 ಗಿ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‍ನಿಂದ ಚಾಲಿತವಾಗುತ್ತದೆ.
ಬ್ಯಾಟರಿ ಪ್ಯಾಕ್ ಅಧಿಕ ಬಿಸಿಯಾಗುವುದನ್ನು ತಡೆಯಲು ಸಕ್ರಿಯ ಕೂಲಿಂಗ್ ವ್ಯವಸ್ಥೆಯನ್ನು ಹೊಂದಿದೆ. ಆನ್‍ಬೋರ್ಡ್ ಚಾರ್ಜರ್ ಸಹ ಹೊಂದಿರುವುದು ಈ ವಾಹನದ ವೈಶಿಷ್ಟ.. ಬ್ಯಾಟರಿ ಪ್ಯಾಕ್ ಅನ್ನು 4.30 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಎಲೆಕ್ಟ್ರಿಕ್ ಆಟೊ ರಿಕ್ಷಾವು 178 ಕಿಮೀ ವ್ಯಾಪ್ತಿಯನ್ನು ಹೊಂದಿರುತ್ತದೆ ಮತ್ತು ಗಂಟೆಗೆ 45 ಕಿಮೀ ವೇಗವಾಗಿ ಚಲಿಸುತ್ತದೆ. ಇದು ಪುನರುತ್ಪಾದಕ ಬ್ರೇಕಿಂಗ್ ಸಿಸ್ಟಮ್, ಆಂಟಿ-ಥೆಫ್ಟ್ ವೈಶಿಷ್ಟ್ಯ ಮತ್ತು 3 ವರ್ಷಗಳ ವಾರಂಟಿಯಂತಹ ವೈಶಿಷ್ಟ್ಯಗಳನ್ನು ಸಹ ಹೊಂದಿರುತ್ತದೆ.
ಈ ವಾಹನದಲ್ಲಿ 8.9 ಕಿ. ವ್ಯಾಟ್ ಬ್ಯಾಟರಿ ಹೊಂದಿದ್ದು, ಒಂದು ಬಾರಿ ಚಾರ್ಚ್ ಮಾಡಿದರೆ 178 .ಕಿ. ಮೀಟರ್ ಚಲಿಸುತ್ತದೆ. ಮುಂಭಾಗವು ಸ್ಟ್ರಿಂಗ್ ಸಹಿತ ಶಾಕ್ ಅಬ್ಸ್‍ವರ್ರ್ (ಅಬ್‍ಸರ್ವರ್) ಹೊಂದಿದ್ದು, ಹಿಂಭಾಗವು ಹೆಲಿಕಲ್ ಸ್ಟ್ರಿಂಗ್‍ನೊಂದಿಗೆ ಸ್ವತಂತ್ರ ಆರ್ಮ್ ಹೊಂದಿದೆ. 12 ಇಂಚಿನ ರೇಡಿಯಲ್ ಟ್ಯೂಬ್ ಲೆಸ್ ಟೈರ್ ಸಹ ಹೊಂದಿದೆ. ಸಂವೇದನಾ ಕಾರ್ಯಕುಶಲತೆಯೊಂದಿಗೆ ಪುನರುತ್ಥಾನ ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ಇಳಿಜಾರುಗಳಲ್ಲಿ ಜಾರದಂತೆ ತಡೆಹಿಡಿಯುವ ಶಕ್ತಿಯನ್ನು ಹೊಂದಿದ್ದು, ಮೂರು ವರ್ಷಗಳ ಅಥವಾ 80 ಸಾವಿರ ಕಿ.ಮೀಟರ್ ವಾರಂಟಿಯನ್ನೂ ಈ ವಾಹನಕ್ಕೆ ಬಜಾಜ್ ನೀಡಿದೆ.
ಯಾವುದೇ ಸಮಯದಲ್ಲೂ ಎಲ್ಲಿ ಬೇಕಾದರೂ ಚಾರ್ಚ್ ಮಾಡಬಹುದಾದ ವ್ಯವಸ್ಥೆ ಇದೆ. ದೊಡ್ಡದಾದ ಬ್ಯಾಟರಿಯನ್ನೇ ತೆಗೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇಲ್ಲ. ಆನ್ ಬೋರ್ಡ್ ಚಾರ್ಜರ್ ವ್ಯವಸ್ಥೆ ಇದ್ದು, ಅತ್ಯಾಧುನಿಕ ಪಿಎಂಎಸ್ ಮೋಟಾರ್ ಒಳೊಂಡಿದೆ. ಐದು ವರ್ಷಗಳ ತನಕ ಬಜಾಜ್ ಸಂಸ್ಥೆ ಸತತ ಆಧ್ಯಯನ ನಡೆಸಿ ಈ ಆಟೋವನ್ನು ಮಾರುಕಟ್ಟೆಗೆ ಬಿಡುಗೆ ಮಾಡಿದೆ. ಕಲ್ಯಾಣದ ಮೂರು ಜಿಲ್ಲೆಗಳಲ್ಲಿ ಅಕ್ಟೋಬರ್ 19ರಂದು ಮಾರುಕಟ್ಟೆಗೆ ಬರಲಿದೆ.
ಟೈರ್‍ಗಳ ಸವಕಳಿ ಇಲ್ಲದೇ, ಪರಿಸರಕ್ಕೂ ಹಾನಿ ಮಾಡದೇ ಆತ್ಮನಿರ್ಭರ ಯೋಜನೆಗೆ ಅನುಗುಣವಾಗಿ ಈ ಆಟೋ ಕಲ್ಯಾಣದ ರಸ್ತೆಗಳಲ್ಲಿ ಸಂಚಾರ ಮಾಡಲಿದೆ. ಇಲ್ಲಿನ ಆರ್ಥಿಕ ಅಭಿವೃದ್ಧಿಗೆ ಹೊಸ ಮೈಲಿಗಲ್ಲು ನೀಡಲಿದೆ. ಹಿಂದೆ ಆಟೋಗಳನ್ನು ಖರೀದಿ ಮಾಡಲು ಪರವಾನಗಿ ಬೇಕಿತ್ತು. ಆದರೆ, ಈ ಆಟೋಗಳನ್ನು ಖರೀದಿ ಮಾಡಲು ಪರವಾನಗಿ ಬೇಕಿಲ್ಲ. ಹಿಂದೆ ಯೋಜನೆ ಹಾಗೂ ಬ್ಯಾಂಕ್ ಸಾಲದ ಅಡಿಯಲ್ಲಿ ಆಟೋ ಖರೀದಿ ಮಾಡುವ ವ್ಯವಸ್ಥೆ ಇತ್ತು.
ಬಿಡುಗಡೆ ಯಾವಾಗ: ಈ ಅತ್ಯಾಧುನಿಕ ಹಾಗೂ ಶೂನ್ಯ ನಿರ್ವಹಣೆಯ ಹಾಗೂ ಮಾಲಿನ್ಯ ಮುಕ್ತ ವಾಹನವು ಇದೇ ಗುರುವಾರ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಹಳೆ ಜೇವರ್ಗಿ ರಸ್ತೆಯಲ್ಲಿರುವ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 10.30ಕ್ಕೆ ಬಜಾಜ್ ಎಲೆಕ್ಟ್ರಿಕ್ ಇಟೆಕ್–9.0(ಇಣeಛಿ-9.0) ವಾಹನವು ಬಿಡುಗಡೆಯಾಗಲಿದೆ. ಅದಕ್ಕೆ ತಾವು ಸಾಕ್ಷಿಯಾಗಬೇಕು. ಈ ಸುದ್ದಿಯನ್ನು ತಮ್ಮ ಪತ್ರಿಕೆ, ಟಿ.ವಿ. ವೆಬ್‍ಸೈಟ್ ಹಾಗೂ ಬ್ಲಾಗ್‍ನಲ್ಲಿ ಬರೆದು, ವಿಡಿಯೊ ವರದಿ ಮಾಡಬೇಕು ಎಂದು ವಿನಂತಿಸುತ್ತೇವೆ.
ಆಹ್ವಾನ: ಕಲಬುರಗಿಯ ಹಳೆ ಜೇವರ್ಗಿ ರಸ್ತೆಯಲ್ಲಿರುವ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ವಾಹನ ಬಿಡುಗಡೆ ಆಗಲಿದೆ. ಈ ಕಾರ್ಯಕ್ರಮಕ್ಕೆ ಬರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…